ವಿಶ್ವದ ಅತಿದೊಡ್ಡ ದೇವಾಲಯಗಳಲ್ಲಿ ಅಯೋಧ್ಯೆ ‘ರಾಮ ಮಂದಿರ’ ಸೇರ್ಪಡೆ ; ಟಾಪ್ 5 ದೇಗುಲಗಳ್ಯಾವು ಗೊತ್ತಾ.?

ನವದೆಹಲಿ : 69 ಎಕರೆ ವಿಸ್ತೀರ್ಣದಲ್ಲಿ 3 ಮಹಡಿಗಳಲ್ಲಿ 161 ಅಡಿ ಎತ್ತರದಲ್ಲಿ 5 ಗೋಪುರಗಳಿರುವ ಈ ದೇವಾಲಯವನ್ನು ಜಗತ್ತಿನ ಬೇರೆಲ್ಲೂ ಕಾಣದ ರೀತಿಯಲ್ಲಿ ನಿರ್ಮಿಸಲಾಗಿದೆ. ಅಯೋಧ್ಯೆಯ ರಾಮಮಂದಿರದ ಈ ನಕ್ಷೆಯನ್ನ 37 ವರ್ಷಗಳ ಹಿಂದೆ ಮಾಡಲಾಗಿತ್ತು. ನಂತರ ಈ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನ ಮಾಡುವ ಮೂಲಕ ನಿರ್ಮಾಣ ಹಂತದಲ್ಲಿರುವ ದೇವಾಲಯವನ್ನ ದೊಡ್ಡದಾಗಿ ಮತ್ತು ಸುಂದರವಾಗಿ ನಿರ್ಮಿಸಲಾಗುತ್ತಿದೆ.

ಮಂದಿರ ನಿರ್ಮಾಣ ಪೂರ್ಣಗೊಂಡು ಭಕ್ತರಿಗೆ ಲಭ್ಯವಾದ್ರೆ, ಅಯೋಧ್ಯೆ ರಾಮಮಂದಿರ ವಿಶ್ವದಲ್ಲೇ ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಲಿದೆ. ಹಾಗಿದ್ರೆ, ನಮ್ಮ ದೇಶದಲ್ಲಿರುವ ಯಾವೆಲ್ಲಾ ದೇವಾಲಯಗಳು ವಿಶ್ವದ ಅತಿದೊಡ್ಡ ಹಿಂದೂ ದೇಗುಲಗಳು ಎಂದೆಸಿಕೊಂಡಿವೆ ಗೊತ್ತಾ.? ಮುಂದೆ ಓದಿ.

ದೆಹಲಿಯಲ್ಲಿರುವ ಅಕ್ಷರಧಾಮ ದೇವಾಲಯ : ಅಕ್ಷರಧಾಮ ಎಂದರೆ ದೇವರ ದಿವ್ಯ ವಾಸಸ್ಥಾನ. ಇದು ಭಕ್ತಿ, ಶುದ್ಧತೆ ಮತ್ತು ಶಾಂತಿಯ ಸ್ಥಳವೆಂದು ಪ್ರಸಿದ್ಧವಾಗಿದೆ. ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯ ಆಶ್ರಯದಲ್ಲಿ ಅಕ್ಷರಧಾಮ ದೇವಾಲಯದ ನಿರ್ಮಾಣವನ್ನ ಮಾಡಲಾಯಿತು. ದೇವಾಲಯವನ್ನ 59.3 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಅಕ್ಷರಧಾಮವು ಜಗತ್ತಿನ ಅತಿ ದೊಡ್ಡ ಹಿಂದೂ ದೇವಾಲಯಗಳ ಸಂಕೀರ್ಣ ಎಂಬ ಹೆಗ್ಗಳಿಕೆಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌’ನಲ್ಲಿ ಸ್ಥಾನ ಗಳಿಸಿದೆ. ಈ ದೇವಾಲಯದಲ್ಲಿ ಭಾರತದ ಪೌರಾಣಿಕ ನಾಗರಿಕತೆಯನ್ನ ಸಂಪೂರ್ಣವಾಗಿ ಕಾಣಬಹುದು.

ಶ್ರೀರಂಗನಾಥಸ್ವಾಮಿ ದೇವಾಲಯ : ತಮಿಳುನಾಡಿನ ತಿರುಚ್ಚಿಯಲ್ಲಿರುವ ಶ್ರೀ ರಂಗನಾಥ ದೇವಾಲಯವು ವಿಶ್ವದ ಎರಡನೇ ಅತಿದೊಡ್ಡ ದೇವಾಲಯವೆಂದು ಖ್ಯಾತಿ ಪಡೆದಿದೆ. ಇದು ದಕ್ಷಿಣ ಭಾರತದ ಅತ್ಯಂತ ಹಳೆಯ ವೈಷ್ಣವ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು 156 ಎಕರೆಗಳಲ್ಲಿ ಹರಡಿರುವ 4,116 ಮೀಟರ್ ಸುತ್ತಳತೆಯೊಂದಿಗೆ ಭಾರತದ ಅತಿದೊಡ್ಡ ದೇವಾಲಯವೆಂದು ತಿಳಿದುಬಂದಿದೆ. ವಿಷ್ಣುವಿಗೆ ಅತ್ಯಂತ ಪ್ರಿಯವಾದ 108 ದೇವಾಲಯಗಳಲ್ಲಿ ಒಂದಾಗಿದೆ. ತಮಿಳುನಾಡಿನ ತಿರುಚಿರಾಪಳ್ಳಿಯ ಶ್ರೀರಂಗಂ ಎಂಬ ಹಳ್ಳಿಯಲ್ಲಿ ರಂಗನಾಥ ನೆಲೆಸಿದ್ದಾನೆ.

ಚಿದಂಬರಂ : ತಮಿಳುನಾಡಿನಲ್ಲಿರುವ ಈ ಶಿವ ದೇವಾಲಯವನ್ನ ಚಿದಂಬರಂ ದೇವಾಲಯ ಎಂದೂ ಕರೆಯುತ್ತಾರೆ. ಚಿದಂಬರಂ ಎಂದರೆ ಆಕಾಶ. ಈ ದೇವಾಲಯದಲ್ಲಿ ಸ್ವಾಮಿಯು ನಟರಾಜ ರೂಪ, ಅನಿರ್ವಚನೀಯ ಚಂದ್ರಮೌಳೀಶ್ವರ ಸ್ಪಟಿಕ ಲಿಂಗರೂಪ ಮತ್ತು ದಿವ್ಯ ಸಾಂಗತ್ಯದ ನಿರಾಕಾರ ರೂಪ ಎಂಬ ಮೂರು ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಮೂರನೆಯ ರೂಪವೇ ಚಿದಂಬರ ರಹಸ್ಯ. ಈ ದೇವಾಲಯವನ್ನ 39 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು 79.6935 E ಡಿಗ್ರಿ ರೇಖಾಂಶದಲ್ಲಿದೆ. 108 ನೃತ್ಯ ಭಂಗಿಗಳ ಪುರಾತನ ಚಿತ್ರಣವು ಚಿದಂಬರಂನಲ್ಲಿ ಮಾತ್ರ ಕಂಡುಬರುತ್ತದೆ.

ಚೆನ್ನಕೇಶವ ದೇವಾಲಯ : ಬೇಲೂರಿನ ಪ್ರಸಿದ್ಧ ಚೆನ್ನಕೇಶವ ದೇವಾಲಯ ಐದನೇ ಸ್ಥಾನದಲ್ಲಿದೆ. ಚೆನ್ನಕೇಶವ ದೇವಾಲಯವು ಇತಿಹಾಸದಲ್ಲಿ ಉಳಿದಿರುವ ದೇವಾಲಯಗಳಲ್ಲಿ ಒಂದಾಗಿದೆ. ಇದು ಕರ್ನಾಟಕದ ಹಾಸನ ಜಿಲ್ಲೆಯಲ್ಲಿದೆ. ಈ ದೇವಾಲಯದ ಪ್ರದೇಶವನ್ನ ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ. ಈ ದೇವಾಲಯದ ಗಾಳಿಗೋಪುರದ ಎತ್ತರವು ಬಹಳ ಪ್ರಸಿದ್ಧವಾಗಿದೆ. ಈ ದೇವಾಲಯದಲ್ಲಿರುವ ವಿವಿಧ ಪ್ರಕಾರದ ಶಿಲ್ಪಗಳು ಜೀವಂತವಾಗಿವೆಯೇ ಎನ್ನುವ ಸಂದೇಹ ಮೂಡಿಸುತ್ತವೆ. ಚೆನ್ನಕೇಶವ ದೇವಾಲಯವನ್ನ ವಿಷ್ಣುವಿನನ್ನ ಪ್ರತಿಷ್ಠಾಪಿಸಲಾಗಿದ್ದು, ವಿಷ್ಣುವಿನ ಅವತಾರವಾದ ಚೆನ್ನಕೇಶವನ ಹೆಸರಲ್ಲಿ ಪೂಜಿಸಲಾಗುತ್ತದೆ.
ಅಣ್ಣಾಮಲೈಯಾರ್ ದೇವಾಲಯ : ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಈ ಶಿವ ದೇವಾಲಯವು ತನ್ನ ಬೃಹತ್ ಎತ್ತರದ ಕಂಬಗಳಿಗೆ ಹೆಸರುವಾಸಿಯಾಗಿದೆ. ದೇವಾಲಯವು 24.9 ಎಕರೆ ಪ್ರದೇಶದಲ್ಲಿ ಹರಡಿದೆ.

ಬೃಹದೀಶ್ವರ ದೇವಸ್ಥಾನ : ತಮಿಳುನಾಡಿನ ತಂಜಾವೂರಿನಲ್ಲಿರುವ ಈ ಶಿವನ ದೇವಾಲಯವು 1000 ವರ್ಷಗಳಿಗಿಂತಲೂ ಹಳೆಯದು. ಇದು 25 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ.
ಅಯೋಧ್ಯೆ ರಾಮಮಂದಿರ : 69 ಎಕರೆಯಲ್ಲಿ 3 ಮಹಡಿಗಳಲ್ಲಿ 161 ಅಡಿ ಎತ್ತರದಲ್ಲಿ 5 ಗೋಪುರಗಳೊಂದಿಗೆ ವಿಶ್ವದಲ್ಲಿ ಎಲ್ಲಿಯೂ ಇಲ್ಲದಂತೆ ದೇವಾಲಯವನ್ನ ನಿರ್ಮಿಸಲಾಗಿದೆ. ಅಯೋಧ್ಯೆಯ ರಾಮಮಂದಿರದ ಈ ನಕ್ಷೆಯನ್ನ 37 ವರ್ಷಗಳ ಹಿಂದೆ ಮಾಡಲಾಗಿತ್ತು. ನಂತರ ಈ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನ ಮಾಡುವ ಮೂಲಕ ನಿರ್ಮಾಣ ಹಂತದಲ್ಲಿರುವ ದೇವಾಲಯವನ್ನ ದೊಡ್ಡದಾಗಿ ಮತ್ತು ಸುಂದರವಾಗಿ ನಿರ್ಮಿಸಲಾಗುತ್ತಿದೆ. ಮಂದಿರ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಭಕ್ತರಿಗೆ ಮುಕ್ತವಾದರೆ ಅಯೋಧ್ಯೆಯ ರಾಮ ಮಂದಿರ ಜಗತ್ತಿನ ಮೂರನೇ ಅತಿ ದೊಡ್ಡ ದೇವಾಲಯವಾಗಲಿದೆ. 237 ಅಡಿ ಎತ್ತರದ ಈ ದೇವಾಲಯವನ್ನ 71 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ.

Source: https://m.dailyhunt.in/news/india/kannada/kannadanewsnow-epaper-kanowcom/vishvadha+atidodda+devaalayagalalli+ayodhye+raama+mandira+serpade+taap+5+degulagalyaavu+gotta+-newsid-n569511472?listname=topicsList&topic=for%20you&index=7&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

ಸಮಗ್ರಸುದ್ದಿ ವ್ಯಾಟ್ಸಪ್ ಗ್ರೂಪ್ ಗೆ ಸೇರಲು ಈ ಕೆಳಗಿನ ಲಿಂಕ್ ಒತ್ತಿ

https://chat.whatsapp.com/KnDIfiBURQ9G5sLEJLqshk

Leave a Reply

Your email address will not be published. Required fields are marked *