Asia Cup 2023: ಏಷ್ಯಾಕಪ್​ಗೆ 6 ತಂಡಗಳು ಫೈನಲ್

Asia Cup 2023: ಏಷ್ಯಾಕಪ್​ನ ಅರ್ಹತಾ ಸುತ್ತಿನ ಫೈನಲ್​ ಪಂದ್ಯದಲ್ಲಿ ಯುಎಇ ತಂಡವನ್ನು ಸೋಲಿಸಿ ಇದೇ ಮೊದಲ ಬಾರಿಗೆ  ನೇಪಾಳ ತಂಡವು ಏಷ್ಯಾಕಪ್​ಗೆ ಅರ್ಹತೆ ಪಡೆದುಕೊಂಡಿದೆ. ಇದರೊಂದಿಗೆ ಈ ಬಾರಿ ಏಷ್ಯಾಕಪ್ ಆಡುವ 6 ತಂಡಗಳು ಫೈನಲ್ ಆದಂತಾಗಿದೆ.ಅದರಂತೆ ಈ ಬಾರಿಯ ಏಷ್ಯಾಕಪ್​ನಲ್ಲಿ ಯುಎಇ ಬದಲು ನೇಪಾಳ ತಂಡವು ಕಣಕ್ಕಿಳಿಯಲಿದೆ. ಇನ್ನು ಈ ಬಾರಿಯ ಏಷ್ಯಾಕಪ್ ಆಯೋಜನೆಯ ಹಕ್ಕನ್ನು ಪಾಕಿಸ್ತಾನ್ ಹೊಂದಿದೆ. ಆದರೆ ಪಾಕ್​ನಲ್ಲಿ ಏಷ್ಯಾಕಪ್ ನಡೆದರೆ ಭಾರತ ತಂಡವು ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.ಹೀಗಾಗಿ ಏಷ್ಯಾಕಪ್​ ಅನ್ನು ಎರಡು ಸ್ಥಳಗಳಲ್ಲಿ ಆಯೋಜಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಚಿಂತಿಸಿದೆ. ಅದರಂತೆ ಭಾರತದ ವಿರುದ್ಧದ ಪಂದ್ಯಗಳು ಯುಎಇನಲ್ಲಿ ಆಯೋಜಿಸಿ, ಉಳಿದ ಪಂದ್ಯಗಳನ್ನು ಪಾಕಿಸ್ತಾನದಲ್ಲೇ ನಡೆಸಲು ಯೋಜನೆ ರೂಪಿಸಲಾಗಿದೆ.ಹಾಗೆಯೇ ಈ ಬಾರಿಯ ಏಷ್ಯಾಕಪ್ ವೇಳಾಪಟ್ಟಿ ಇನ್ನೂ ಕೂಡ ನಿಗದಿಯಾಗಿಲ್ಲ. ಇದಾಗ್ಯೂ ಸೆಪ್ಟೆಂಬರ್ ಮೊದಲ ವಾರದಲ್ಲಿ ಟೂರ್ನಿ ಶುರುವಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.ಇನ್ನು ಈ ಬಾರಿ ಕೂಡ ಭಾರತ-ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್​ನಲ್ಲಿದ್ದು, ಇದೀಗ ಅದೇ ಗ್ರೂಪ್​ಗೆ ನೇಪಾಳ ತಂಡ ಕೂಡ ಎಂಟ್ರಿ ಕೊಟ್ಟಿದೆ. ಅಂದರೆ ಇದೇ ಮೊದಲ ಬಾರಿಗೆ ನೇಪಾಳ ತಂಡಕ್ಕೆ ಏಷ್ಯಾದ ಬಲಿಷ್ಠ ಎರಡು ದೇಶಗಳ ವಿರುದ್ಧ ಆಡುವ ಅವಕಾಶ ದೊರೆಯುತ್ತಿದೆ. ಅದರಂತೆ ಏಷ್ಯಾಕಪ್ ಆಡುವ 6 ತಂಡಗಳು ಈ ಕೆಳಗಿನಂತಿವೆ.ಭಾರತ (ಗ್ರೂಪ್-A)ಪಾಕಿಸ್ತಾನ್ (ಗ್ರೂಪ್-A)ನೇಪಾಳ (ಗ್ರೂಪ್-A)ಶ್ರೀಲಂಕಾ (ಗ್ರೂಪ್-B)ಅಫ್ಘಾನಿಸ್ತಾನ್ (ಗ್ರೂಪ್-B)ಬಾಂಗ್ಲಾದೇಶ್ (ಗ್ರೂಪ್-B)

source https://tv9kannada.com/photo-gallery/cricket-photos/asia-cup-2023-teams-nepal-join-india-pakistan-for-asia-cup-2023-kannada-news-zp-569437.html

Leave a Reply

Your email address will not be published. Required fields are marked *