ಭೈರವನ ಕೊನೆ ಪಾಠ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಲುಕ್ ಅಲ್ಲಿ ಶಿವರಾಜ್ ಕುಮಾರ್ ಖಡಕ್ ಆಗಿಯೇ ಕಾಣಿಸುತ್ತಿದ್ದಾರೆ. ಇದರ ವಿವರ ಇಲ್ಲಿದೆ ಓದಿ.
![](https://samagrasuddi.co.in/wp-content/uploads/2024/07/image-54.png)
ಡೈರೆಕ್ಟರ್ ಹೇಮಂತ್ ರಾವ್ (Hemanth Rao) ಹೊಸ ರೀತಿಯ ಸಿನಿಮಾ ಮಾಡುತ್ತಿದ್ದಾರೆ. ಎಲ್ಲೋ ಇದು ವೀರ ಯೋಧನ ಕಥೆ ಅನಿಸುತ್ತದೆ. ಭೈರವನ ಕೊನೆಯ ಪಾಠ (Bhiaravana Kone Paata) ಅನ್ನೋದು ಮತ್ತಷ್ಟು ಯೋಚಿಸೋ ಹಾಗೆ ಮಾಡುತ್ತದೆ. ಭೈರವನ ಕೊನೆಯ ಪಾಠ ಅಂದಾಗಲೇ ಇಲ್ಲಿ ಏನೋ ಕೊನೆಯ ಆಟ ಇದೆ ಅನಿಸುತ್ತದೆ. ಅದಕ್ಕೆ ಸೂಕ್ತ ಅನಿಸೋ ಒಂದೆರಡು ಪೋಸ್ಟರ್ ರಿಲೀಸ್ ಆಗಿವೆ. ಮೊನ್ನೆ ಸಿನಿಮಾದ ಟೈಟಲ್ ರಿವೀಲ್ ಆಗಿತ್ತು. ಇದೀಗ ಶಿವರಾಜ್ ಕುಮಾರ್ (Shiva Rajkumar) ಫಸ್ಟ್ ಲುಕ್ ರಿಲೀಸ್ ಆಗಿದೆ. ಎರಡು ಪೋಸ್ಟರ್‌ಗಳಲ್ಲಿ ಎರಡು ರೀತಿಯ ಕಾಸ್ಟೂಮ್ ಇದೆ. ಎರಡು ರೀತಿಯ ಲುಕ್ ಇವೆ. ಆದರೆ, ಎರಡರಲ್ಲೂ ಭೈರವನಿಗೆ ವಯಸ್ಸಾಗಿದೆ ಅನ್ನೋದೇ ವಿಶೇಷ.
ಹಾಗೆ ಡೈರೆಕ್ಟರ್ ಹೇಮಂತ್ ರಾವ್ ಮತ್ತು ಶಿವಣ್ಣನ ಈ ಸಿನಿಮಾ ಇದೀಗ ಪೋಸ್ಟರ್ ಮೂಲಕ ಇನ್ನಷ್ಟು ಗಮನ ಸೆಳೆಯುತ್ತಿದೆ. ಇದರ ವಿವರ ಇಲ್ಲಿದೆ ಓದಿ.
ಭೈರವನ ಕೊನೆ ಪಾಠದಲ್ಲಿ ಶಿವಣ್ಣ ಹಿರಿಯ ಯೋಧ..!
ಶಿವರಾಜ್ ಕುಮಾರ್ ಈ ಹಿಂದೆ ಒಂದು ಚಿತ್ರ ಮಾಡಿದ್ದರು. ಡೈರೆಕ್ಟರ್ ಎ.ಹರ್ಷ ಇದನ್ನ ಡೈರೆಕ್ಷನ್ ಮಾಡಿದ್ದರು. ಹೌದು, ವೇದ ಅನ್ನೋ ಈ ಚಿತ್ರದಲ್ಲೂ ವಯಸ್ಸಾದ ಲುಕ್ ಅಲ್ಲಿಯೇ ಶಿವಣ್ಣ ಕಾಣಿಸಿಕೊಂಡಿದ್ದರು. ಅದೇ ರೀತಿನೇ ವೀರಯೋಧನ ರೀತಿ ಶಿವಣ್ಣ ಇದೀಗ ಭೈರವನ ಕೊನೆ ಪಾಠ ಚಿತ್ರದಲ್ಲಿ ಕಾಣಿಸುತ್ತಿದ್ದಾರೆ. ಭೈರವನ ಕೊನೆ ಪಾಠ ಸಿನಿಮಾವನ್ನ ಡೈರೆಕ್ಟರ್ ಹೇಮಂತ್ ರಾವ್ ನಿರ್ದೇಶನದ ಮಾಡುತ್ತಿದ್ದಾರೆ. ಭೈರವನ ಕೊನೆ ಪಾಠ ಚಿತ್ರದ ಮೂಲಕ ಡೈರೆಕ್ಟರ್ ಹೇಮಂತ್ ರಾವ್ ಮತ್ತೊಂದು ಹೊಸ ಜಾನರ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಭೈರವನಾಗಿಯೇ ಶಿವಣ್ಣ ಅಭಿನಯಿಸುತ್ತಿದ್ದಾರೆ.
ಭೈರವನ ಕೊನೆ ಪಾಠದಲ್ಲಿ ಸಖತ್ ಲುಕ್.!
ಭೈರವನ ಕೊನೆ ಪಾಠ ಸಿನಿಮಾದಲ್ಲಿ ಶಿವಣ್ಣ ವೀರ ಯೋಧನ ರೀತಿ ಕಾಣಿಸುತ್ತಾರೆ. ಬಿಳಿ ಗಡ್ಡ-ಬಿಳಿ ತಲೆಗೂದಲು, ಯುದ್ಧಕ್ಕೆ ಸಜ್ಜಾದ ಪೋಷಾಕು, ಹಿಂಗೆ ಎಲ್ಲವೂ ಧರಿಸಿಕೊಂಡಿರೋ ಈ ಭೈರವ ತನ್ನ ಆಕ್ರೋಶವನ್ನ ವ್ಯಕ್ತಪಡಿಸಿದ್ದಾನೆ. ಆದರೆ, ಭೈರವನ ಈ ಕೊನೆ ಪಾಠದಲ್ಲಿ ಯಾವ ರೀತಿಯ ಕಥೆ ಇರುತ್ತದೆ ಅನ್ನೋದು ಇನ್ನು ರಿವೀಲ್ ಆಗಿಲ್ಲ.
ಎರಡ್ಮುರು ತಿಂಗಳ ಹಿಂದೆ ಒಂದು ಸುದ್ದಿ ಬಂದಿತ್ತು. ಶಿವಣ್ಣ ಮತ್ತು ಹೇಮಂತ್ ರಾವ್ ಸಿನಿಮಾ ಮಾಡ್ತಿದ್ದಾರೆ ಅನ್ನೋದೇ ಆ ನ್ಯೂಸ್ ಆಗಿತ್ತು. ಅಷ್ಟು ಬಿಟ್ರೆ, ಬೇರೆ ಏನು ಮಾಹಿತಿ ಹೊರ ಬಂದಿರಲಿಲ್ಲ. ಆದರೆ, ಮೊನ್ನೆ ಸಿನಿಮಾದ ಟೈಲ್ ರಿವೀಲ್ ಆಗಿತ್ತು. ಕೊನೆಗೆ ಸಿನಿಮಾದ ಫಸ್ಟ್ ಲುಕ್ ಇದೇ ಜುಲೈ-8 ರಂದು 8 ಗಂಟೆಗೆ ರಿಲೀಸ್ ಆಗುತ್ತದೆ ಅನ್ನೋ ಮಾಹಿತಿ ಹೊರ ಬಂದಿತ್ತು.
ಭೈರವನ ಕೊನೆ ಪಾಠದ ಮೊದಲ ಲುಕ್ ಔಟ್.!
ಹಾಗೆ ಇದೀಗ ಭೈರವನ ಕೊನೆ ಪಾಠ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಸಿನಿಮಾ ತಂಡವೇ ಹೇಳಿಕೊಂಡಂತೆ ಈ ಲುಕ್ ಅಧಿಕೃತವಾಗಿಯೇ ಹೊರ ಬಂದಿದೆ. ಒಂದಲ್ಲ, ಎರಡು ಲುಕ್ ಇರೋ ಪೋಸ್ಟರ್‌ಗಳು ಹೊರ ಬಂದಿವೆ. ಎರಡೂ ಪೋಸ್ಟರ್‌ಗಳಲ್ಲಿ ಶಿವಣ್ಣನ ಬೇರೆಯದ್ದೆ ರೂಪಗಳೂ ಇವೆ. ಶಿವರಾಜ್ ಕುಮಾರ್ 60 ವರ್ಷ ದಾಟಿದ್ದಾರೆ. ಆದರೆ, ಎಲ್ಲೂ ವಯಸ್ಸಾದ ರೀತಿ ಕಾಣೋದಿಲ್ಲ. ಅದನ್ನ ಅವರು ಎಲ್ಲೂ ಹೇಳೋದು ಇಲ್ಲ ಬಿಡಿ. ಆದರೆ, ಭೈರವನ ಕೊನೆ ಪಾಠ ಚಿತ್ರದಲ್ಲಿ ಶಿವಣ್ಣ ತಮ್ಮ ವಯಸ್ಸನ್ನು ಮೀರಿದ ಪಾತ್ರ ಮಾಡಿದ್ದಾರೆ. ಇದನ್ನ ಶಿವಣ್ಣನ ಫ್ಯಾನ್ಸ್ ಕೂಡ ತುಂಬಾನೆ ಮೆಚ್ಚಿಕೊಳ್ಳುತ್ತಿದ್ದಾರೆ.
ಭೈರವನ ಬೆಂಕಿ ಲುಕ್ ಎಂದ ಶಿವಣ್ಣನ ಫ್ಯಾನ್ಸ್.!
ಭೈರವನ ಕೊನೆ ಪಾಠ ಚಿತ್ರದ ಶಿವರಾಜ್ ಕುಮಾರ್ ಲುಕ್ ಅನ್ನ ಫ್ಯಾನ್ಸ್ ನೋಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೇ ಒಳ್ಳೆ ಮಾತುಗಳನ್ನೂ ಆಡಿದ್ದಾರೆ. ಮೆಚ್ಚುಗೆಯ ಮಾತುಗಳೊಂದಿಗೆ ಇದಕ್ಕಾಗಿಯೇ ಕಾಯುತ್ತಿದ್ದೇವು ನೋಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭೈರವನ ಕೊನೆ ಪಾಠ ಚಿತ್ರ ಟೈಟಲ್ ಹಾಗೂ ಲುಕ್ ಎರಡೂ ರಿಲೀಸ್ ಆಗಿದೆ. ಜುಲೈ-12 ರಂದು ಶಿವರಾಜ್ ಕುಮಾರ್ ಜನ್ಮ ದಿನದ ಹಿನ್ನೆಲೆಯಲ್ಲಿಯೇ ಈ ಎಲ್ಲ ಲುಕ್ ರಿವೀಲ್ ಆಗಿದೆ ಅಂತಲೇ ಹೇಳಬಹುದು.