ಚಿತ್ರದುರ್ಗ, ಜುಲೈ 12:
ನಗರದ ಅನುಪಮ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ವಿಶೇಷ “ಅಭಿನಂದನ ಸಮಾರಂಭ”ದಲ್ಲಿ ಅಂತರರಾಷ್ಟ್ರೀಯ ಕಬ್ಬಡಿ ಆಟಗಾರ ಶ್ರೀ ರಕ್ಷಿತ್ ಪೂಜಾರಿ ಅವರನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗೌರವಿಸಿದರು.
ಮೂಲತಃ ಮೈಸೂರಿನವರಾದ ರಕ್ಷಿತ್ ಪೂಜಾರಿ, ನಾಲ್ಕು ಬಾರಿ ರಾಷ್ಟ್ರ ಮಟ್ಟದ ಕಬ್ಬಡಿ ಸ್ಪರ್ಧೆಯಲ್ಲಿ ಭಾರತದ ಪರವಾಗಿ ಆಡಿದ್ದು, ಒಂದು ಬಾರಿ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಭಾರತವನ್ನು ಪ್ರತಿನಿಧಿಸಿ ಕೀರ್ತಿ ಗಳಿಸಿದ್ದಾರೆ. ಪ್ರಸ್ತುತ ಅವರು ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.
ಕರ್ನಾಟಕ ಸರ್ಕಾರದ “ಕ್ರೀಡಾರತ್ನ ಪ್ರಶಸ್ತಿ”, ಯುಥ್ ಸರ್ವಿಸ್‌ನ ಜೀಜಾಬಾಯಿ ಪ್ರಶಸ್ತಿ, ಇವು ಸೇರಿದಂತೆ ಅನೇಕ ಸಮ್ಮಾನಗಳನ್ನು ಪಡೆದ ಈ ಪ್ರತಿಭಾವಂತ ಆಟಗಾರರು ಯುವ ಸಮುದಾಯಕ್ಕೆ ಪ್ರೇರಣೆಯಾದ ವ್ಯಕ್ತಿ ಎನ್ನುತ್ತಾರೆ ಶಾಲೆಯವರು.
ಅಭಿನಂದನಾ ಸಮಾರಂಭದಲ್ಲಿ ಶಾಲೆಯ ಅಧ್ಯಕ್ಷರಾದ ಎಸ್. ಭಾಸ್ಕರ್, ಕಾರ್ಯದರ್ಶಿ ರಕ್ಷಣ್ ಎಸ್.ಬಿ, ಪ್ರಾಚಾರ್ಯ ಸಿ.ಡಿ. ಸಂಪತ್ ಕುಮಾರ್, ಚಿತ್ರದುರ್ಗದ ರಾಯರ ಸೇನೆ ಕಬ್ಬಡಿ ತಂಡದ ಮಾಲೀಕರಾದ ಮಧು ಶ್ರೀನಿವಾಸ್, ಮುಖ್ಯೋಪಾಧ್ಯಾಯರಾದ ವೆಂಕಟೇಶ್, ಹೆಡ್ ಕೋ-ಆರ್ಡಿನೇಟರ್ ಬಸವರಾಜ್ ಕೆ, ಮತ್ತು ಶಾಲೆಯ ಎಲ್ಲಾ ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ಈ ಕಾರ್ಯಕ್ರಮದ ಮೂಲಕ ಶಾಲೆಯು ಕ್ರೀಡಾ ಸಾಧಕರನ್ನು ಗುರುತಿಸಿ ಗೌರವಿಸುವ ಸಂತೋಷಕರ ಪರಂಪರೆಯನ್ನು ಮುಂದುವರೆಸಿದೆ.