Free tomato deal: ಅರುಣ್ ಹೆಸರಿನ ಈ ಆಟೋ ಚಾಲಕ ಗ್ರಾಹಕರನ್ನು ಸೆಳೆಯಲು ಈ ವಿಶೇಷ ಆಫರ್ ಘೋಷಿಸಿದ್ದಾನೆ. ಟೊಮೇಟೊ ಟ್ರೆಂಡ್‍ಗೆ ಅನುಗುಣವಾಗಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡುತ್ತಿದ್ದಾನೆ.

ಹೈದರಾಬಾದ್: ದೇಶದಲ್ಲಿ ಟೊಮೇಟೊ ಬೆಲೆ ಏರಿಕೆಯು ದೊಡ್ಡ ಗದ್ದಲವನ್ನೇ ಸೃಷ್ಟಿಸಿತ್ತು. ದಿಢೀರ್ ಟೊಮೇಟೊ ಬೆಲೆ ಏರಿಕೆಯಿಂದ ಜನಸಮಾನ್ಯರು ಹೌಹಾರಿ ಹೋಗಿದ್ದರು. 250 ರೂ.ವರೆಗೆ ಟೊಮೇಟೊ ಬೆಲೆ ಏರಿಕೆ ಕಂಡಿದ್ದರಿಂದ ಜನಸಾಮಾನ್ಯರು ಹೈರಾಣಾಗಿದ್ದರು. ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಟೊಮೇಟೊಗೆ ಡಿಮ್ಯಾಂಡ್ ಹೆಚ್ಚಿತ್ತು.
ಕಳೆದ ಕೆಲವು ದಿನಗಳಿಂದ ಟೊಮೇಟೊ ಬೆಲೆ,ಕುಸಿತ ಕಂಡಿದ್ದು ಜನಸಾಮಾನ್ಯರು ನಿರಾಳರಾಗಿದ್ದಾರೆ. ಕೇಂದ್ರ ಸರ್ಕಾರ ಸಹ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಕೆಲವೆಡೆ ರಿಯಾಯಿತಿ ದರದಲ್ಲಿ ಟೊಮೇಟೊ ಮಾರಾಟುತ್ತಿದೆ. ಇದೆಲ್ಲದರ ನಡುವೆ ಹೈದಾರಾಬಾದ್‍ನಲ್ಲಿ ಆಟೋ ಚಾಲಕನೊಬ್ಬ ತನ್ನ ಗ್ರಾಹಕರಿಗೆ ವಿಶೇಷ ಆಫರ್ ಘೋಷಿಸಿದ್ದಾನೆ. ತನ್ನ ಆಟೋ ಹತ್ತಿದರೆ ಉಚಿತವಾಗಿ ಟೊಮೇಟೊ ನೀಡುವುದಾಗಿ ಘೋಷಿಸಿದ್ದಾನೆ.
ಅರುಣ್ ಹೆಸರಿನ ಈ ಆಟೋ ಚಾಲಕ ಗ್ರಾಹಕರನ್ನು ಸೆಳೆಯಲು ಈ ವಿಶೇಷ ಆಫರ್ ಘೋಷಿಸಿದ್ದಾನೆ. ಟೊಮೇಟೊ ಟ್ರೆಂಡ್‍ಗೆ ಅನುಗುಣವಾಗಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡುತ್ತಿದ್ದಾನೆ. ಪಂಜಾಬ್‌ನ ಚಂಡೀಗಢ ಮೂಲದ ಅರುಣ್ ಟೊಮೇಟೊ ಬೆಲೆ ಏರಿಕೆಯ ಟ್ರೆಂಡ್ ಅನುಸರಿಸಿದ್ದಾನೆ. ತಮ್ಮ ಆಟೋದಲ್ಲಿ ಪ್ರಯಾಣಿಸಿದ್ರೆ 1ಕೆಜಿ ಟೊಮೇಟೊವನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾನೆ.
ಕಳೆದ 12 ವರ್ಷಗಳಿಂದ ಆಟೋ ಚಾಲಕರಾಗಿ ದುಡಿಯುತ್ತಿರುವ ಆಟೋ ಚಾಲಕ ಅರುಣ್, ಈ ವಿಶೇಷ ಆಫರ್‍ನ ಫ್ಲೆಕ್ಸ್ ಮಾಡಿ ಆಟೋ ಹಿಂದೆ ಅಳವಡಿಸಿದ್ದಾರೆ. ತಮ್ಮ ಆಟೋದಲ್ಲಿ ಪ್ರಯಾಣಿಸುವ ಗ್ರಾಹಕರಿಗೆ ಉಚಿತವಾಗಿ ಕೆಜಿಗಟ್ಟಲೇ ಟೊಮೇಟೊ ನೀಡುತ್ತೇನೆಂದು ಹೇಳಿದ್ದಾನೆ. ಆದರೆ ಈ ಉಚಿತ ಟೊಮೇಟೊ ಪಡೆಯಲು ಗ್ರಾಹಕರಿಗೆ ಕೆಲವು ಷರತ್ತುಗಳನ್ನು ಪಾಲಿಸಬೇಕು. ಆಟೋದಲ್ಲಿ ಕನಿಷ್ಠ 5 ಬಾರಿ ಪ್ರಯಾಣಿಸಿದವರಿಗೆ ಮಾತ್ರ ಈ ಉಚಿತ ಟೊಮೇಟೊ ನೀಡುವುದಾಗಿ ಅರುಣ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅರುಣ್, ‘ನನಗೆ ಆಟೋವೊಂದೇ ಆದಾಯದ ಮೂಲವಾಗಿದೆ. ಇದರಿಂದಲೇ ನಾನು ಮತ್ತು ನನ್ನ ಕುಟುಂಬ ಬದುಕಬೇಕಿದೆ. ನನ್ನ ಕೈಲಾದಷ್ಟು ಬಡವರ ಸೇವೆ ಮಾಡಬೇಕೆಂಬುದು ನನ್ನ ಮಹದಾಸೆ. ಹೀಗಾಗಿಯೇ ಈ ವಿಶೇಷ ಘೋಷಣೆ ಮಾಡಿದ್ದೇನೆ, ಇದರಿಂದ ನನ್ನ ಆಟೋಗೆ ಹೆಚ್ಚಿನ ಗ್ರಾಹಕರು ಸಿಗತ್ತಾರೆ ಅಂತಾ ಹೇಳಿದ್ದಾರೆ. ಅರುಣ್ ಉಚಿತ ಟೊಮೇಟೊ ಮಾತ್ರವಲ್ಲ ತಮ್ಮ ಆಟೋದಲ್ಲಿ ಭಾರತೀಯ ಸೈನಿಕರಿಗೆ ಉಚಿತ ಸೇವೆ ನೀಡುತ್ತಿದ್ದಾರೆ. ಇದಲ್ಲದೆ ಅಪಘಾತಕ್ಕೆ ತುತ್ತಾದವರಿಗೂ ಆಟೋದಲ್ಲಿ ಉಚಿತ ಪ್ರಯಾಣ ಒದಗಿಸುತ್ತಿದ್ದಾರೆ.
Views: 0