ಏಕರೂಪ ನಾಗರಿಕ ಸಂಹಿತೆ ಕುರಿತಂತೆ ತಪ್ಪು ಸಂದೇಶಗಳನ್ನು ಭಿತ್ತರಿಸುವಂತಹ ವಾಟ್ಸ್ಆಪ್ ಸಂದೇಶ, ಕರೆಗಳ ಕುರಿತು ಎಚ್ಚರಿಕೆಯಿಂದ ಇರುವಂತೆ ಭಾರತೀಯ ಕಾನೂನು ಆಯೋಗ ಸಾರ್ವಜನಿಕರಿಗೆ ತಿಳಿಸಿದೆ
ನವದೆಹಲಿ: ಏಕರೂಪ ನಾಗರಿಕ ಸಂಹಿತೆ ಕುರಿತಂತೆ ತಪ್ಪು ಸಂದೇಶಗಳನ್ನು ಭಿತ್ತರಿಸುವಂತಹ ವಾಟ್ಸ್ಆಪ್ ಸಂದೇಶ, ಕರೆಗಳ ಕುರಿತು ಎಚ್ಚರಿಕೆಯಿಂದ ಇರುವಂತೆ ಭಾರತೀಯ ಕಾನೂನು ಆಯೋಗ ಸಾರ್ವಜನಿಕರಿಗೆ ತಿಳಿಸಿದೆ
ಆಯೋಗ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಾಟ್ಸ್ಆಪ್ ಸಂದೇಶ ಅಥವಾ ಕರೆಗಳಿಗೆ ಸಂಬಂಧಿಸಿದಂತೆ ಆಯೋಗಕ್ಕೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ.
ಕೆಲವು ದೂರವಾಣಿ ಸಂಖ್ಯೆಗಳು ಸಂದೇಶಗಳಲ್ಲಿ ರವಾನೆಯಾಗಿ, ಅದು ಭಾರತೀಯ ಕಾನೂನು ಆಯೋಗದ ಸಂಖ್ಯೆ ಎಂದು ಹೇಳಲಾಗಿದೆ. ಆದರೆ ಆಯೋಗ ಆ ರೀತಿ ಯಾವುದೇ ಕರೆಗಳನ್ನು ಅಥವಾ ಸಂದೇಶಗಳನ್ನು ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಭಾರತೀಯ ಕಾನೂನು ಆಯೋಗ ಖಚಿತ ಮಾಹಿತಿಗಾಗಿ ಸಾರ್ವಜನಿಕರು ಆಯೋಗದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ ಎಂದು ಹೇಳಿದೆ.