ಚಿತ್ರದುರ್ಗ ಅ. 03: ಚಿತ್ರದುರ್ಗ ಜಿಲ್ಲೆಯ ಯುವಕ್ರೀಡಾ ಪ್ರತಿಭಾ ಶೋಧ ಹಾಗೂ ಜಿಲ್ಲೆಯ ಕ್ರೀಡಾಲೋಕವನ್ನು ವಿಸ್ತರಿಸುವ ಮತ್ತು ಉತ್ತೇಜಿಸುವ ಆಶಯದೊಂದಿಗೆ ಆ. 5 ರಿಂದ 7ರವರೆಗೆ ಕ್ರೀಡಾಕೂಟವು ನಡೆಯಲಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬ್ರಹನ್ಮಠದ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ತಿಳಿಸಿದರು.
ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಅ. 5 ರಿಂದ ನಡೆಯಲಿರುವ ಕ್ರೀಡಾ ಜಾತ್ರೆಯ ಮಾಹಿತಿಯನ್ನು ನೀಡಿದ ಶ್ರೀಗಳು,
ಜಯದೇವ ಜಗದ್ಗುರುಗಳು ಮಾಡದ ಕೆಲಸಗಳು ಇಲ್ಲ. ಪೂಜ್ಯರು ಅನೇಕ ಸಂಘ ಸಂಸ್ಥೆಗಳಿಗೆ ದಾನ ಮಾಡಿರುತ್ತಾರೆ. ಅವರು ಸುತ್ತು ಕಟ್ಟು ಎಂಬ ಮAತ್ರದAತೆ ಕಾರ್ಯನಿರ್ವಹಿಸಿರುತ್ತಾರೆ. ಜಯದೇವ ಜಗದ್ಗುರುಗಳ ಕಾಲವನ್ನು ಸುವರ್ಣ ಯುಗವೆಂದು ಕರೆಯುತ್ತಾರೆ.
ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 17ವರ್ಷದೊಳಗಿನ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಕಬಡ್ಡಿ, ಖೋಖೋ, ಹ್ಯಾಂಡ್‌ಬಾಲ್, ವಾಲಿಬಾಲ್ ಕ್ರೀಡೆಗಳು ಹಾಗೂ ಮಹಿಳೆಯರಿಗಾಗಿ ಹಗ್ಗ-ಜಗ್ಗಾಟ, ಮ್ಯೂಜಿಕಲ್ ಚೇರ್, ಮಡಿಕೆ ಹೊಡೆಯುವುದು, ಬಕೆಟ್ ಇನ್ ದ ಬಾಲ್, ಥ್ರೋಬಾಲ್, ಶರಣ-ಶರಣೆಯರ ವೇಷಭೂಷಣ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿ ಜಯದೇವ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಯಲ್ಲಿರುವವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಶ್ರೀಗಳ ಸತ್ಕಾರ್ಯಗಳನ್ನು ನಾಡಿಗೆ ತಿಳಿಸುವ ಕೆಲಸ ಮಾಡಲಾಗುವುದು.
ಅಕ್ಟೋಬರ್ 5 ರ ಬೆಳಿಗ್ಗೆ 10ಕ್ಕೆ ಜಯದೇವ ಕಪ್ ಕ್ರೀಡಾಕೂಟ ಅಂಗವಾಗಿ ಮೋಟಾರ್ ಬೈಕ್ ಜಾಥಾ ನಡೆಯಲಿದ್ದು, ನಗರಸಭೆ ಅಧ್ಯಕ್ಷೆ ಶ್ರೀಮತಿ ಸುಮಿತ ರಾಘವೇಂದ್ರ ಜಾಥಾವನ್ನು ಉದ್ಘಾಟಿಸುವರು. ಜಾಥಾವು ಕನಕ ವೃತ್ತದಿಂದ ಪ್ರಾರAಭವಾಗಿ ಬುರುಜನಹಟ್ಟಿ, ಚಿಕ್ಕಪೇಟೆ, ದೊಡ್ಡಪೇಟೆ, ರಂಗಯ್ಯನಬಾಗಿಲು, ಮದಕರಿ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಪ್ರಧಾನ ಅಂಚೆ ಕಚೇರಿ ವೃತ್ತ, ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟಾö್ಯಂಡ್, ಬಿ.ಡಿ.ರಸ್ತೆ, ಜೆ.ಎಂ.ಐ.ಟಿ. ವೃತ್ತದ ಮೂಲಕ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮುಕ್ತಾಯವಾಗಲಿದೆ ಎಂದರು.
ಮಧ್ಯಾಹ್ನ 4ಗಂಟೆಗೆ ಜಯದೇವ ಕಪ್ ಪಂದ್ಯಾವಳಿ ಅಂಗವಾಗಿ ಅಂಬೇಡ್ಕರ್ ವೃತ್ತದಲ್ಲಿ ಶ್ರೀ ಜಯದೇವ ಶ್ರೀಗಳ ಬೆಳ್ಳಿಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಪಥ ಸಂಚಲನ ಪ್ರಾರಂಭವಾಗಲಿದ್ದು, ಸಂಸದ ಗೋವಿಂದ ಎಂ.ಕಾರಜೋಳ ಅವರು ಪಥ ಸಂಚಲನವನ್ನು ಉದ್ಘಾಟಿಸುವರು.
ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಜಯದೇವ ಶ್ರೀಗಳ ಬೆಳ್ಳಿಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಪಥ ಸಂಚಲನವು ನಗರದ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾಗಿ ಬಸವಮಂಟಪ ರಸ್ತೆ, ರಂಗಯ್ಯನ ಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ, ಬುರುಜನಹಟ್ಟಿ ವೃತ್ತ,
ಸಂಗೊಳ್ಳಿ ರಾಯಣ್ಣ ವೃತ್ತ, ನೀಲಕಂಠೇಶ್ವರ ದೇವಸ್ಥಾನ, ಗಾಂಧಿ ವೃತ್ತ, ಬಿ.ಡಿ.ರಸ್ತೆ ಮೂಲಕ ಹಳೆಯ ಮಾಧ್ಯಮಿಕ ಶಾಲಾ ಆವರಣದವರೆಗೆ ನಡೆಯಲಿದೆ ಎಂದರು.
ಸಂಜೆ 6 ಗಂಟೆಗೆ ನಡೆಯುವ ಶ್ರೀ ಜಯದೇವ ಕಪ್ ಹೊನಲು ಬೆಳಕಿನ ಕ್ರೀಡಾಕೂಟವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಮತ್ತು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಸಮ್ಮುಖ ವಹಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ, ರಾಜ್ಯ ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮೊದಲಾದವರು ಭಾಗವಹಿಸುವರು ಎಂದು ತಿಳಿಸಿದರು.
ದಿ. 6. ರಂದು ಮಹಿಳಾ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳು ನಡೆಯಲಿವೆ. ದಿ. 7 ರಂದು ಸಂಜೆ 6.00 ಗಂಟೆಗೆ ಜಯದೇವ ಕಪ್ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯಲಿದ್ದು, ಶ್ರೀ ಶಿವಬಸವ ಗುರು ಮುರುಘರಾಜೇಂದ್ರ ಸ್ವಾಮಿಗಳು, ಅಥಣಿ ಸಮ್ಮುಖ ವಹಿಸುವರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಜೇತರಿಗೆ ಬಹುಮಾನ ವಿತರಣೆ ಮಾಡುವರು. ಮುಖ್ಯಅತಿಥಿಗಳಾಗಿ ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮುರುಳಿಧರ ಹಾಲಪ್ಪ, ಬಳ್ಳಾರಿ ಹನುಮಂತಪ್ಪ, ಡಾ. ವೈ. ರಾಮಪ್ಪ, ಉಮೇಶ ಕಾರಜೋಳ, ಎನ್.ಲೋಕೇಶ್‌ಗೌಡ, ಬಿ. ಜನಾರ್ದನಸ್ವಾಮಿ, ಜಿ.ಎಸ್. ಅನಿತ್, ಮಹಾಲಿಂಗಪ್ಪ ಕುAಚಿಗನಾಳ್, ಡಾ. ಸಿ.ವಿ.ಹರೀಶ್ ಪಾಲ್ಗೊಳ್ಳುವರು ಎಂದರು.
ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಮಾತನಾಡಿ, ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಸತಿ ಊಟವನ್ನು ನೀಡಲಾಗುವುದು. ಈಗಾಗಲೇ ಕ್ರೀಡಾಕೂಟದಲ್ಲಿ ಶೇ.90 ರಷ್ಟು ಕಾರ್ಯ ಮುಗಿದೆ, ಉಳಿದ ಶೇ.10 ರಷ್ಟು ಕಾರ್ಯ ಇಂದಿಗೆ ಮುಗಿಯಲಿದೆ. ಇದೊಂದು ಅರ್ಥ ಪೂರ್ಣವಾದ ಕ್ರೀಡಾಕೂಟವಾಗಿದೆ. ಅ. 5 ರಿಂದ ಪ್ರಾರಂಭವಾಗಿ 7ರವರೆಗೆ ನಡೆಯಲಿದೆ. ಇದರಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಕ್ರೀಡೆ ನಡೆಯಲಿದೆ ಎಂದು ತಿಳಿಸಿದರು.
ಕ್ರೀಡಾಕೂಟದ ಉಪಾಧ್ಯಕ್ಷರಾದ ಕೆ.ಸಿ.ನಾಗರಾಜ್ ಮಾತನಾಡಿ, ಈ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳ ಸುಮಾರು 58 ತಂಡಗಳು ಭಾಗವಹಿಸಲಿವೆ. ಈಗಾಗಲೇ ಕ್ರಿಕೇಟ್ ಪಂದ್ಯಾವಳಿ ಮುಗಿಯಲಿದೆ. ಕ್ರೀಡಾಕೂಟದ ಪ್ರಾರಂಭ ಹಾಗೂ ಮುಕ್ತಾಯ ದಿನದಂದು ಅರ್ಥ ಪೂರ್ಣವಾದ ವರ್ಣ ರಂಜಿತವಾದ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಜಯದೇವ ಶ್ರೀಗಳ ಜೀವನ ಚರಿತೆಯನ್ನು ಲೇಜರ್
ಮೂಲಕ ನೋಡುಗರಿಗೆ ನೀಡಲಾಗುತ್ತಿದೆ ಎಂದರು.
ಪತ್ರಿಕಾ ಗೋಷ್ಟಿಯಲ್ಲಿ ಕ್ರೀಡಾಕೂಟದ ಸಮಿತಿಯ ಅಧ್ಯಕ್ಷರಾದ ಶ್ರೀರಾಮ್, ಹನೀಫ್, ಮಂಜುನಾಥ್, ಪ್ರಕಾಶ್ ರಾಮ್ ನಾಯ್ಕ್, ಖುದ್ದಸ್, ವಿರೇಂದ್ರಕುಮಾರ್, ಪೈಲಟ್ ನಾಗರಾಜ್, ಫ್ರಕೃದ್ದಿನ್, ಗೊಪ್ಪೆ ಮಂಜುನಾಥ್, ಷಫಿವುಲ್ಲಾ, ಸೇರಿದಂತೆ ಇತರರು ಭಾಗವಹಿಸಿದ್ದರು.