ಬೆಸ್ಕಾಂ ನೇಮಕಾತಿ; 400 ಅಪ್ರೆಂಟಿಸ್​ ಹುದ್ದೆಗೆ ಅಧಿಸೂಚನೆ ಪ್ರಕಟ.

ಪದವೀಧರ ಅಪ್ರೆಂಟಿಸ್​ ಮತ್ತು ಟೆಕ್ನಿಶಿಯನ್​ (ಡಿಪ್ಲೊಮಾ) ಅಪ್ರೆಂಟಿಸ್​​ ವರ್ಗದಲ್ಲಿ ಈ ಹುದ್ದೆ ಭರ್ತಿ ಮಾಡಲಾಗುವುದು.

ಬೆಂಗಳೂರು: ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತದಲ್ಲಿ (ಬೆಸ್ಕಾಂ) ಅಪ್ರೆಂಟಿಸ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಒಂದು ವರ್ಷದ ಅವಧಿಗೆ ಒಟ್ಟು 400 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವೀಧರ ಅಪ್ರೆಂಟಿಸ್​ ಮತ್ತು ಟೆಕ್ನಿಶಿಯನ್​ (ಡಿಪ್ಲೊಮಾ) ಅಪ್ರೆಂಟಿಸ್​​ ವರ್ಗದಲ್ಲಿ ಈ ಹುದ್ದೆ ಭರ್ತಿ ಮಾಡಲಾಗುವುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಅಧಿಸೂಚನೆ

ಹುದ್ದೆ ವಿವರ: ಬೆಸ್ಕಾಂನಲ್ಲಿ ಅರ್ಜಿ ಆಹ್ವಾನಿಸಲಾಗಿರುವ 400 ಅಪ್ರೆಂಟಿಸ್​ ನೇಮಕಾತಿ ವಿವರ ಇಂತಿದೆ.

ಪದವೀಧರ ಅಪ್ರೆಂಟಿಸ್​​

  • ಎಲೆಕ್ಟ್ರಿಕಲ್​ ಮತ್ತು ಎಲೆಕ್ಟ್ರಾನಿಕ್ಸ್​ ಇಂಜಿನಿಯರಿಂಗ್​ – 143 ಹುದ್ದೆಗಳು
  • ಎಲೆಕ್ಟ್ರಾನಿಕ್ಸ್​ ಮತ್ತು ಕಮ್ಯೂನಿಕೇಷನ್​ ಇಂಜಿನಿಯರಿಂಗ್​​ – 116 ಹುದ್ದೆಗಳು
  • ಕಂಪ್ಯೂಟರ್​ ಸೆನ್ಸ್​ ಮತ್ತು ಇಂಜಿನಿಯರಿಂಗ್​​ – 36 ಹುದ್ದೆಗಳು
  • ಇನ್ಫಾರ್ಮೆಷನ್​ ಸೈನ್ಸ್​ ಮತ್ತು ಇಂಜಿನಿಯರಿಂಗ್​​ – 20 ಹುದ್ದೆಗಳು
  • ಸಿವಿಲ್​ ಇಂಜಿನಿಯರಿಂಗ್​ – 5 ಹುದ್ದೆಗಳು
  • ಇನ್ಸ್ಟುಮೆಂಟೆಷನ್​ ಟೆಕ್ನಾಲಜಿ ಇಂಜಿನಿಯರಿಂಗ್​​- 5

ಟೆಕ್ನಿಶಿಯನ್​ (ಡಿಪ್ಲೊಮಾ) ಅಪ್ರೆಂಟಿಸ್​​

  • ಎಲೆಕ್ಟ್ರಿಕಲ್​ ಅಂಡ್​ ಎಲೆಕ್ಟ್ರಾನಿಕ್ಸ್​​ ಇಂಜಿನಿಯರಿಂಗ್- 55 ಹುದ್ದೆಗಳು
  • ಎಲೆಕ್ಟ್ರಾನಿಕ್ಸ್​ ಅಂಡ್​ ಕಮ್ಯೂನಿಕೇಷನ್​ ಇಂಜಿನಿಯರಿಂಗ್​ – 10 ಹುದ್ದೆಗಳು
  • ಕಂಪ್ಯೂಟರ್​ ಸೈನ್ಸ್​ ಅಂಡ್​ ಇಂಜಿನಿಯರಿಂಗ್​ – 10

ವಿದ್ಯಾರ್ಹತೆ: ಪದವೀಧರ ಅಪ್ರೆಂಟಿಸ್​ ಹುದ್ದೆಗೆ ಅಭ್ಯರ್ಥಿಗಳು ಅಧಿಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಸಂಬಂಧಿತ ಬ್ರಾಂಚ್​ನಲ್ಲಿ ಬಿಇ, ಬಿಟೆಕ್​ ಪದವಿಯನ್ನು ಹೊಂದಿರಬೇಕು. ಟೆಕ್ನಿಶಿಯನ್​ ಅಪ್ರೆಂಟಿಸ್​ ಹುದ್ದೆಗೆ 3 ವರ್ಷದ ಡಿಪ್ಲೊಮಾ ಪದವಿಯನ್ನು ಹೊಂದಿರಬೇಕು.

2019ರಿಂದ 2023 ಅಕ್ಟೋಬರ್​ವರೆಗೆ ವಿದ್ಯಾಭ್ಯಾಸವನ್ನು ಪೂರ್ಣ ಮಾಡಿದ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಹುದ್ದೆ ಅವಧಿ: ಈ ಹುದ್ದೆಗಳನ್ನು ಅಪ್ರೆಂಟಿಸ್​ ಕಾಯ್ದೆ 1961ರ ಪ್ರಕಾರ ಒಂದು ವರ್ಷದ ಅವಧಿಗೆ ಮಾತ್ರ ನೇಮಕ ಮಾಡಲಾಗುವುದು.

ವೇತನ: ಪದವೀಧರ ಅಪ್ರೆಂಟಿಸ್​ ಹುದ್ದೆಗೆ ಮಾಸಿಕ 9008 ಮತ್ತು ಡಿಪ್ಲೊಮಾ ಪದವೀಧರರಿಗೆ ಮಾಸಿಕ 8000 ರೂ. ಶಿಷ್ಯ ವೇತನ ನಿಗದಿಸಲಾಗಿದೆ.

ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಮೆರಿಟ್​ ಮೂಲಕ ಮಾತ್ರ ಆಯ್ಕೆ ಮಾಡಲಾಗುವುದು. ಆಯ್ಕೆ ಅಭ್ಯರ್ಥಿಗಳಿಗೆ ಇಮೇಲ್​ ಮೂಲಕ ತಿಳಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಲಾದ ವಿಳಾಸದಲ್ಲಿ ತಿಳಿಸಿದ ದಿನಾಂಕದಂದು ದಾಖಲೆ ಪರಿಶೀಲನೆಗೆ ಹಾಜರಾಗಬೇಕು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್​ 11ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಡಿಸೆಂಬರ್​ 31 ಆಗಿದೆ. ಮೆರಿಟ್​ ಪಟ್ಟಿಯನ್ನು ಜನವರಿ 8ರಂದು ಪ್ರಕಟಿಸಲಾಗುವುದು. ದಾಖಲೆಗಳ ಪರಿಶೀಲನೆ ಜನವರಿಗೆ 22 ರಿಂದ 24ರ ವರೆಗೆ ನಡೆಯಲಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿಗೆ ಅಭ್ಯರ್ಥಿಗಳು bescom.org ಇಲ್ಲಿಗೆ ಭೇಟಿ ನೀಡಬಹುದಾಗಿದೆ.

Source : https://m.dailyhunt.in/news/india/kannada/etvbhar9348944527258-epaper-etvbhkn/beskaam+nemakaati+400+aprentis+huddege+adhisuchane+prakata-newsid-n564550584?listname=newspaperLanding&topic=homenews&index=7&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *