ಚಿತ್ರಕಲೆ ಸ್ಪರ್ಧೆಯಲ್ಲಿ: ಅನುಪಮ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೆ ಪ್ರಶಸ್ತಿ. 

ಚಿತ್ರದುರ್ಗ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯವರ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಿದ್ದರು ಅದರಲ್ಲಿ ಅನುಪಮ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್  ನ ದೀರಜ್ ಮತ್ತು ರುಕ್ಮಿಣಿ 9ನೇ ತರಗತಿ ವಿದ್ಯಾರ್ಥಿಗಳು 3ನೇ ಸ್ಥಾನ ಪಡೆದ್ದಿದ್ದಾರೆ. ಉಳಿದಂತೆ 12 ಜನ ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನ ಮತ್ತು ಭಾಗವಹಿಸುವಿಕೆ ಗಾಗಿ ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡರು ಇವರಿಗೆ ಸ್ಕೂಲ್ ನ ಅದ್ಯಕ್ಷರಾದ ಭಾಸ್ಕರ್, ಕಾರ್ಯದರ್ಶಿಗಳಾದ ರಕ್ಷಣ್ ಎಸ್ ಬಿ ಪ್ರಾಚಾರ್ಯರಾದ ಸಂಪತ್ ಕುಮಾರ್ ಸಿ ಡಿ ಮತ್ತು  ಬೋಧಕವರ್ಗದವರು  ವಿಜೇತ ಮಕ್ಕಳಿಗೆ ಅಭಿನಂದಿಸಿದರು.

Leave a Reply

Your email address will not be published. Required fields are marked *