
ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ (ICC WTC Final) ದಿನಗಣನೆ ಶುರುವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಮುಕ್ತಾಯದ ಬೆನ್ನಲ್ಲೇ ಈ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಾಗಿ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದ್ದಾರೆ. ಐಸಿಸಿ ಡಬ್ಲ್ಯೂಟಿಸಿ ಫೈನಲ್ ಜೂನ್ 7 ರಿಂದ 11ರ ವರೆಗೆ ನಡೆಯಲಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನ ಈ ಐತಿಹಾಸಿಕ ಕಾದಾಟಕ್ಕೆ ಸಾಕ್ಷಿಯಾಗಲಿದೆ. ಇದೀಗ ಈ ಮಹತ್ವದ ಪಂದ್ಯಕ್ಕೆ ಕೂಕಬುರಾ ಬಾಲ್ (Kookaburra) ಬದಲು ಡ್ಯೂಕ್ಸ್ ಚೆಂಡನ್ನೇ ನಾವು ಉಪಯೋಗಿಸುತ್ತೇವೆ ಎಂದು ಬಿಸಿಸಿಐ ಹೇಳಿದೆ.
ಮೊನ್ನೆಯಷ್ಟೆ ಆಸ್ಟ್ರೇಲಿಯಾ ತಂಡದ ಮಾಜಿ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್ ಡ್ಯೂಕ್ಗಿಂತ ಕೂಕಬುರಾ ಚೆಂಡು ಉತ್ತಮ ಎಂದು ಹೇಳಿದ್ದರು. ”ಆಸ್ಟ್ರೇಲಿಯದ ವೇಗದ ಬ್ಯಾಟಿಂಗ್ ಮತ್ತು ಭಾರತದ ಅಗ್ರ ಕ್ರಮಾಂಕ ಈ ಪಂದ್ಯದ ಪ್ರಮುಖ ಹೈಲೇಟ್ ಆಗಿದೆ. ಭಾರತೀಯ ಸ್ಪಿನ್ನರ್ಗಳು ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳ ಕಾದಾಟ ರೋಚಕತೆಯಿಂದ ಕೂಡಿರುತ್ತದೆ. ಓವಲ್ನಲ್ಲಿ ಮೈದಾನದಲ್ಲಿ ಹೀಗೆ ನಡೆಯುವುದು ಖಚಿತ. ಓವಲ್ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್ಮನ್ಗಳಿಗೆ ಉತ್ತಮವಾಗಿರುತ್ತದೆ ಮತ್ತು ಸ್ವಲ್ಪ ಪ್ರಮಾಣದಲ್ಲಿ ಸ್ಪಿನ್ನರ್ಗಳಿಗೆ ಸಹ ಬೆಂಬಲಿಸುತ್ತದೆ. ಡ್ಯೂಕ್ ಅಷ್ಟೊಂದು ಪರಿಣಾಮಕಾರಿ ಇಲ್ಲ. ಹೀಗಾಗಿ ಕೂಕಬುರಾ ಚೆಂಡು ಬಳಕೆ ಆಗಲಿ,” ಎಂದು ಪಾಂಟಿಂಗ್ ಹೇಳಿದ್ದರು.
IPL 2023: ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೃಷ್ಟಿಯಾಗಲ್ಲಿರುವ ಪ್ರಮುಖ 8 ದಾಖಲೆಗಳಿವು
ಆದರೀಗ ಪಾಂಟಿಂಗ್ ಹೇಳಿಕೆಯನ್ನು ಬಿಸಿಸಿಐ ವಿರೋಧಿಸಿದ್ದು, ನಾವು ಡ್ಯೂಕ್ಸ್ ಚೆಂಡಿನಲ್ಲಿ ಟೆಸ್ಟ್ ಚಾಂಪಿಯನ್ಶಿಪ್ ಆಡಲ್ಲ. ಕೂಕಬುರಾ ಬಾಲ್ನಲ್ಲೇ ಕಣಕ್ಕಿಳಿಯುತ್ತೇವೆ ಎಂದು ಹೇಳಿದೆ. ”ನಾವು ಡ್ಯೂಕ್ಸ್ ಬಾಲ್ ಜೊತೆ ಆಡುತ್ತೇವೆ. ನಮ್ಮ ಆಟಗಾರರು ಈಗಾಗಲೇ ಡ್ಯೂಕ್ಸ್ನೊಂದಿಗೆ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ಐಪಿಎಲ್ನಲ್ಲಿ ಫೈನಲ್ಗೆ ತಯಾರಾಗಲು ವೇಗಿಗಳಿಗೆ ಡ್ಯೂಕ್ಸ್ ಬಾಲ್ ಕೂಡ ನೀಡಲಾಗಿದೆ. ಚೆಂಡಿನ ಬದಲಾವಣೆಯ ಬಗ್ಗೆ ನಾವು ಏನನ್ನೂ ಕೇಳಿಲ್ಲ. ಪಾಂಟಿಂಗ್ ಈ ಬಗ್ಗೆ ಎಲ್ಲಿ ಮಾತನಾಡಿದರೊ ನಮಗೆ ಗೊತ್ತಿಲ್ಲ,” ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್ಸೈಡ್ಸ್ಪೋರ್ಟ್ಗೆ ತಿಳಿಸಿದ್ದಾರೆ.
ಡ್ಯೂಕ್ಸ್-ಕೂಕಬುರಾ ಚೆಂಡಿನ ನಡುವೆ ಏನು ವ್ಯತ್ಯಾಸ?:
ಆಸ್ಟ್ರೇಲಿಯಾದ ಕ್ರೀಡಾ ಪರಿಕರಗಳನ್ನು ತಯಾರಿಸುವ ಕಂಪನಿಯ ಹೆಸರು ಕೂಕಬುರಾ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಸೇರಿದಂತೆ ಹೆಚ್ಚಿನ ತಂಡಗಳು ತಮ್ಮ ತಮ್ಮ ದೇಶದಲ್ಲಿ ಟೆಸ್ಟ್ ಕ್ರಿಕೆಟ್ ಆಡಲು ಬಳಸುವುದು ಕೂಕಬುರಾ ಕಂಪನಿಯ ಚೆಂಡನ್ನು. ಈ ಚೆಂಡಿನ ಒಳಗಿನ ಎರಡು ಪದರಗಳನ್ನು ಕೈಯಲ್ಲೇ ಹೊಲಿಯುತ್ತಾರೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆದ ಡಬ್ಲ್ಯುಟಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಬಳಕೆಯಾದದ್ದು ಡ್ಯೂಕ್ಸ್ ಚೆಂಡು. ಇದರ ಬಣ್ಣ ಚೆರ್ರಿ ಹಣ್ಣಿನ ಕೆಂಪು. ಕೂಕಬುರಾ ಚೆಂಡಿಗೆ ಹೋಲಿಸಿದರೆ ಎಸ್ಜಿ ಚೆಂಡಿನ ಹೊಲಿಗೆಗೆ ಬಳಸುವ ದಾರ ದಪ್ಪವಾಗಿರುತ್ತದೆ. ಹೊಲಿಗೆಗಳ ನಡುವಿನ ಅಂತರ ಎಸ್ಜಿ ಚೆಂಡಿನಲ್ಲಿ ಕಡಿಮೆ ಇರುತ್ತದೆ.
ಡ್ಯೂಕ್ಸ್ ಬಾಲ್ನಲ್ಲಿನ ಭಾರವಾದ ಮೆರುಗೆಣ್ಣೆಯು ಚೆಂಡು ಸುಮಾರು 60 ಓವರ್ಗಳವರೆಗೆ ತನ್ನ ಸ್ವಿಂಗ್ ಅನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. 60 ಓವರ್ಗಳ ನಂತರ, ಚೆಂಡು ರಿವರ್ಸ್ ಸ್ವಿಂಗ್ ಪಡೆಯುತ್ತದೆ ಮತ್ತು ಇಂಗ್ಲೆಂಡ್ನಲ್ಲಿ ಮೋಡ ಕವಿದ ವಾತಾವರಣದ ಸಂದರ್ಭ ವೇಗಿಗಳು ಇದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಾರೆ.
ಕೂಕಬುರಾ ಚೆಂಡಿನ ಸೀಮ್ ಭಾಗದ ಗ್ರಿಪ್ ಚೆನ್ನಾಗಿರುವುದರಿಂದ ಬೌಲರ್ಗಳಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಭದ್ರವಾಗಿ ಹಿಡಿಯಬಹುದು. ಕೂಕಬುರಾ ಚೆಂಡು ಹೊಳಪು ಕಳೆದುಕೊಂಡ ನಂತರವೂ ಎತ್ತರಕ್ಕೆ ಪುಟಿಯಬಲ್ಲದು. ಹೀಗಾಗಿ ವೇಗ ಹಾಗೂ ಮಧ್ಯಮ ವೇಗದ ಬೌಲರ್ಗಳು ಬೌನ್ಸ್ ಮೂಲಕವೇ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಬಹುದು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ