Asia Cup 2024: ಮಹಿಳಾ ಏಷ್ಯಾಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ.

ಮಹಿಳಾ ಟಿ20 ಏಷ್ಯಾಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಜುಲೈ 19 ರಿಂದ ಶ್ರೀಲಂಕಾದಲ್ಲಿ ಆರಂಭವಾಗಲಿರುವ ಈ ಬಾರಿಯ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ಎರಡು ಗ್ರೂಪ್​ಗಳಲ್ಲಿ ವಿಂಗಡಿಸಲಾಗಿದೆ. ಇನ್ನು ಶುಕ್ರವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಯುಎಇ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಲಿದ್ದು, ಇದೇ ದಿನ ನಡೆಯಲಿರುವ ಎರಡನೇ ಪಂದ್ಯದ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಅದು ಕೂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ.

ಏಷ್ಯಾಕಪ್​ ತಂಡಗಳ ಗ್ರೂಪ್:

  • ಗ್ರೂಪ್- A
  • ಭಾರತ
  • ಪಾಕಿಸ್ತಾನ್
  • ಯುಎಇ
  • ನೇಪಾಳ
  • ಗ್ರೂಪ್- B
  • ಶ್ರೀಲಂಕಾ
  • ಬಾಂಗ್ಲಾದೇಶ್
  • ಥೈಲ್ಯಾಂಡ್
  • ಮಲೇಷ್ಯಾ

ಹೇಗಿರಲಿದೆ ಪಂದ್ಯಾವಳಿ?

ಮೊದಲ ಸುತ್ತಿನಲ್ಲಿ ಗ್ರೂಪ್​​ಗಳಲ್ಲಿರುವ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಅಂದರೆ ಎ ಗ್ರೂಪ್​ನಲ್ಲಿ ಭಾರತ ತಂಡವು ಪಾಕಿಸ್ತಾನ್, ನೇಪಾಳ ಮತ್ತು ಯುಎಇ ವಿರುದ್ಧ ಒಂದೊಂದು ಪಂದ್ಯವನ್ನಾಡಲಿದೆ. ಇಲ್ಲಿ ಆಯಾ ಗ್ರೂಪ್​ಗಳಿಗೆ ಪಾಯಿಂಟ್ಸ್ ಟೇಬಲ್ ಇರಲಿದ್ದು, ಇದರಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಸೆಮಿಫೈನಲ್​ಗೇರಲಿದೆ.

ಅದರಂತೆ ಜುಲೈ 26 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಫೈನಲ್ ಪಂದ್ಯವು ಜುಲೈ 28 ರಂದು ಜರುಗಲಿದೆ. ಅಲ್ಲದೆ ಈ ಎಲ್ಲಾ ಪಂದ್ಯಗಳಿಗೆ ದಂಬುಲ್ಲಾದ ರಂಗಿರಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಮಹಿಳಾ T20 ಏಷ್ಯಾ ಕಪ್ ವೇಳಾಪಟ್ಟಿ:

ತಂಡಗಳುದಿನಾಂಕ ಸಮಯ (IST)
ಯುಎಇ vs ನೇಪಾಳಜುಲೈ 19, 20242:00 PM
ಭಾರತ vs ಪಾಕಿಸ್ತಾನ್ಜುಲೈ 19, 20247:00 PM
ಮಲೇಷ್ಯಾ vs ಥೈಲ್ಯಾಂಡ್ಜುಲೈ 20, 20242:00 PM
ಶ್ರೀಲಂಕಾ vs ಬಾಂಗ್ಲಾದೇಶ್ಜುಲೈ 20, 20247:00 PM
ಭಾರತ vs ಯುಎಇಜುಲೈ 21, 20242:00 PM
ಪಾಕಿಸ್ತಾನ್ vs ನೇಪಾಳಜುಲೈ 21, 20247:00 PM
ಶ್ರೀಲಂಕಾ vs ಮಲೇಷ್ಯಾಜುಲೈ 22, 20242:00 PM
ಬಾಂಗ್ಲಾದೇಶ್ vs ಥೈಲ್ಯಾಂಡ್ಜುಲೈ 22, 20247:00 PM
ಪಾಕಿಸ್ತಾನ್ vs ಯುಎಇಜುಲೈ 23, 20242:00 PM
ಭಾರತ vs ನೇಪಾಳಜುಲೈ 23, 20247:00 PM
ಬಾಂಗ್ಲಾದೇಶ್ vs ಮಲೇಷ್ಯಾಜುಲೈ 24, 20242:00 PM
ಶ್ರೀಲಂಕಾ vs ಥೈಲ್ಯಾಂಡ್ಜುಲೈ 24, 20247:00 PM
ಮೊದಲ ಸೆಮಿಫೈನಲ್ಜುಲೈ 26, 20242:00 PM
 ಎರಡನೇ ಸೆಮಿಫೈನಲ್ಜುಲೈ 26, 20247:00 PM
ಫೈನಲ್ಜುಲೈ 28, 20247:00 PM

Source : https://tv9kannada.com/sports/cricket-news/womens-t20-asia-cup-2024-full-schedule-cricket-news-in-kannada-zp-866829.html

Leave a Reply

Your email address will not be published. Required fields are marked *