
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜೂ. 02 ನಗರದ ಚಿಕ್ಕಪೇಟೆಯ ಆನೆಬಾಗಿಲು ಹತ್ತಿರದ ನಂಜನಗೂಡಿನ ಶ್ರೀರಾಘವೇಂದ್ರಸ್ವಾಮಿಗಳವರ ಮಠದವತಿ ಯಿಂದ ಭಾನುವಾರ ಆಶ್ಲೇಷ ಬಲಿ ಹೋಮ ಹಾಗೂ ‘ದುರ್ಗಾದೀಪ ನಮಸ್ಕಾರ ಕಾರ್ಯಕ್ರಮ ನಡೆಸಲಾಯಿತು.
ಜೂ. 01ನೇ ಭಾನುವಾರ ಬೆಳಿಗ್ಗೆ ಅಶ್ಲೇಷ ಬಲಿಯ ಹೋಮ ನಡೆದಿದ್ದು, ಇದರಿಂದ ಶ್ರೀ ಮಾತಾಪಿತೃಗಳ ನಿಂದನೆ, ಮಾನಸಿಕ
ತೊಳಲಾಟ, ಕ್ಷಯರೋಗ, ಕುಷ್ಠರೋಗ, ತುರಿಕೆರೋಗ, ಚರ್ಮರೋಗ, ಸಮಸ್ತ ಅಂಗವಿಕಲತೆ, ಕಿವಿ ಸೋರುವುದು, ಸರ್ಪ ಹಿಂಸೆ,
ಸರ್ಪವಧ, ಅಪಘಾತದಿಂದ ಆಗಿರುವ ಮತ್ತು ತಿಳಿದು ತಿಳಿಯದೇ ಮಾಡಿದ ಸರ್ಪಹತ್ಯೆ, ಗುರುಶಾಪ, ಗುರುವಿನಿಂದ ಪೂರ್ವಜನ್ಮದ
ಹಾಗೂ ಈ ಜನ್ಮದಲ್ಲಿ ಆಗಿರುವ ಇನ್ನೂ ಹಲವಾರು ದೋಷಗಳು ಕಳೆದು ಮತ್ತು ನಾರಾಯಣ ಬಲಿಯ ದೋಷ ನಿವಾರಣೆ ಯಾಗಲಿದೆ.
ಸಂಜೆ ‘ದುರ್ಗಾದೀಪ ನಮಸ್ಕಾರ ಕಾರ್ಯಕ್ರಮ ನಡೆದಿದ್ದು, ಇದನ್ನು ಮಾಡುವುದರಿಂದ ವಿವಾಹ ವಿಳಂಬ ದೋಷ, ವಿದ್ಯಾ,
ಆತ್ಮಸ್ಥೆರ್ಯ, ರಾಜವಶ, ಯಶ, ಶತೃಭಾಧೆ ನಿವೃತ್ತಿ, ಸಕಲದೋಷ ಪರಿಹಾರ, ದೃಷ್ಟಿದೋಷ ಪರಿಹಾರ, ಲಕ್ಷ್ಮೀಪ್ರಾಪ್ತಿ, ನವಗ್ರಹ
ದೋಷ ಪರಿಹಾರ, ಪ್ರಯೋಗ ಅಭಿಚಾರ ದೋಷ ನಿವಾರಣೆ ಯಾಗಲಿದೆ.
ಈ ಕಾರ್ಯಕ್ರಮದಲ್ಲಿ ನೂರಾರು ದಂಪತಿಗಳು ಭಾಗವಹಿಸುವುದರ ಮೂಲಕ ಆಶ್ಲೇಷ ಬಲಿ ಹೋಮ ಹಾಗೂ ‘ದುರ್ಗಾದೀಪ
ನಮಸ್ಕಾರ ಕಾರ್ಯಕ್ರಮದ ಫಲವನ್ನು ಪಡೆದಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1