ಚಿತ್ರದುರ್ಗ ಅ. 14: ಸುಪ್ರಿಂಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿ ಮತ್ತು ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ ಮಾಡಿರುವ ಕಾಂತರಾಜ್ ಆಯೋಗದ ವರದಿಯನ್ನು ಡಿಸೆಂಬರ್ 6,2024ರ ಒಳಗೆ ಸರ್ಕಾರ ಜಾರಿ ಮಾಡದಿದ್ದರೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ವತಿಯಿಂದ ರಾಜ್ಯದಾದ್ಯಂತ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷರಾದ ಮಾರಸಂದ್ರ ಮುನಿಯಪ್ಪ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 40-50 ವರ್ಷಗಳಿಂದ ಪರಿಶಿಷ್ಟ ಜಾತಿಯ
ಪಟ್ಟಿಯನ್ನು ಅದರಲ್ಲಿನ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ವರ್ಗೀಕರಣ ಮಾಡಬೇಕೆಂದು ಒತ್ತಾಯಿಸಿ ಪಂಜಾಬ್, ಹರಿಯಾಣ,
ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲ. ಅವಕಾಶವಂಚಿತ ಪರಿಶಿಷ್ಟ ಜಾತಿಗಳು ಹೋರಾಡುತ್ತಲೇ ಇವೆ. ಅನೇಕ
ರಾಜ್ಯಗಳಲ್ಲಿ ಆಯಾ ಸರ್ಕಾರಗಳು ನೇಮಿಸಿದ್ದ ಆಯೋಗಗಳು ಆಯಾ ರಾಜ್ಯ ಸರ್ಕಾರಗಳಿಗೆ ವರದಿಗಳನ್ನು ಸಲ್ಲಿಸಿ, ವರ್ಗಿಕರಣಕ್ಕೆ
ಶಿಫಾರಸು ಮಾಡಿವೆ. ಆದರೆ. .ವಿ.ಚಿನ್ನಯ್ಯ ಗಿ/s ಆಂಧ್ರಪ್ರದೇಶ ಸರ್ಕಾರ ಪ್ರಕರಣದಲ್ಲಿ, “ವರ್ಗಿಕರಣದಿಂದಾಗಿ ಸಂವಿಧಾನದ
ಉಲ್ಲಂಘನೆಯಾಗುತ್ತದೆ” ಎಂದು ಸುಪ್ರಿಂಕೋರ್ಟ್ ತೀರ್ಪು ನೀಡಿದ ಪ್ರಯುಕ್ತ, ಈ ಶಿಫಾರಸುಗಳು ಜಾರಿಯಾಗಲಿಲ್ಲ. ಆದರೆ, ಆಗಸ್ಟ್
೧, ೨೦೨೪ ರಂದು ಏಳು ನ್ಯಾಯಧೀಶರ ಪೂರ್ಣಪೀಠವು “ಒಳಮೀಸಲಾತಿ ನೀತಿಯು ಸಂವಿಧಾನ ಬದ್ಧವಾಗಿದೆ” ಎಂದು ಹೇಳಿದ್ದಲ್ಲದೆ,
ಎಸ್‌ಸಿ ಮೀಸಲಾತಿಯಲ್ಲಿ ವರ್ಗಿಕರಣ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವನ್ನೂ ನೀಡಿತು. ಈ ತೀರ್ಪಿನ ವಿರುದ್ಧ ಕೆಲವರು
ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗಳನ್ನು ೪.೧೦.೨೦೨೪ ರಂದು ಸುಪ್ರಿಂಕೋರ್ಟ್ ವಜಾಮಾಡಿದೆ. ಅಂದರೆ, ಇಲ್ಲಿಯತನಕ ಇದ್ದಂತಹ
ಎಲ್ಲಾ ಅಡೆತಡೆಗಳು ಇದೀಗ ನಿವಾರಣೆಯಾಗಿವೆ. ಈಗ ರಾಜ್ಯ ಸರ್ಕಾರಗಳು ಯಾವುದೇ ಸಬೂಬು ಹೇಳದೆ ಒಳಮೀಸಲಾತಿಯನ್ನು
ಜಾರಿಗೆ ತರಲು ಕೂಡಲೇ ಕಾರ್ಯೋನ್ಮುಖವಾಗಬೇಕಿದೆ ಎಂದು ಒತ್ತಾಯಿಸಿದರು.
ಸುಪ್ರಿಂಕೋರ್ಟ್ ನ್ಯಾಯಾಧೀಶರುಗಳು ಒಳಮೀಸಲಾತಿ ತೀರ್ಪಿನಲ್ಲಿ ಜಾತಿಗಳ ದತ್ತಾಂಶವನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸಿ.
ವರ್ಗೀಕರಣವನ್ನು ಅನುಷ್ಠಾನಕ್ಕೆ ತರಬೇಕೆಂದು ಹೇಳಿದ್ದಾರೆ. ಇತರೆ ರಾಜ್ಯಗಳಲ್ಲಿ ಅಂತಹ ದತ್ತಾಂಶ ಸಂಗ್ರಹಣೆ ನಡೆದಿಲ್ಲದಿರಬಹುದು.
ಆದರೆ ಕರ್ನಾಟಕದಲ್ಲಿ ಸದಾಶಿವ ಆಯೋಗ ಮತ್ತು ೨೦೧೫ ರಲ್ಲಿ ಕಾಂತರಾಜ ಆಯೋಗವು ಅತ್ಯಂತ ವೈಜ್ಞಾನಿಕವಾಗಿ ಎಲ್ಲಾ ಜಾತಿಗಳ
ದತ್ತಾಂಶ ಸಂಗ್ರಹಿಸಿ ತನ್ನ ವರದಿಯನ್ನು ನೀಡಿದೆ. ಈ ವರದಿಯಲ್ಲಿ ಪ್ರತಿಯೊಂದು ಜಾತಿಯ/ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ
ವಿವರಗಳನ್ನು ನೀಡಲಾಗಿದೆ. ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಯಾವುದೇ ಒತ್ತಡಕ್ಕೂ ಮಣಿಯದೆ, ಕಾಂತರಾಜ ಆಯೋಗದ
ಈ ವರದಿಯನ್ನು ಅಂಗೀಕರಿಸಬೇಕೆಂದು ಆಗ್ರಹಿಸಲಾಯಿತು.
ನಾಲ್ವಡಿಕೃಷ್ಣರಾಜ ಒಡೆಯರ್ ಕಾಲದಲ್ಲಿ ನೇಮಿಸಲ್ಪಟ್ಟ ಮಿಲ್ಲರ್ ಆಯೋಗವು ೧೯೨೧ರಲ್ಲಿ ನೀಡಿದ ವರದಿಯ ಪ್ರಕಾರ ಬ್ರಾಹ್ಮಣೇತರ
ಜಾತಿಗಳಿಗೆ ೭೫% ಮೀಸಲಾತಿಯು ಜಾರಿಯಾಯಿತು. ಅಂದು ಆ ಮೀಸಲಾತಿಯ ಸಂಪೂರ್ಣ ಲಾಭ ಪಡೆದ ಒಕ್ಕಲಿಗ, ಅಂಗಾಯಿತ,
ರೆಡ್ಡಿ, ನಾಯ್ಡುಗಳು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಅಧಿಕ ಮತ್ತು ಅತ್ಯುನ್ನತ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ. ಆದರೆ, ಆ
ಮೀಸಲಾತಿಯ ಈ ಫಲಾನುಭವಿಗಳು ಇತರೆ ಹಿಂದುಳಿದ ವರ್ಗಗಳಿಗೆ, ಅಲ್ಪಸಂಖ್ಯಾತರಿಗೆ ಮತ್ತು ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿ
ನೀಡುವುದನ್ನು ವಿರೋಧಿಸುತ್ತಿದ್ದಾರೆ ಮತ್ತು ಜಾತಿ ಜನಗಣತಿಯ ವರದಿಯನ್ನು ಅಂಗೀಕರಿಸದಿರಲು ಮುಖ್ಯಮಂತ್ರಿಗಳನ್ನು
ಒತ್ತಾಯಿಸುತ್ತಿದ್ದಾರೆ. ಆದರೆ, ಅಹಿಂದ ವರ್ಗಗಳ ನಾಯಕರೆನಿಸಿಕೊಂಡಿರುವ ಸಿದ್ದರಾಮಯ್ಯನವರು ಈ ಪ್ರಬಲ ಜಾತಿಗಳ ಯಾವುದೇ
ಒತ್ತಡಕ್ಕೂ ಮಣಿಯದೆ. ಈ ತಿಂಗಳೊಳಗೆ ವಿಶೇಷ ಅಧಿವೇಶನವನ್ನು ಕರೆದು ಕಾಂತರಾಜ್ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ
ಮಂಡಿಸಿ ಅಂಗೀಕರಿಸಬೇಕು ಎಂದು ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದ್ದಾರೆ.
ಒಳಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಲು ಕರ್ನಾಟಕ ರಾಜ್ಯದಲ್ಲಿ. ಅತ್ಯಂತ ಸೂಕ್ತವಾದ ವಾತಾವರಣವು ನಿರ್ಮಾಣವಾಗಿದೆ.
ಒಳಮೀಸಲಾತಿಯ ತೀರ್ಪನ್ನು ಎಸ್‌ಸಿ ಪಟ್ಟಿಯೊಳಗಿನ ಎಲ್ಲಾ ಉಪಜಾತಿಗಳು ಸ್ವಾಗತಿಸಿವೆ. ಸಂವಿಧಾನ ಶಿಲ್ಪಿ ಬಾಬಾಸಾಹೇಬ್
ಅಂಬೇಡ್ಕರ್‌ರ ೬೮ನೇ ಪರಿನಿಬ್ಬಾಣದ ದಿನವಾದ ಡಿಸೆಂಬರ್ ೬, ೨೦೨೪ರೊಳಗೆ ಸುಪ್ರಿಂಕೋರ್ಟ್ ತೀರ್ಪನ್ನು ಜಾರಿಮಾಡಲು ಕ್ರಮ
ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.