
ದಾವಣಗೆರೆ : ನ. 18 : 7ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಅಂಗವಾಗಿ ಸೋಮವಾರ ಶ್ರೀಮತಿ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ವಿದ್ಯಾನಗರ, ದಾವಣಗೆರೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದ ಬಸವಪ್ರಭು ಸ್ವಾಮೀಜಿಗಳು ಮಾತನಾಡಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯು ಭಾರತೀಯ ಪರಂಪರೆಯ ಚಿಕಿತ್ಸೆಯಾಗಿದ್ದು ಇದು ಕೇವಲ ಪಾರ್ಶ್ವವಾಯು, ಸಯಾಟಿಕ, ಬೊಜ್ಜುತನ, ಸಂಧಿವಾತ ಇತ್ಯಾದಿ ದೀರ್ಘಕಾಲಿಕ ತೊಂದರೆಗಳನ್ನು ಸರಿಮಾಡುವ ಪದ್ಧತಿಯಾಗಿರದೆ, ರೋಗವು ಬರದಂತೆ ತಡೆಯುವ ಮತ್ತು ಆರೋಗ್ಯವನ್ನು ವೃದ್ಧಿಸುವ ಚಿಕಿತ್ಸಾ ಪದ್ದತಿಯಾಗಿದೆ.
ಈ ಪ್ರಕೃತಿ ಚಿಕಿತ್ಸೆಯನ್ನು ಪಡೆಯಬೇಕೆಂದರೆ ದೊಡ್ಡ-ದೊಡ್ಡ ಕೇಂದ್ರಗಳಿಗೇ ಹೋಗಿ ಚಿಕಿತ್ಸೆಯನ್ನು ಪಡೆಯಬೇಕೆಂಬ ಕಲ್ಪನೆಯಿಂದ ಹೊರಬಂದು, ಕ್ಲಿನಿಕ್‌ಗಳಲ್ಲಿಯೇ ಪ್ರಕೃತಿ ಚಿಕಿತ್ಸಾ ಪದ್ದತಿಯನ್ನು ಬಳಸಿ ನೀಡುವಂತಹ ಚಿಕಿತ್ಸೆಯಿಂದ ನಾವು ನಮ್ಮ ಆರೋಗ್ಯವನ್ನು ಪಡೆಯಬಹುದಾಗಿದೆ. ಇಂದಿನ ಒತ್ತಡಯುಕ್ತ ಬದುಕಿನಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರಗಳಿಗೆ ಹೋಗಿ ಒಂದು ತಿಂಗಳ ಕಾಲ ತಂಗುವುದು ಕಷ್ಟ ಸಾಧ್ಯವಾದ್ಯವಾದ ಮಾತಾಗಿರುವುದರಿಂದ, ಶ್ರೀಮತಿ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಂತಹ ಕ್ಲೀನಿಕ್‌ಗಳು ಹೆಚ್ಚಿದರೆ ಕಾಯಿಲೆಗಳು ಬರದಂತೆ ತಡೆಯಲು ಸಾಧ್ಯ, ಮಾತ್ರವಲ್ಲದೆ ಬಂದಂತಹ ಕಾಯಿಲೆಗಳನ್ನು ಸರಿಪಡಿಸಿಕೊಳ್ಳಲು ಕೂಡ ಸಾಧ್ಯವೆಂದು ತಿಳಿಸಿದರು. ಈ ವೈದ್ಯ ಪದ್ದತಿಯು ಕಾಯಿಲೆಯ ಮೂಲವನ್ನು ಕಂಡುಹಿಡಿದು ಕಾಯಿಲೆಯನ್ನು ಪರಿಪೂರ್ಣವಾಗಿ ಸರಿಪಡಿಸುತ್ತದೆ ಹಾಗಾಗಿ ಇಂತಹ ಪದ್ಧತಿಯ ಕ್ಲೀನಿಕ್‌ಗಳು ಹೆಚ್ಚುವುದರಿಂದ ಸಾರ್ವಜನಿಕರ ಆರೋಗ್ಯವನ್ನು ಇಮ್ಮಡಿಗೊಳಿಸಬಹುದೆಂದು ಅಭಿಪ್ರಾಯ ಪಟ್ಟರು.
blob:https://web.whatsapp.com/f6c98fb6-a1f6-42ba-b5d7-c41760f71eb0
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಡಾ. ವಿಂಧ್ಯ ಗಂಗಾಧರ ವರ್ಮರವರು ಮಾತನಾಡಿ ಪ್ರಕೃತಿ ಚಿಕಿತ್ಸೆಯು ನಿರೌಷಧ ಚಿಕಿತ್ಸಾ ಪದ್ಧತಿಯಾಗಿದ್ದು, ಇದು ಬಹಳಷ್ಟು ದೀರ್ಘಕಾಲಿಕ ತೊಂದರೆಗಳಿಗೆ ರಾಮಬಾಣವಾದ ಚಿಕಿತ್ಸಾ ಪದ್ದತಿ.
Views: 0