SURYA TILAK : ಅಯೋಧ್ಯಾಧೀಶ ಶ್ರೀರಾಮನ ಹಣೆಯ ಮೇಲೆ ‘ಸೂರ್ಯ ತಿಲಕ’ ಬೆಳಗಿತು. ನೆರೆದಿದ್ದ ಭಕ್ತರು ಜೈ ಶ್ರೀರಾಮ್ ಘೋಷಣೆಯ ಮೂಲಕ ಭಕ್ತಿಪರವಶತೆ ಮೆರೆದರು.

ಅಯೋಧ್ಯೆ (ಉತ್ತರ ಪ್ರದೇಶ) : ಇಂದಿನ ರಾಮ ನವಮಿಯ ಶುಭ ಸಂದರ್ಭದಲ್ಲಿ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನ ಹಣೆಯ ಮೇಲೆ ಸೂರ್ಯನ ಕಿರಣಗಳು ಸ್ಪರ್ಶಿಸುವ ಮೂಲಕ ‘ಸೂರ್ಯ ತಿಲಕ’ ಮೂಡಿದ ಅದ್ಭುತ ಕ್ಷಣವನ್ನು ಭಕ್ತರು ಕಣ್ತುಂಬಿಕೊಂಡರು.

ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಸೂರ್ಯರಶ್ಮಿ ರಾಮನ ಹಣೆಯ ಮೇಲೆ ತಿಲಕವಿಟ್ಟ ಬಳಿಕ ಅರ್ಚಕರು ಆರತಿ ಬೆಳಗಿ ಪೂಜೆ ಸಲ್ಲಿಸಿದರು. ರಘುರಾಮನ ಕಾಣಲು ಮಂದಿರಕ್ಕೆ ಬಂದಿದ್ದ ಭಕ್ತರು ಜೈಶ್ರೀರಾಮ್ ಎಂದು ಘೋಷವಾಕ್ಯ ಮೊಳಗಿಸಿದರು.
https://twitter.com/ANI/status/1908771316200767701
ರಾಮನವಮಿ ಹಿನ್ನೆಲೆ ಇಂದು ಬೆಳಗ್ಗೆಯಿಂದಲೇ ಅಯೋಧ್ಯೆಯಲ್ಲಿ ಲಕ್ಷಾಂತರ ಭಕ್ತರು ಜಮಾಯಿಸಿದ್ದರು. ಉತ್ತರಪ್ರದೇಶದ ಹಲವು ದೇವಾಲಯಗಳಲ್ಲಿ ದೊಡ್ಡ ಜನಸಮೂಹವೇ ನೆರೆದಿದೆ. ಅಧಿಕಾರಿಗಳು ವಿವಿಧ ವಲಯಗಳಲ್ಲಿ ಭದ್ರತೆ ಒದಗಿಸಿದ್ದಾರೆ. ಭಕ್ತರ ಸುರಕ್ಷತೆ ದೃಷ್ಟಿಯಿಂದ ಡ್ರೋನ್ ಕಣ್ಗಾವಲು ಹಾಕಲಾಗಿದೆ.
ವಿಶೇಷ ಉಪಕರಣದಿಂದ ಮೂಡಿದ ತಿಲಕ: ರಾಮ ನವಮಿಗೂ ಮೊದಲು ಅಯೋಧ್ಯಾಧೀಶ ರಾಮನ ಹಣೆಯ ಮೇಲೆ ಸೂರ್ಯರಶ್ಮಿ ಬೆಳಗಲು ವಿಶೇಷ ಉಪಕರಣವನ್ನು ಅಳವಡಿಸಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಸೂರ್ಯ ನೆತ್ತಿಯ ಮೇಲೆ ಬಂದಾಗ, ಕಿರಣಗಳು ಶ್ರೀರಾಮನ ತಲೆಯ ಮೇಲೆ ಬೆಳಕು ಹರಿಸುತ್ತವೆ. ಈ ವೇಳೆ ತಿಲಕವು ಪ್ರಕಾಶಮಾನವಾಗಿ ಬೆಳಗುತ್ತದೆ. ಇದಕ್ಕಾಗಿ ರೂರ್ಕಿಯ ಎಂಜಿನಿಯರ್‌ಗಳು ವಿಶೇಷ ಉಪಕರಣಗಳನ್ನು ಸಿದ್ಧಪಡಿಸಿದ್ದರು.
ದೇವಾಲಯದ ಗರ್ಭಗುಡಿಗೆ ಸೂರ್ಯನ ಬೆಳಕನ್ನು ಹರಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ವ್ಯವಸ್ಥೆಯು ಮುಂದಿನ 20 ವರ್ಷಗಳವರೆಗೆ ಇರಲಿದೆ. ಇದನ್ನು ಕಂಪ್ಯೂಟರ್‌ನಲ್ಲಿ ಪ್ರೋಗ್ರಾಮಿಂಗ್ ಮಾಡಲಾಗಿದೆ. ಪ್ರತಿ ವರ್ಷ ಬರುವ ರಾಮ ನವಮಿಯಂದು, ಇಡೀ ದೇಶ ಮತ್ತು ಪ್ರಪಂಚವು ಸೂರ್ಯನ ಕಿರಣಗಳಿಂದ ಬೆಳಗುವ ರಾಮನ ತಿಲಕವನ್ನು ಕಣ್ತುಂಬಿಕೊಳ್ಳಬಹುದು ಎಂದು ರಾಮಮಂದಿರ ಟ್ರಸ್ಟ್ ತಿಳಿಸಿತ್ತು.

ಪ್ರಧಾನಿ ಮೋದಿ ಶುಭಾಶಯ: ಇನ್ನು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ರಾಮನವಮಿಯ ಶುಭಾಶಯ ಕೋರಿದರು. “ರಾಮ ನವಮಿಯ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳು. ಭಗವಾನ್ ಶ್ರೀರಾಮನ ಜನ್ಮ ದಿನದ ಈ ಪವಿತ್ರ ಸಂದರ್ಭವು ನಮ್ಮೆಲ್ಲರ ಜೀವನದಲ್ಲಿ ಹೊಸ ಪ್ರಜ್ಞೆ ಮತ್ತು ಉತ್ಸಾಹ ತರಲಿ. ಬಲಿಷ್ಠ, ಸಮೃದ್ಧ ಮತ್ತು ಸಮರ್ಥ ಭಾರತದ ಸಂಕಲ್ಪಕ್ಕೆ ಹೊಸ ಶಕ್ತಿಯನ್ನು ಒದಗಿಸಲಿ. ಜೈ ಶ್ರೀ ರಾಮ್!” ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ETV Bharat
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1