“ಚಿತ್ರದುರ್ಗದಲ್ಲಿ ನವೆಂಬರ್ 23ರಂದು ಅಸ್ಮಿತ ಅಥ್ಲೆಟಿಕ್ ಲೀಗ್: 14 ಮತ್ತು 16 ವರ್ಷ ವಯೋಮಿತಿಯ ಬಾಲಕಿಯರ ಅಥ್ಲೆಟಿಕ್ ಸ್ಪರ್ಧೆಗಳು”

ಚಿತ್ರದುರ್ಗ ನ. 20

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಜಿಲ್ಲೆಯಲ್ಲಿ ನಡೆಯುವ ಮೊದಲ ಬಾರಿಗೆ ಅಸ್ಮಿತ ಅಥ್ಲೆಟಿಕ್ ಲೀಗ್ ಸ್ಪರ್ಧೆಯು 14 ವರ್ಷದ ಬಾಲಕಿಯರಿಗೆ ಹಾಗೂ 16 ವರ್ಷ ವಯೋಮಿತಿಯ ಬಾಲಕಿಯರಿಗಾಗಿ ಅಸ್ಮಿತ ಅಥ್ಲೆಟಿಕ್ ಲೀಗ್ ಸ್ಪರ್ಧೆಯು ಚಿತ್ರದುರ್ಗ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಆಶ್ರಯದಲ್ಲಿ ನ. 23ರ ಭಾನುವಾರ ವೀರವನಿತೆ ಒನಕೆಓಬವ್ವ ಕ್ರೀಡಾಂಗಣದಲ್ಲಿ ನಡೆಸಲಾಗುವುದೆಂದು ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ, ಕಾರ್ಯದರ್ಶಿ ಆರ್.ಬಿ. ಕಲ್ಲೇಶ್, ಖಜಾಂಚಿ ಸಿ.ಎಲ್. ನಿರಂಜನಮೂರ್ತಿ ತಿಳಿಸಿದ್ದಾರೆ.

14 ವರ್ಷ ಬಾಲಕಿಯರಿಗೆ ಟ್ರಯಾಫ್ರನ್-ಎ- 60ಮೀ, ಉದ್ದಜಿಗಿತ, 5ಮೀ, ಎತ್ತರಜಿಗಿತ ಟ್ರಯಾಫ್ರಾನ್- ಬಿ 60 ಮೀ, ಉದ್ದ, (ಅಂದಾಜು 5 ಮೀ, ಹಿಂಭಾಗ) 1 ಕೆಜಿ ಶಾಟ್ ಎಸೆದ ಟ್ರಯಥ್ಲಾನ್- ಸಿ – 60 ಮೀ, (ಲಾಂಗ್ ಜಂಪ್, ಅಂದಾಜು 5 ಮೀ,) 600 ಮೀ, ಕಿಡ್ಸ್ ಜಾವೆಲಿನ್ (ಅಂದಾಜು 5 ಮೀ,) 16 ವರ್ಷ ಬಾಲಕಿಯರಿಗೆ 60ಮೀ, 600ಮೀ, ಎತ್ತರಜಿಗಿತ, ಉದ್ದಜಿಗಿತ, (ಅಂದಾಜು 5ಮೀ,) 1ಕೆಜಿ ತಟ್ಟೆಎಸೆತ, (ಅಂದಾಜು 5ಮೀ,) ಗುಂಡುಎಸೆತ 3ಕೆಜಿ, 500 ಗ್ರಾಂ ಭರ್ಜಿಎಸೆತ (ಅಂದಾಜು 10 ಮೀ.)

ಈ ಕ್ರೀಡಾಕೂಟ್ಟದಲ್ಲಿ ಭಾಗವಹಿಸಲು ಇಚ್ಛಿಸುವ ಕ್ರೀಡಾಪಟುಗಳು ನ.23ರ ಬೆಳ್ಳÀಗೆ 9:30ಕ್ಕೆ ನಗರದ ವೀರವನಿತೆ ಒನಕೆಓಬವ್ವ ಕ್ರೀಡಾಂಗಣದಲ್ಲಿ ಹೆಸರನ್ನು ನೊಂದಾಹಿಸಬಹುದಾಗಿದೆ ಎಂದು ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷರಾದ ಫಾತ್ಯರಾಜನ್, ಉಪಾದ್ಯಾಕ್ಷರಾದ ಸಿ.ಎನ್. ಮಲ್ಲಿಕಾರ್ಜುನ್, ಎಂ.ಲೋಕೇಶ್ ಅಸ್ಮಿತ ಅಥ್ಲೆಟಿಕ್ ಲೀಗ್ಸ್ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಆರ್.ಬಿ. ಕಲ್ಲೇಶ್ ಸೆಲ್: 6362687476 ಸಂಪರ್ಕ ಮಾಡಬಹುದಾಗಿದೆ.

Leave a Reply

Your email address will not be published. Required fields are marked *