ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತಕ್ಕೆತಿ ಸ್ಮೃಮಂಧಾನ ನೆರವಾಗಿದ್ದರು. ಅವರು 127 ಎಸೆಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಹಿತ 117 ರನ್ಗಳಿಸಿ ನೆರವಾಗಿದ್ದರು. ಭಾರತ 265ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು.
![](https://samagrasuddi.co.in/wp-content/uploads/2024/06/image-134.png)
ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ಅವರ ಶತಕ ಮತ್ತು ಸ್ಪಿನ್ನರ್ ಆಶಾ ಶೋಭನಾ (Asha Shobhana) ಅವರ ಮಾಂತ್ರಿಕ ಬೌಲಿಂಗ್ ದಾಳಿ ನೆರವಿನಿಂದ ಭಾರತ ಮಹಿಳಾ ತಂಡವು ಭಾನುವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 143 ರನ್‌ಗಳ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಪಡೆದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 265/8 ಸ್ಪರ್ಧಾತ್ಮಕ ಸ್ಕೋರ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಭಾರತೀಯ ಸ್ಪಿನ್ನರ್‌ಗಳ ದಾಳಿಗೆ ಸಿಲುಕಿ 37.4 ಓವರ್‌ಗಳಲ್ಲಿ ಕೇವಲ 122ಕ್ಕೆ ಆಲೌಟ್ ಆಗುವ ಮೂಲಕ 143ರನ್‌ಗಳ ಸೋಲು ಕಂಡಿತು.
266ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಗೆ ರೇಣುಕಾ ಸಿಂಗ್ ಮೊದಲ ಓವರ್‌ನಲ್ಲಿ ಶಾಕ್ ನೀಡಿದರು. ನಾಯಕಿ ಲಾರಾ ವೊಲ್ವಾರ್ಡ್ಟ್ (4) ವಿಕೆಟ್ ಪಡೆದರು. ನಂತರ ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಕರ್ ಬೌಲಿಂಗ್‌ನಲ್ಲಿ ಕ್ರಮವಾಗಿ ತಜ್ಮಿನ್ ಬ್ರಿಟ್ಸ್ ಮತ್ತು ಅನ್ನೆಕೆ ಬಾಷ್ ವಿಕೆಟ್ ಪಡೆದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ಸ್ಕೋರ್ 10.1 ಓವರ್‌ಗಳಲ್ಲಿ 33ಕ್ಕೆ 3 ವಿಕೆಟ್ ಕಳೆದುಕೊಂಡಿತು.
ಸುನೆ ಲೂಸ್ (33) ಮತ್ತು ಮರಿಜಾನ್ನೆ ಕಾಪ್ (24) 39 ರನ್‌ಗಳ ಜೊತೆಯಾಟದೊಂದಿಗೆ ಆರಂಭಿಕ ಆಘಾತವನ್ನು ತಡೆದು ತಂಡವನ್ನು ಸುಸ್ಥಿತಿಗೆ ತಂದಿದ್ದರು. ಆದರೆ ಕಾಪ್ ವಿಕೆಟ್ ಪಡೆಯುವ ಮೂಲಕ ಶೋಭನಾ ಬ್ರೇಕ್ ತಂದುಕೊಟ್ಟರು. ನಂತರ ಯಾವೊಬ್ಬ ಆಟಗಾರ್ತಿ ಕೂಡ ಕ್ರೀಸ್ನಲ್ಲಿ ನಿಲ್ಲಲಾಗಲಿಲ್ಲ
ಶೋಭನಾಗೆ 4 ವಿಕೆಟ್
ಆರ್ಸಿಬಿ ಪರ ಆಡುವ ಶೋಭನಾ ತನ್ನ ಸ್ಪಿನ್ ಮಾಂತ್ರಿಕತೆ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದರು. ಇತರ ಬೌಲರ್‌ಗಳು ಸಹ ಗೆಲುವಿನಲ್ಲಿ ಅಮೂಲ್ಯ ಕೊಡುಗೆ ನೀಡಿದರು. ಶೋಭನಾ 8.4 ಓವರ್‌ಗಳಲ್ಲಿ 21ರನ್ ನೀಡಿ ನಾಲ್ಕು ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 6 ಓವರ್‌ಗಳಲ್ಲಿ 10 ರನ್ ನೀಡಿ 2 ವಿಕೆಟ್ ಪಡೆದರು. ರಾಧಾ ಯಾದವ್, ಪೂಜಾ ವಸ್ತ್ರಾಕರ್ ಹಾಗೂ ರೇಣುಕಾ ತಲಾ ಒಂದು ವಿಕೆಟ್ ಪಡೆದರು.
ಮಂಧಾನ ಮಿಂಚಿನ ಶತಕ
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತಕ್ಕೆ ಸ್ಮೃತಿ ಮಂಧಾನ ಶತಕ ಸಿಡಿಸಿ ನೆರವಾದರು. ಮಂದಾನ 127 ಎಸೆಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಹಿತ 117 ರನ್‌ಗಳಿಸಿದರೆ, ದೀಪ್ತಿ 48 ಎಸೆತಗಳಲ್ಲಿ 37 ರನ್ ಹಾಗೂ ಪೂಜಾ ವಸ್ತ್ರಾಕರ್ 42 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ 265ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿಸಲು ನೆರವಾಗಿದ್ದರು.