Emerging Asia Cup 2023: ಏಷ್ಯಾ ಕಪ್ 2023ರ ಮೊದಲು, ACC ಪುರುಷರ ಉದಯೋನ್ಮುಖ ಏಷ್ಯಾ ಕಪ್ ಜುಲೈ 13 ರಿಂದ 23 ರವರೆಗೆ ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ
![](https://samagrasuddi.co.in/wp-content/uploads/2023/07/image-91.png)
Emerging Asia Cup 2023: ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಏಷ್ಯಾ ಕಪ್ 2023 ರ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ. ಏಷ್ಯಾ ಕಪ್ ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದ್ದು, ಈ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. 2023 ರ ವಿಶ್ವಕಪ್ ನಲ್ಲಿ, ಈ ಎರಡು ತಂಡಗಳ ನಡುವೆ ಅಕ್ಟೋಬರ್ 15 ರಂದು ಪಂದ್ಯ ನಡೆಯಲಿದೆ. ಈ ಎರಡು ದೊಡ್ಡ ಟೂರ್ನಿಗಳಿಗೂ ಮುನ್ನ ಜುಲೈ 19ರಂದು ಭಾರತ-ಪಾಕಿಸ್ತಾನ ನಡುವಿನ ಹಣಾಹಣಿ ನಡೆಯಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಏಷ್ಯಾ ಕಪ್ 2023ರ ಮೊದಲು, ACC ಪುರುಷರ ಉದಯೋನ್ಮುಖ ಏಷ್ಯಾ ಕಪ್ ಜುಲೈ 13 ರಿಂದ 23 ರವರೆಗೆ ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ. ಏಷ್ಯಾದ ಎಂಟು ದೇಶಗಳ ನಡುವೆ ನಡೆಯಲಿರುವ ಟೂರ್ನಿಯನ್ನು 50 ಓವರ್ ಗಳ ಮಾದರಿಯಲ್ಲಿ ಆಯೋಜಿಸಲಾಗಿದೆ. ಈ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಜುಲೈ 19ರಂದು ಮುಖಾಮುಖಿಯಾಗಲಿವೆ. ಭಾರತಕ್ಕೆ ಅಂಡರ್-19 ವಿಶ್ವಕಪ್ ಗೆದ್ದುಕೊಟ್ಟಿರುವ ನಾಯಕ ಯಶ್ ಧುಲ್ ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
8 ತಂಡಗಳ ನಡುವೆ ಪಂದ್ಯಾವಳಿ:
ನೇಪಾಳ, ಯುಎಇ ಮತ್ತು ಪಾಕಿಸ್ತಾನ ಜೊತೆಗೆ ಭಾರತ ಬಿ ಗುಂಪಿನಲ್ಲಿದ್ದರೆ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಒಮನ್ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿ ಫೈನಲ್ ತಲುಪಲಿವೆ. ಮೊದಲ ಸೆಮಿಫೈನಲ್ ಎ ಗುಂಪಿನ ಅಗ್ರಸ್ಥಾನಿ ಮತ್ತು ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡಗಳ ನಡುವೆ ನಡೆಯಲಿದ್ದು, ಎರಡನೇ ಸೆಮಿಫೈನಲ್ ಜುಲೈ 21 ರಂದು ಬಿ ಗುಂಪಿನ ಅಗ್ರಸ್ಥಾನಿ ಮತ್ತು ಎ ಗುಂಪಿನ ಎರಡನೇ ಸ್ಥಾನದ ತಂಡಗಳ ನಡುವೆ ನಡೆಯಲಿದೆ. ಜುಲೈ 23 ರಂದು ಫೈನಲ್ ನಡೆಯಲಿದೆ.
ಉದಯೋನ್ಮುಖ ಏಷ್ಯಾ ಕಪ್ ಗಾಗಿ ಭಾರತ ತಂಡ
ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ (ವಿ,ಕೀ), ನಿಕಿನ್ ಜೋಸ್, ಪ್ರದೋಶ್ ರಂಜನ್ ಪಾಲ್, ಯಶ್ ಧುಲ್ (ಕ್ಯಾ), ರಿಯಾನ್ ಪರಾಗ್, ನಿಶಾಂತ್ ಸಿಂಧು, ಪ್ರಭಾಸಿಮ್ರಾನ್ ಸಿಂಗ್ (ವಿ.ಕೀ), ಧ್ರುವ್ ಜುರೆಲ್ (ವಿ.ಕೀ), ಮಾನವ್ ಸುತಾರ್, ಯುವರಾಜ್ ಸಿಂಗ್ ದೋಡಿಯಾ, ಹರ್ಷಿತ್ ರಾಣಾ, ಆಕಾಶ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ರಾಜವರ್ಧನ್ ಹಂಗೇಕರ್.
ಸ್ಟ್ಯಾಂಡ್ ಬೈ ಆಟಗಾರರು: ಹರ್ಷ್ ದುಬೆ, ನೆಹಾಲ್ ವಧೇರಾ, ಸ್ನೆಲ್ ಪಟೇಲ್, ಮೋಹಿತ್ ರೆಡ್ಕರ್
ಉದಯೋನ್ಮುಖ ಏಷ್ಯಾ ಕಪ್ ಗಾಗಿ ಪಾಕಿಸ್ತಾನ ತಂಡ:
ಮೊಹಮ್ಮದ್ ಹ್ಯಾರಿಸ್ (ನಾಯಕ, ವಿಕೆಟ್-ಕೀಪರ್), ಒಮರ್ ಬಿನ್ ಯೂಸುಫ್ (ಉಪನಾಯಕ), ಅಮದ್ ಬಟ್, ಅರ್ಷದ್ ಇಕ್ಬಾಲ್, ಹಸಿಬುಲ್ಲಾ, ಕಮ್ರಾನ್ ಗುಲಾಮ್, ಮೆಹ್ರಾನ್ ಮುಮ್ತಾಜ್, ಮುಬಾಸಿರ್ ಖಾನ್, ಮೊಹಮ್ಮದ್ ವಾಸಿಂ ನಿಯರ್, ಖಾಸಿಮ್ ಅಕ್ರಮ್, ಸಾಹಿಬ್ಜಾದಾ ಅಯ್‌ಬ್ಹಾನ್, ಶಾನವಾಜ್ ದಹಾನಿ, ಸುಫಿಯಾನ್ ಮುಕಿಮ್ ಮತ್ತು ತೈಬ್ ತಾಹಿರ್.