
ಚಿತ್ರದುರ್ಗ,(ಜ.31) : 2023 ಜನವರಿ 23vರಂದು ರಂದು ಜರುಗಿದ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಆಟೋರಿಕ್ಷಾ ಪ್ರಯಾಣದರವನ್ನು ಮೊದಲ 1.5 ಕಿ.ಮೀ ಗೆ ರೂ.30/- ನಿಗಧಿಪಡಿಸಿ ನಂತರದ ಪ್ರತಿ 1 ಕಿಮೀ ಮತ್ತು ಭಾಗಶಃಕ್ಕೆ ರೂ.15/- ದರ ನಿಗಧಿಪಡಿಸಿ ಪರಿಷ್ಕರಿಸಲಾಗಿರುತ್ತದೆ.
ಪರಿಷ್ಕೃತ ದರಕ್ಕೆ ಅನುಗುಣವಾಗಿ ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಅವರು 2023ರ ಫೆಬ್ರವರಿ 1 ರಿಂದ 28 ರವರೆಗೆ ಚಾಲ್ತಿ ಆಟೋರಿಕ್ಷಾಗಳಿಗೆ ಮೀಟರ್ ಸತ್ಯಾಪನೆ ಮತ್ತು ಮುದ್ರೆ ಮಾಡಿಕೊಡುವ ಕಾರ್ಯವನ್ನು ಬೆಳಿಗ್ಗೆ 7 ಗಂಟೆಗೆ ಚಿತ್ರದುರ್ಗದ ಹಳೇ ಬೆಂಗಳೂರು ರಸ್ತೆ(ಜೈಲುರಸ್ತೆ)ಯಲ್ಲಿ ಹಮ್ಮಿಕೊಳ್ಳಲಾಗಿದೆ.
ಆಟೋರಿಕ್ಷಾ ಚಾಲಕರು ತಮ್ಮ ವಾಹನಗಳಿಗೆ ನೂತನ ದರಕ್ಕೆ ಅನುಗುಣವಾಗಿ ಕಡ್ಡಾಯವಾಗಿ ಆಟೋರಿಕ್ಷಾ ಮೀಟರ್‌ಗಳ ಸತ್ಯಾಪನೆ ಮತ್ತು ಮುದ್ರೆ ಮಾಡಿಸಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
The post ಚಿತ್ರದುರ್ಗದಲ್ಲಿ ಆಟೋರಿಕ್ಷಾ ದರಪರಿಷ್ಕರಣೆ : ಫೆ.1 ರಿಂದ 28 ರವರೆಗೆ ಆಟೋರಿಕ್ಷಾ ಮೀಟರ್‌ಗಳ ಸತ್ಯಾಪನೆ, ಮುದ್ರೆ ಕಾರ್ಯ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/K0UhcgS
via IFTTT
Views: 0