ಭುವನೇಶ್ವರ್ : ಒಡಿಶಾ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರನ್ನು ಎಎಸ್‌ಐ ಗುಂಡಿನ ದಾಳಿ ನಡೆಸಿದ್ದಾರೆ.
ಜಾರ್ ಸುಗುದ ಜಿಲ್ಲೆಯ ಬ್ರಜರಾಜನಗರದ ಗಾಂಧಿ ವೃತ್ತದಲ್ಲಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಸಭೆಯೊಂದರಲ್ಲಿ ಭಾಗವಹಿಸಲು ಹೊರಟಿದ್ದ ಸಚಿವರು ಕಾರಿನಿಂದ ಇಳಿದಾಗ ಪೊಲೀಸ್ (ASI) ಬಂದೂಕು ತೆಗೆದು ನಾಲ್ಕೈದು ಸುತ್ತು ಗುಂಡು ಹಾರಿಸಿದ್ದಾರೆ.
ಗುಂಡುಗಳು ಕಿಶೋರ್ ದಾಸ್ ಅವರ ಎದೆಗೆ ತಗುಲಿವೆ. ಕೂಡಲೇ ಅಧಿಕಾರಿಗಳು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಚಿವರ ಮೇಲೆ ಗುಂಡು ಹಾರಿಸಿದ ಎಎಸ್‌ಐ ಹೆಸರು ಗೋಪಾಲ್ ದಾಸ್ ಎಂದು ಉನ್ನತ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಅವರು ಸಮವಸ್ತ್ರದಲ್ಲಿದ್ದರು ಎನ್ನಲಾಗಿದೆ. ಸ್ವಂತ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಸಚಿವರ ಮೇಲೆ ಎಎಸ್‌ಐ ಏಕೆ ಗುಂಡು ಹಾರಿಸಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ. ಸಚಿವರಿಗೆ ಪೊಲೀಸ್ ಬೆಂಗಾವಲು ಇದ್ದರೂ ಈ ಘಟನೆ ನಡೆದಿರುವುದು ನೋಡಿದರೆ ಭದ್ರತಾ ಲೋಪ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
The post ಒಡಿಶಾ ಆರೋಗ್ಯ ಸಚಿವರ ಮೇಲೆ ಎಎಸ್‌ಐ ಗುಂಡಿನ ದಾಳಿ first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/hYsLP3p
via IFTTT