ಬೆಂಗಳೂರು: ಬಿಗ್ ಬಾಸ್ ಕನ್ನಡ-11 (BIGG BOSS KANNADA-11) ಆರಂಭಕ್ಕೆ ದಿನಗಣನೆ ಶುರುವಾಗಿದೆ. ದಿನಕಳೆದಂತೆ ಒಂದೊಂದೇ ಅಪ್ಡೇಟ್ ಹೊರಬೀಳುತ್ತಿದೆ.

ಪ್ರತಿ ಅಪ್ಡೇಟ್‌ನಲ್ಲೂ ಪ್ರೇಕ್ಷಕರು ಈ ಬಾರಿಯೂ ಕಿಚ್ಚ ಸುದೀಪ್(Kiccha Sudeep) ಅವರೇ ಶೋ ನಡೆಸಿಕೊಡಬೇಕೆನ್ನುವ ನಿಟ್ಟಿನಲ್ಲಿ ಕಿಚ್ಚ ಅವರ ನ್ಯೂ ಲುಕ್ ನೋಡಲು ಕಾಯುತ್ತಿದ್ದಾರೆ. ಆದರೆ ಇದುವರೆಗೆ ಸುದೀಪ್ ಕಾರ್ಯಕ್ರಮ ನಡೆಸಿಕೊಡುತ್ತಾರಾ ಇಲ್ವೋ ಎನ್ನುವುದರ ಬಗ್ಗೆ ಯಾವ ಮಾಹಿತಿಯೂ ಹೊರಬಿದ್ದಿರಲಿಲ್ಲ.
ಆರಂಭದಲ್ಲಿ ಬಿಗ್ ಬಾಸ್ ಕನ್ನಡ -11ರ ಲೋಗೋ ರಿವೀಲ್ ವೇಳೆ ಕಿಚ್ಚ ಸುದೀಪ್ ಅವರ ಹೆಸರನ್ನು ಹ್ಯಾಷ್ ಟ್ಯಾಗ್‌ನಲ್ಲಿ ಬಳಸಲಾಗಿತ್ತು. ಆ ಬಳಿಕ ಅದನ್ನು ತೆಗೆಯಲಾಗಿತ್ತು. ಇದರಿಂದಾಗಿ ಕಿಚ್ಚ ಅವರು ಬಿಗ್ ಬಾಸ್ ನಡೆಸಿಕೊಡುವುದು ಅನುಮಾನವೆನ್ನುವ ಮಾತು ಮತ್ತೊಮ್ಮೆ ಕೇಳಿಬಂದಿತ್ತು.
ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ಕುತೂಹಲ ಹುಟ್ಟಿಸುವ ಪ್ರೋಮೊವೊಂದನ್ನು ರಿಲೀಸ್ ಮಾಡಿತ್ತು. ವಿಡಿಯೋ ಕೊನೆಯಲ್ಲಿ ಆಯಂಕರ್ ಕೂಡ ಹೊಸಬರಾ..? ಎನ್ನುವ ಪ್ರಶ್ನೆಯನ್ನು ಹಾಗೆಯೇ ಬಿಡಲಾಗಿತ್ತು. ರಾಜನಂತೆ ಸುದೀಪ್ ಸೈನದ ಮಧ್ಯ ಬಂದು 10 ವರ್ಷದಿಂದ ಒಂದು ಲೆಕ್ಕ, ಈಗಿನಿಂದ ಬೇರೇನೇ ಲೆಕ್ಕ ಇದು ಹೊಸ ಅಧ್ಯಾಯವೆಂದು ಸುದೀಪ್ ಹೇಳಿದ್ದಾರೆ. ಸೆ. 29 ರಿಂದ ಶೋ ಆರಂಭಗೊಳ್ಳಲಿದೆ ಎಂದು ವಿಡಿಯೋದಲ್ಲಿ ತೋರಿಸಲಾಗಿದೆ.
ಆ ಮೂಲಕ ಸುದೀಪ್ ಅವರೇ ಶೋ ನಡೆಸಿಕೊಡುವುದು ಅಧಿಕೃತವಾಗಿದೆ. ಇದೀಗ ʼಗಿಚ್ಚಿ ಗಿಲಿ ಗಿಲಿ -3ʼ ವೇಳೆ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್ ಬಾಸ್ ಕನ್ನಡ -11ರ ಬಗ್ಗೆ ಬಿಗ್ ಅಪ್ಡೇಟ್ ನೀಡಲಾಗಿದೆ.