Cracked Heels remedies : ಹಿಮ್ಮಡಿ ಬಿರುಕು ಸಮಸ್ಯೆಯಿಂದ ಬಳಲುತ್ತಿರುವವರು ಮನೆಯಲ್ಲಿ ತಯಾರಿಸಿದ ಹೀಲ್ ಕ್ರ್ಯಾಕ್ ಕ್ರೀಮ್ ಗಳನ್ನು ನಿಯಮಿತವಾಗಿ ಬಳಸಿದರೆ ಸುಲಭವಾಗಿ ಪರಿಹಾರ ಪಡೆಯಬಹುದು. ಇದಲ್ಲದೆ, ಇದರಲ್ಲಿರುವ ಗುಣಲಕ್ಷಣಗಳು ಉರಿಯೂತವನ್ನು ಸುಲಭವಾಗಿ ನಿವಾರಿಸುತ್ತದೆ. ಬನ್ನಿ ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ .
- ಹಿಮ್ಮಡಿ ಬಿರುಕು ಸಮಸ್ಯೆಯಿಂದ ಬಳಲುತ್ತಿದ್ದೀರಾ..?
- ಮನೆಯಲ್ಲಿಯೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
- ಯಾವುದೇ ವೆಚ್ಚವಿಲ್ಲದೆ ಸುಲಭವಾಗಿ ಈ ಸಮಸ್ಯೆಗೆ ಪರಹಾರ ಇಲ್ಲಿದೆ.
Cracked Heels : ಚಳಿಗಾಲದಲ್ಲಿ ಅನೇಕ ಜನರು ಚರ್ಮದ ಸಮಸ್ಯೆಯಿಂದ ಬಳಲುತ್ತಾರೆ. ಕೆಲವರಲ್ಲಿ ಪಾದಗಳು, ಹಿಮ್ಮಡಿಗಳು ಹವಾಮಾನದ ಪ್ರಭಾವಕ್ಕೆ ಒಳಗಾಗಿ, ಊತದಂತಹ ಸಮಸ್ಯೆಗಳನ್ನು ಎದುರಿಸುತ್ತವೆ. ಅದಕ್ಕಾಗಿಯೇ ಅನೇಕ ಜನರು ಶೀತ ಕಾಲದಲ್ಲಿ ಹಿಮ್ಮಡಿ ಬಿರುಕಿನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳಿಂದ ಶೀಘ್ರವೇ ಪರಿಹಾರ ಕಂಡುಕೊಳ್ಳಬೇಕು, ಇಲ್ಲದಿದ್ದರೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಹೌದು.. ಚಳಿಗಾಲದಲ್ಲಿ ಹಿಮ್ಮಡಿ ಬಿರುಕಿನಿಂದ ಕೆಲವರು ತೀವ್ರ ನೋವಿನಿಂದ ಬಳಲುತ್ತಾರೆ. ಆದರೆ ಇಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು ಮಾರುಕಟ್ಟೆಯಲ್ಲಿ ಸಿಗುವ ಕ್ರೀಂ ಹೆಚ್ಚು ಬಳಕೆಯಾಗುತ್ತದೆ. ಆದರೆ ಅವರು ಅವುಗಳನ್ನು ಬಳಸುವುದರಿಂದ ಯಾವುದೇ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಮನೆಯಲ್ಲಿ ತಯಾರಿಸಿದ ಕ್ರೀಂ ಬಳಸುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ಆಯುರ್ವೇದ ತಜ್ಞರು.
ಮನೆಯಲ್ಲಿ ಹೀಲ್ ಕ್ರ್ಯಾಕ್ ಕ್ರೀಮ್ ತಯಾರಿಸಲು ಬೇಕಾದ ಪದಾರ್ಥಗಳು
ಸಾಸಿವೆ ಎಣ್ಣೆ 2 ಟೀಸ್ಪೂನ್
ತೆಂಗಿನ ಎಣ್ಣೆ 2 ಟೀಸ್ಪೂನ್
ವ್ಯಾಸಲೀನ್ 1 ಟೀಸ್ಪೂನ್
ವಿಟಮಿನ್ ಇ ಕ್ಯಾಪ್ಸುಲ್ಗಳು
1/2 ಟೀಸ್ಪೂನ್ ಕರ್ಪೂರ
ತಯಾರಿಸುವ ವಿಧಾನ : ಒಂದು ಪಾತ್ರೆಯಲ್ಲಿ ಎರಡು ಚಮಚ ತೆಂಗಿನೆಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ. ಕರ್ಪೂರವನ್ನು ನುಣ್ಣಗೆ ಪುಡಿಮಾಡಿ ಅದರಲ್ಲಿ ಮಿಶ್ರಣ ಮಾಡಬೇಕು. ಈ ಮಿಶ್ರಣದಲ್ಲಿ ವ್ಯಾಸಲೀನ್ ಮತ್ತು ವಿಟಮಿನ್ ಇ ಕ್ಯಾಪ್ಸುಲ್ ಗಳನ್ನು ಕೂಡ ಬೆರೆಸಿ ಪಕ್ಕಕ್ಕೆ ಇಡಬೇಕು. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಗಾಜಿನ ಬಾಟಲಿಯಲ್ಲಿ ತುಂಬಿಸಿ ಮತ್ತು ರೆಫ್ರಿಜರೇಟರ್ನಲ್ಲಿ ಇರಿಸಿ. ಸಂಪೂರ್ಣವಾಗಿ ತಣ್ಣಗಾದ ನಂತರ ಬಿರುಕು ಬಿಟ್ಟ ಪಾದಗಳಿಗೆ ಹೆಚ್ಚಿರಿ.
Source : https://zeenews.india.com/kannada/health/home-made-remedies-for-cracked-heels-in-kannada-176093
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1