Arjun Tendulkar: ಮೊದಲ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಪ್ರದರ್ಶನ ಹೇಗಿತ್ತು? ಇಲ್ಲಿದೆ ಸಂಕ್ಷಿಪ್ತ ವಿವರ

IPL 2023: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದ ಮೂಲಕ ಅರ್ಜುನ್ ತೆಂಡೂಲ್ಕರ್ ಪಾದಾರ್ಪಣೆ ಮಾಡಿದ್ದರು. ಕಳೆದ 2 ಸೀಸನ್​ಗಳಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರೂ ಸಚಿನ್ ತೆಂಡೂಲ್ಕರ್ ಪುತ್ರನಿಗೆ ಆಡುವ ಬಳಗದಲ್ಲಿ ಅವಕಾಶ ದೊರೆತಿರಲಿಲ್ಲ.ಇದೀಗ ತವರು ಮೈದಾನದಲ್ಲೇ ಕಣಕ್ಕಿಳಿಯುವ ಭಾಗ್ಯ ಸಿಕ್ಕಿದೆ. ಅದರಂತೆ ಚೊಚ್ಚಲ ಪಂದ್ಯವಾಡಿದ ಅರ್ಜುನ್ ತೆಂಡೂಲ್ಕರ್​ಗೆ ಮೊದಲ ಓವರ್ ಎಸೆಯುವ ಅವಕಾಶ ನೀಡಲಾಗಿತ್ತು.ಅದರಂತೆ ಕೆಕೆಆರ್ ಆರಂಭಿಕ ಆಟಗಾರ ರಹಮನುಲ್ಲಾ ಗುರ್ಬಾಝ್​ಗೆ ಮೊದಲ ಎಸೆತ ಎಸೆದ ಅರ್ಜುನ್ ಯಾವುದೇ ರನ್ ನೀಡಿರಲಿಲ್ಲ. ಇನ್ನು 2ನೇ ಎಸೆತದಲ್ಲಿ 2 ರನ್ ನೀಡಿದರು. 3ನೇ ಎಸೆತದಲ್ಲಿ 1 ರನ್. ನಾಲ್ಕನೇ ಎಸೆತದಲ್ಲಿ ಲೆಗ್ ಬೈ 1 ರನ್. ಐದನೇ ಎಸೆತದಲ್ಲಿ ಯಾವುದೇ ರನ್ ನೀಡಿರಲಿಲ್ಲ. ಹಾಗೆಯೇ ಕೊನೆಯ ಎಸೆತದಲ್ಲಿ 1 ರನ್ ನೀಡಿದ್ದರು. ಅಂದರೆ ಅರ್ಜುನ್ ತೆಂಡೂಲ್ಕರ್ ತಮ್ಮ ಮೊದಲ ಓವರ್​ನಲ್ಲಿ ನೀಡಿದ್ದು ಕೇವಲ 5 ರನ್​ ಮಾತ್ರ.ಆದರೆ 2ನೇ ಓವರ್​ನಲ್ಲಿ ಅರ್ಜುನ್ ತೆಂಡೂಲ್ಕರ್ ದುಬಾರಿಯಾದರು. ಇನಿಂಗ್ಸ್​ನ 3ನೇ ಓವರ್​ ಎಸೆದ ಅರ್ಜುನ್ ಮೊದಲ 2 ಎಸೆತಗಳಲ್ಲಿ ಯಾವುದೇ ರನ್ ನೀಡಿರಲಿಲ್ಲ. ಆದರೆ ಮೂರನೇ ಎಸೆತವನ್ನು ವೈಡ್ ಎಸೆದರು. ಇದಾದ ಬಳಿಕ ವೆಂಕಟೇಶ್ ಅಯ್ಯರ್ 2 ರನ್ ಕಲೆಹಾಕಿದರು. 4ನೇ ಎಸೆತದಲ್ಲಿ ಯಾವುದೇ ರನ್ ನೀಡಿಲ್ಲ. 5ನೇ ಎಸೆತದಲ್ಲಿ ವೆಂಕಿ ಫೋರ್ ಬಾರಿಸಿದರೆ, 6ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಈ ಓವರ್​ನಲ್ಲಿ ಒಟ್ಟು 13 ರನ್​ ಬಿಟ್ಟು ಕೊಟ್ಟರು.ಅಂದರೆ ಚೊಚ್ಚಲ ಪಂದ್ಯದಲ್ಲಿ ಕೇವಲ 2 ಓವರ್​ ಬೌಲಿಂಗ್ ಮಾಡಿದ್ದ ಅರ್ಜುನ್ ತೆಂಡೂಲ್ಕರ್ ಒಟ್ಟು 18 ರನ್ ನೀಡಿದರೂ ಯಾವುದೇ ವಿಕೆಟ್ ಪಡೆದಿಲ್ಲ. ಹಾಗೆಯೇ ಆಲ್​ರೌಂಡರ್​ ಆಗಿದ್ದರೂ ಬ್ಯಾಟಿಂಗ್ ಮಾಡುವ ಅವಕಾಶ ದೊರೆತಿರಲಿಲ್ಲ. ಇದಾಗ್ಯೂ ಮುಂದಿನ ಪಂದ್ಯದಲ್ಲಿ ಅರ್ಜುನ್​ಗೆ ಅವಕಾಶ ನೀಡಲಿದ್ದಾರಾ ಕಾದು ನೋಡಬೇಕಿದೆ.ಇನ್ನು ಈ ಪಂದ್ಯದಲ್ಲಿ ಕೆಕೆಆರ್ 186 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 17.4 ಓವರ್​ಗಳಲ್ಲಿ ಚೇಸ್ ಮಾಡಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಅರ್ಜುನ್ ತೆಂಡೂಲ್ಕರ್ ಚೊಚ್ಚಲ ಗೆಲುವನ್ನು ಸಂಭ್ರಮಿಸಿದರು.

source https://tv9kannada.com/photo-gallery/cricket-photos/ipl-2023-arjun-tendulkar-fared-in-ipl-debut-as-mi-beat-kkr-kannada-news-zp-au50-557470.html

Leave a Reply

Your email address will not be published. Required fields are marked *