“ನ.21ರಂದು ‘ದಿ ಟಾಸ್ಕ್’ ಭರ್ಜರಿ ಬಿಡುಗಡೆ: ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ, ಪ್ರೋತ್ಸಾಹಕ್ಕೆ ಬಿ.ಸೋಮಶೇಖರ್ ಕರೆ”

ಚಿತ್ರದುರ್ಗ, ನ 8

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ವಿಜಯ್‌ಕುಮಾರ್ ಮತ್ತು ರಾಮಣ್ಣ ಅವರು ನಿರ್ಮಿಸಿ ರಾಘು ಶಿವಮೊಗ್ಗ ಅವರ ನಿರ್ದೇಶನದ ದಿ ಟಾಸ್ಕ್ ಚಿತ್ರ ನವೆಂಬರ್ ೨೧ರಂದು ಭರ್ಜರಿಯಾಗಿ ಬಿಡುಗಡೆಯಾಗಲಿದ್ದು ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಿ ಎಂದು ಕಾಂಗ್ರೆಸ್ ಮುಖಂಡರು ಹಾಗೂ ರಾಜ್ಯ ಮಟ್ಟದ ಸಾವಯವ ಕೃಷಿ ಉತ್ಪನ್ನ ಸಮಿತಿಯ ಮಾಜಿ ಅಧ್ಯಕ್ಷರಾದ ಬಿ ಸೋಮಶೇಖರ್ ಅವರು ಹೇಳಿದರು.

ದಿ ಟಾಸ್ಕ್ ಚಿತ್ರದ ಪ್ರಚಾರಾರ್ಥವಾಗಿ ಚಿತ್ರದುರ್ಗದ ನಿವೃತ್ತ ಪೊಲೀಸ್ ನೌಕರರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು. ಎಲ್ಲರೂ ಸೇರಿ ಒಂದು ಒಳ್ಳೆಯ ಸಿನಿಮಾವನ್ನು ಮಾಡಿದ್ದಾರೆ. ಕಳೆದ ವಾರ ಹಾಡನ್ನು ಬಿಡುಗಡೆ ಮಾಡಿದ್ದರು. ಅದು ತುಂಬಾ ಜನಪ್ರಿಯತೆ ಗಳಿಸಿದೆ. ನಾನೂ ಸಹ ನೋಡಿದ್ದೇನೆ. ಈ ಚಿತ್ರ ಯಶಸ್ವಿಯಾಗಲಿದೆ ಎಂಬ ಭರವಸೆ ಇದೆ. ಚಿತ್ರದುರ್ಗದಲ್ಲಿ ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಶುಭ ಕೋರಿದರು.

ನಟ ಜಯಸೂರ್ಯ ಅವರು ಮಾತನಾಡಿ, ಒಂದು ಒಳ್ಳೆಯ ಪ್ರಯತ್ನ ಮಾಡಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ. ವಿಜಯ್ ಕುಮಾರ್ ಮತ್ತು ರಾಮಣ್ಣ ಅವರು ಅವಕಾಶ ನೀಡಿದ್ದಾರೆ. ಯಂಗ್ ಜನರಿಗೆ ಈ ಚಿತ್ರ ಮೆಚ್ಚುಗೆಯಾಗಲಿದೆ. ನಿರ್ದೇಶಕರ ರಾಘು ಶಿವಮೊಗ್ಗ ಹಾಗೂ ನಿರ್ಮಾಪಕರಿಗೆ ಧನ್ಯವಾದಗಳು ಎಂದರು.

ನಿರ್ದೇಶಕ ರಾಘು ಶಿವಮೊಗ್ಗ ಮಾತನಾಡಿ, ಸತ್ಯವನ್ನು ಹೇಳಿದರೆ ಸಮಾಜದಲ್ಲಿ ನಾಯಕನಾಗಬಹುದೆಂದು ಈ ಚಿತ್ರದಲ್ಲಿ ತೋರಿಸಲಾಗಿದೆ. ಇದು ಯುವ ಜನತೆಯನ್ನು ಮನದಲ್ಲಿ ಇಟ್ಟುಕೊಂಡು ಚಿತ್ರಣ ಮಾಡಲಾಗಿದೆ. ಇದರಲ್ಲಿ ನಾಲ್ಕು ಹಾಡುಗಳಿದ್ದು ಚಿತ್ರದಲ್ಲಿ ನಾಯಕಿ ಇಲ್ಲ, ಸತ್ಯವನ್ನು ಹೇಳಲು ಯಾರು ಸಹಾ ಹಿಂಜರಿಯಬಾರದೆಂಬುದು ಈ ಚಿತ್ರದ ಸಾರಾಂಶವಾಗಿದೆ ಕಳೆದ ೧೬ ವರ್ಷದಿಂದ ಚಿತ್ರ ನಿರ್ದೆಶಕನಾಗಿದ್ದು, ಇದು ನನ್ನ ಮೂರನೇ ಚಿತ್ರವಾಗಿದೆ ಎಂದರು.

ಇದೇ ನವೆಂಬರ್ ೨೧ರಂದು ಭರ್ಜರಿಯಾಗಿ ಬಿಡುಗಡೆಯಾಗಲಿರುವ ದಿ ಟಾಸ್ಕ್ ಚಿತ್ರವನ್ನು ವಿಜಯ್ ಕುಮಾರ್ ಮತ್ತು ರಾಮಣ್ಣ ಅವರು ನಿರ್ಮಿಸಿದ್ದು, ನಿರ್ದೇಶಕ ರಾಘು ಶಿವಮೊಗ್ಗ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಜಯಸೂರ್ಯ ಆರ್ ಆಜಾದ್, ಸಾಗರ್ ರಾಮ್, ಅಚ್ಯುತ್ ಕುಮಾರ್, ಶ್ರೀಲಕ್ಷ್ಮೀ, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಅದ್ಧೂರಿ ತಾರಾಗಣ ಈ ಚಿತ್ರದಲ್ಲಿದೆ. ಮುಖಂಡರಾದ ನರೇಂದ್ರ ಬಾಬು ಬಿಬಿಆರ್ ಜಯ್ಯಣ್ಣ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Views: 58

Leave a Reply

Your email address will not be published. Required fields are marked *