Home Remedy For Vision Defect: ಈ ಬದಲಾದ ಜೀವನಶೈಲಿಯಲ್ಲಿ ಎಲೆಕ್ಟ್ರಿಕ್ ಗ್ಯಾಜೆಟ್ ಗಳ ಬಳಕೆ ಹೆಚ್ಚಾಗಿದ್ದು ಇದರಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

Home Remedy For Vision Defect: ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸ್ಮಾರ್ಟ್ಫೋನ್ ಬಳಕೆ, ಟಿವಿ ವೀಕ್ಷಣೆ, ಆನ್ಲೈನ್ ತರಗತಿಗಳಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಕನ್ನಡಕ ಹಾಕಿಸಬೇಕಾಗುತ್ತದೆ. ಇದು ಕೆಲವರಲ್ಲಿ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರಬಹುದು. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಕೇವಲ ಈ ಒಂದು ಮನೆಮದ್ದನ್ನು ಟ್ರೈ ಮಾಡಿ ನೀವು ನಿಮ್ಮ ದೃಷ್ಟಿ ದೋಷ ಸಮಸ್ಯೆಗೆ ಕೇವಲ ದಿನಗಳಲ್ಲಿ ಗುಡ್ ಬೈ ಹೇಳಬಹುದು.
ವಾಸ್ತವವಾಗಿ, ದೃಷ್ಟಿ ದೋಷ ಸಮಸ್ಯೆಗೆ ಹಲವು ಕಾರಣಗಳಿವೆ. ಕೆಲವರಿಗೆ ಇದು ಅನುವಂಶಿಕವಾಗಿಯೂ ಬರಬಹುದು, ಇನ್ನೂ ಕೆಲವರಲ್ಲಿ ನಮ್ಮ ಆಹಾರ ಪದ್ದತಿ, ಜೀವನ ಶೈಲಿಯಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ನೀವು ಅಥವಾ ನಿಮ್ಮ ಮಕ್ಕಳು ದೃಷ್ಟಿ ದೋಷ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೇವಲ ಎರಡೇ ಎರಡು ಪದಾರ್ಥಗಳನ್ನು ಬಳಸಿ ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು. ನೀವು ನಿತ್ಯ ಈ ಮನೆಮದ್ದನ್ನು ಬಳಸಿದರೆ ಕೇವಲ 10-15 ದಿನಗಳಲ್ಲಿ ನಿಮಗೆ ಪರಿಣಾಮ ಗೋಚರಿಸುತ್ತದೆ.
ದೃಷ್ಟಿದೋಷ ನಿವಾರಣೆಗೆ ಮನೆಮದ್ದು:
ಬೇಕಾಗಿರುವ ಸಾಮಾಗ್ರಿಗಳು-
- ಕರಿಮೆಣಸು
- ಹಸುವಿನ ತುಪ್ಪ
ಕರಿಮೆಣಸಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದಲ್ಲದೆ, ಕಣ್ಣಿನಲ್ಲಿ ಕಂಡು ಬರುವ ಕ್ಯಾಟರೇಟ್ ಸಮಸ್ಯೆಗೆ ಕರಿಮೆಣಸು ಅತ್ಯುತ್ತಮ ಔಷಧವಾಗಿದೆ. ಇದಲ್ಲದೆ, ತುಪ್ಪದಲ್ಲಿ ಒಮೆಗಾ 3 ಕಂಡು ಬರುತ್ತದೆ. ಇದು ಕೂಡ ಕಣ್ಣಿನ ದೃಷ್ಟಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.
ಮನೆಮದ್ದನ್ನು ತಯಾರಿಸುವ ವಿಧಾನ:
ಸುಮಾರು ಐದರಿಂದ ಆರು ಕಾಳುಮೆಣಸನ್ನು ತೆಗೆದುಕೊಂಡು ಅದನ್ನು ಕುಟ್ಟಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಇದಕ್ಕೆ ಒಂದು ಅರ್ಧ ಚಮಚದಷ್ಟು ಹಸುವಿನ ತುಪ್ಪವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ತಿಂದು ಒಂದು ಲೋಟ ಹಾಲು ಕುಡಿಯಿರಿ. ಹಾಲು ಕುಡಿಯಲು ಸಾಧ್ಯವಾಗದಿದ್ದರೆ, ಒಂದು ಲೋಟ ಬಿಸಿ ನೀರನ್ನು ಕುಡಿಯಿರಿ.
ಆಯುರ್ವೇದ ತಜ್ಞರ ಪ್ರಕಾರ, ಈ ಮನೆಮದ್ದನ್ನು ನಿಯಮಿತವಾಗಿ ಬಳಸುವುದರಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಆದರೆ, ಇದು ರಾತ್ರೋ ರಾತ್ರಿ ಸಾಧ್ಯವಾಗುವುದಿಲ್ಲ, ಕನಿಷ್ಠ 15 ದಿನವಾದರೂ ಈ ಔಷಧಿಯನ್ನು ಬಳಸಿದರೆ ನಿರೀಕ್ಷಿತ ಫಲಿತಾಂಶ ಪಡೆಯಬಹುದು ಎಂದು ಹೇಳಲಾಗುತ್ತದೆ. ಆದರೆ, ನಿಮಗೇನಾದರೂ ಆರೋಗ್ಯ ಸಮಸ್ಯೆ ಇದ್ದರೆ ಈ ಪರಿಹಾರ ಕೈಗೊಳ್ಳುವ ಮೊದಲು ತಪ್ಪದೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0