Wi-Fiಗೆ ಸಂಬಂಧಿಸಿದ ಈ ಸುರಕ್ಷತಾ ತಪ್ಪುಗಳು ನಿಮ್ಮನ್ನು, ನಿಮ್ಮ ಕುಟುಂಬವನ್ನು ಅಪಾಯಕ್ಕೆ ಸಿಲುಕಿಸಬಹುದು ಎಚ್ಚರ!

Wi-Fi Security Mistakes: ಪ್ರಸ್ತುತ, ಸ್ಮಾರ್ಟ್ಫೋನ್, ಲ್ಯಾಪ್ ಟಾಪ್ ಜೊತೆಗೆ ವೈಫೈ ಕೂಡ ತುಂಬಾ ಅಗತ್ಯ. ಆದರೆ, ವೈ-ಫೈ ಸಂಬಂಧಿಸಿದಂತೆ ಕೆಲವು ಸುರಕ್ಷತಾ ಹಂತಗಳನ್ನು  ಕೈಗೊಳ್ಳುವಾಗ ನಮಗೆ ತಿಳಿದೋ/ತಿಳಿಯದೆಯೋ ಕೆಲವು ತಪ್ಪುಗಲಾಗುತ್ತವೆ. ಈ ತಪ್ಪುಗಳು ನಿಮ್ಮನ್ನು ಮಾತ್ರವಲ್ಲ ನಿಮ್ಮ ಕುಟುಂಬವನ್ನೂ ಅಪಾಯಕ್ಕೆ ಸಿಲುಕಿಸಬಹುದು ಎಂದು ನಿಮಗೆ ತಿಳಿದಿದೆಯೇ? 

‘ದಿ ಸನ್’ ಸುದ್ದಿ ವೆಬ್‌ಸೈಟ್ ಪ್ರಕಾರ, ವೈ-ಫೈಗೆ ಸಂಬಂಧಿಸಿದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಾಗ ಮಾಡುವ ಕೆಲವು ಸಣ್ಣ ತಪ್ಪುಗಳು ನಿಮ್ಮನ್ನು ಮಾತ್ರವಲ್ಲ ನಿಮ್ಮ ಕುಟುಂಬವನ್ನೂ ಅಪಾಯಕ್ಕೆ ಸಿಲುಕಿಸಬಹುದು ಎಂದು ಹೇಳಲಾಗಿದೆ. ಅಂತಹ ತಪ್ಪುಗಳೆಂದರೆ… 

ನಮ್ಮಲ್ಲಿ ಬಹುತೇಕ ಮಂದಿ ವೈ-ಫೈ ಅಳವಡಿಸಿದಾಗ ನೆಟ್‌ವರ್ಕ್ ಅನ್ನು ಎನ್‌ಕ್ರಿಪ್ಟ್ ಮಾಡಲಾಗಿದೆಯೇ ಎಂಬ ಬಗ್ಗೆ ತಲೆಯೆ ಕೆಡಿಸಿಕೊಳ್ಳುವುದಿಲ್ಲ. ಇದು ನಿಮ್ಮ ಮತ್ತು ನಿಮ್ಮ ಮನೆಯವರ ಗೌಪ್ಯ ಮಾಹಿತಿಗಳನ್ನು ಖದಿಯಲು ಸೈಬರ್ ವಂಚಕರಿಗೆ ಸುಲಭ ದಾರಿಯಾಗಲಿದೆ. ನೀವು ನಿಮ್ಮ ನೆಟ್‌ವರ್ಕ್ ಅನ್ನು ಎನ್‌ಕ್ರಿಪ್ಟ್ ಮಾಡುವುದರಿಂದ ನಿಮ್ಮ ನೆಟ್‌ವರ್ಕ್ ಮೂಲಕ ಕಳುಹಿಸಲಾದ ಮಾಹಿತಿಯನ್ನು ಅಸ್ಪಷ್ಟಗೊಳಿಸುತ್ತದೆ, ಹ್ಯಾಕರ್‌ಗಳಿಗೆ ನೀವು ಏನನ್ನು ಮಾಡುತ್ತಿರುವಿರಿ ಎಂಬುದನ್ನು ನೋಡಲು ಕಷ್ಟವಾಗುತ್ತದೆ.

ನಾವು ನಮ್ಮ ಸ್ಮಾರ್ಟ್ಫೋನ್ ಗಳಲ್ಲಿ ಪಾಸ್‌ವರ್ಡ್ ಹೊಂದಿಸುವಂತೆ ವೈ-ಫೈಗೂ ಸಹ ಪಾಸ್‌ವರ್ಡ್ ಹೊಂದಿಸುವುದು ಬಹಳ ಮುಖ್ಯ. ಅದೂ ಕೂಡ ಸ್ಟ್ರಾಂಗ್ ಪಾಸ್‌ವರ್ಡ್ ಅನ್ನು ಹೊಂದಿಸುವುದು ಅತ್ಯಗತ್ಯ. ಇಲ್ಲದಿದ್ದರೆ, ಆ ನೆಟ್‌ವರ್ಕ್ ನೆರೆಹೊರೆಯವರ ಅಥವಾ ದಾರಿಹೋಕರ ಮೊಬೈಲ್‌ನಲ್ಲಿ ಉಚಿತವಾಗಿ ತೋರಿಸಲು ಪ್ರಾರಂಭಿಸುತ್ತದೆ ಮತ್ತು ಅವರು ಅದನ್ನು ಬಳಸಬಹುದು. ಇದರಿಂದ ನಿಮ್ಮ ವೈಫೈ ವೇಗ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಸೈಬರ್ ಅಪರಾಧಿಗಳು ನಿಮ್ಮ ಪಾಸ್‌ವರ್ಡ್-ರಹಿತ ರೂಟರ್‌ನ ಮೇಲೂ ಸುಲಭವಾಗಿ ದಾಳಿ ಮಾಡಬಹುದು.

ವೈ-ಫೈ ಸುರಕ್ಷತೆ ದೃಷ್ಟಿಯಿಂದ ನೀವು ವೈ-ಫೈ ಹೋಂ ರೂಟರ್‌ಗೆ ಪಾಸ್‌ವರ್ಡ್ ಹೊಂದಿಸುವುದು ಮಾತ್ರವಲ್ಲ,  ನಿಯಮಿತವಾಗಿ ಅದನ್ನು ನವೀಕರಿಸುವುದು ಕೂಡಾ ತುಂಬಾ ಅಗತ್ಯ. ಇದು ನಿಮ್ಮ ವೈ-ಫೈ ವೇಗವನ್ನು ಸುಧಾರಿಸುವುದರ ಜೊತೆಗೆ  ಹ್ಯಾಕರ್‌ಗಳಿಂದಲೂ ನಿಮ್ಮನ್ನು ರಕ್ಷಿಸುತ್ತದೆ. 

ಕೆಲವರು ಮನೆಯಲ್ಲಿ ವೈ-ಫೈ ಹೊಂದಿದ್ದರೆ ಅದಕ್ಕಾಗಿ ಫೈರ್‌ವಾಲ್ ಅನ್ನು ಕೂಡ ಸ್ಥಾಪಿಸುತ್ತಾರೆ. ಆದರೆ, ಇದು ನಿಮ್ಮ ಸುರಕ್ಷತೆಗೆ ಧಕ್ಕೆ ತರಬಹುದು. ಹಾಗಾಗಿ, ಫೈರ್‌ವಾಲ್ ಅನ್ನು ಸ್ಥಾಪಿಸಬೇಡಿ. 

ನಮ್ಮ ವೈ-ಫೈ ಯಾವೆಲ್ಲಾ ಸಾಧನಗಳಲ್ಲಿ ಕೆಲಸ ಮಾಡುತ್ತಿದೆ ಎಂಬುದನ್ನು ನಾವು ಆಗಾಗ್ಗೆ ಮೇಲ್ವಿಚಾರಣೆ ಮಾಡುವುದು ಅತ್ಯಗತ್ಯ. ಇಲ್ಲದಿದ್ದರೆ, ಅಪರಿಚಿತರು ಅಥವಾ ವಂಚಕರು ನಮ್ಮ ನೆಟ್‌ವರ್ಕ್ ಬಳಸುತ್ತಿದ್ದರೆ ಅದು ನಮ್ಮ ಮತ್ತು ಕುಟುಂಬದವರ ಸುರಕ್ಷತೆಗೂ ಧಕ್ಕೆ ತರಬಹುದು. 

Source : https://zeenews.india.com/kannada/photo-gallery/these-wi-fi-security-mistakes-can-put-you-and-your-family-in-danger-beware-149690/%E0%B2%8E%E0%B2%A8%E0%B3%8D%E2%80%8C%E0%B2%95%E0%B3%8D%E0%B2%B0%E0%B2%BF%E0%B2%AA%E0%B3%8D%E0%B2%9F%E0%B3%8D-%E0%B2%AE%E0%B2%BE%E0%B2%A1%E0%B2%A6%E0%B3%87-%E0%B2%87%E0%B2%B0%E0%B3%81%E0%B2%B5%E0%B3%81%E0%B2%A6%E0%B3%81-149695

Leave a Reply

Your email address will not be published. Required fields are marked *