ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 10 ಡಾ. ಬಿ ಆರ್ ಅಂಬೇಡ್ಕರ್‍ರವರು 1925ರ ಏಪ್ರಿಲ್ 10 ಮತ್ತು 11ರಂದು ದಲಿತರ ಉದ್ಧಾರಕ್ಕಾಗಿ ಹಮ್ಮಿ ಕೊಂಡಿದ್ದ ಬಹಿಷ್ಕೃತ ಹಿತ ಕಾರ್ಯಕಾರಿಣಿ ಸಭೆಯ ನೂರು ವರ್ಷದ ಸವಿ ನೆನಪಿಗಾಗಿ ಬಿಜೆಪಿವತಿಯಿಂದ ಭೀಮನ ಹೆಜ್ಜೆ ನೂರರ ಸಂಭ್ರಮ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಏ. 11 ರಿಂದ 15ರವರೆಗೆ ರಾಜ್ಯದಲ್ಲಿ ಸಂಚಾರ ಮಾಡಲಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್‍ರವರು ದಲಿತರ
ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯದ ನಿಪ್ಪಾಣಿಯಲ್ಲಿ 1925ರಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು ಈ
ಕಾರ್ಯಕ್ರಮದ ನಿಮಿತ್ತ ಕರ್ನಾಟಕದ 10 ಜಿಲ್ಲೆಗಳಲ್ಲಿ ಅಂಬೇಡ್ಕರ್ ರವರು ಸಂಚಾರ ನಡೆಸಿದರು ಇದರ ಸವಿ ನೆನಪಿಗಾಗಿ ಬಿಜೆಪಿ
ಪಕ್ಷದವತಿಯಿಂದ ಅಂಬೇಡ್ಕರ್ ಅವರ ಸ್ಮಾರಕಗಳನ್ನು ನಿರ್ಮಿಸಿ ಅವರ ತತ್ವಗಳನ್ನು ಇಂದಿನ ಯುವ ಪೀಳಿಗೆಗೆ ಸಾರಲು
ತೀರ್ಮಾನಿಸಿದೆ ಇದೇ ತಿಂಗಳ 11ರಂದು ವಿಧಾನಸೌಧದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ
ರಥಯಾತ್ರೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಾಲನೆ ನೀಡಲಿದ್ದು ಅಂದು ಮಧ್ಯಾಹ್ನ 2:30 ಸುಮಾರಿಗೆ
ಹಿರಿಯೂರಿನ ಜಾವನಗೊಂಡನಹಳ್ಳಿಯಲ್ಲಿ ರಥಯಾತ್ರೆ ಆಗಮಿಸಲಿದ್ದು ಬಿಜೆಪಿ ಪಕ್ಷದ ಜಿಲ್ಲಾ ಘಟಕದವತಿಯಿಂದ ಅದ್ದೂರಿಯಾಗಿ
ಬರಮಾಡಿಕೊಳ್ಳಲಾಗುವುದು ಹಿರಿಯೂರು ಚಿತ್ರದುರ್ಗ ಭರಮಸಾಗರದಲ್ಲಿ ಸಭೆಗಳನ್ನು ಆಯೋಜಿಸಿದ್ದು ಅಂಬೇಡ್ಕರ್ ಅವರಿಗೆ
ಕಾಂಗ್ರೆಸ್ ಮಾಡಿರುವ ಅವಮಾನಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಬಿಜೆಪಿ ಪಕ್ಷವು ಮುಂದಾಗಿದ್ದು ಈ ಹಿನ್ನಲೆಯಲ್ಲಿ ಈ
ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು 15 ರಂದು ನಿಪ್ಪಾಣಿಯಲ್ಲಿ ಬೃಹತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು
ತಿಳಿಸಿದರು.
ಬಿಜೆಪಿ ಪರಿಶಿಷ್ಟಜಾತಿ, ಪಂಗಡಗಳ ನಾಯಕರಾದ ಎನ್.ಮಹೇಶ, ಪಿ.ರಾಜೀವ್, ಮುನಿಸ್ವಾಮಿ ರಥಯಾತ್ರೆಯ ನೇತೃತ್ವ
ವಹಿಸಿದ್ದಾರೆ. ಬೈಕ್‍ಗಳಲ್ಲಿ ರ್ಯಾಲಿ ನಡೆಸುವ ಮೂಲಕ ಜಿಲ್ಲೆಗೆ ರಥಯಾತ್ರೆಯನ್ನು ಬರಮಾಡಿಕೊಳ್ಳ ಲಾಗುವುದು. ಪಕ್ಷದ ಪಕದ
ಮಾಜಿ ಸಚಿವರು, ಮಾಜಿ ಸಂಸದರು, ಹಾಲಿ ಮತ್ತು ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳಲಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯದವರು ಕಾರ್ಯಕ್ರಮದಲ್ಲಿ ಹೆಚ್ಚಿನ ಮತ್ತು
ಅಂಬೇಡ್ಕರ್ ಹೆಸರು ಬಳಸಿಕೊಳ್ಳುವ ಕಾಂಗ್ರೆಸ್ ದಲಿತರಿಗೆ ಸೂಕ್ತ ಸ್ಥಾನಮಾನ, ಅವಕಾಶ ನೀಡಿಲ್ಲ. ಅಂಬೇಡ್ಕರ್ ಅವರನ್ನೂ
ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ. ಉರಿಯುವ ಮನೆಯಂತಿರುವ ಕಾಂಗ್ರೆಸ್ ಪಕ್ಷಕ್ಕೆ ಹೋಗದಂತೆ ಅಂದೇ ಅಂಬೇಡ್ಕರ್
ದಲಿತರಿಗೆ ಕಿವಿಮಾತು ಹೇಳಿದ್ದರು ಬಿಜೆಪಿ ಪಕ್ಷವು ಅಂಬೇಡ್ಕರ್ ಬಗ್ಗೆ ಅಪಾರ ಗೌರವ ಹೊಂದಿದ್ದು, ಅವರ ಆದರ್ಶ, ವಿಚಾರಗಳನ್ನು
ತಿಳಿಸುವ ಪ್ರಯತ್ನವಾಗಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದ ಅವರು ಹಿರಿಯೂರಿನಿಂದ ಸಂಜೆ ಚಿತ್ರದುರ್ಗಕ್ಕೆ ಆಗಮಿಸುವ
ರಥಯಾತ್ರೆಯೂ ಚಳ್ಳಕೆರೆ ಗೇಟಿನಿಂದ ಮದಕರಿ ವೃತ್ತದ ಮೂಲಕ ಅಂಬೇಡ್ಕರ್ ಪ್ರತಿಮಗೆ ಮಾಲಾರ್ಪಣೆ ಮಾಡಿ ಓನಕೆ ಒಬವ್ವ
ವೃತ್ತದಲ್ಲಿ ಸಭೆಯನ್ನು ನಡೆಸಲಾಗುವುದು. ಇದರಲ್ಲಿ ರಾಜ್ಯ ಮಟ್ಟದ ಪಕ್ಷದ ನಾಯಕರ ಭಾಗವಹಿಸಲಿದ್ದಾರೆ ಎಂದರು.
ಬೆಂಗಳೂರಿನ ವಿಧಾನಸೌಧ ಮುಂಭಾಗದಿಂದ ಹೊರಟಿರುವ ರಥಯಾತ್ರೆಯು ನೆಲಮಂಗಲ, ಮಧುಗಿರಿ, ತುಮಕೂರು, ಚಿತ್ರದುರ್ಗ
ದಾವಣಗೆರೆ ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮಾರ್ಗವಾಗಿ ನಿಪ್ಪಾಣಿಯನ್ನು ಏಪ್ರಿಲ್ 15ರಂದು ತಲುಪಲಿದೆ. ಮಾಜಿ
ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ
ನಾಯಕರು, ಈ ಶಾಸಕರು, ಮುಖಂಡರು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಲಕ್ಷಾಂತರ ಜನರನ್ನು
ಸೇರಿಸಿ, ಬಾಬಾಸಾಹೇಬ್ ಅಂಬೇಡ್ಕರ್ ಸಮಾವೇಶ ಮಾಡುವ ಮೂಲಕ ಅವರ ವಿಚಾರಧಾರೆ, ಆದರ್ಶಗಳನ್ನು ಇಂದಿನ
ಜನಾಂಗಕ್ಕೆ ತಲುಪಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

ನೂರು ವರ್ಷಗಳ ಹಿಂದೆ ನಿಪ್ಪಾಣಿಯಲ್ಲಿ ನಡೆದ ಸಮಾವೇಶದಲ್ಲಿ ಅಂಬೇಡ್ಕರ್ ಅಸ್ಪೃಶ್ಯತೆ ನಿವಾರಣೆಗೆ ಶಿಕ್ಷಣದ ಅವಶ್ಯಕತೆ
ಪ್ರತಿಪಾದಿಸಿ, ಹಾಸ್ಟೆಲ್‍ಗಳು ಮತ್ತು ವಸತಿ ಶಾಲೆಗಳಿಗೆ ಆದ್ಯತೆ ನೀಡಲು ತಿಳಿಸಿದ್ದರು. ದೇಶ, ರಾಜ್ಯದಲ್ಲಿ ಅತಿ ಹೆಚ್ಚಿನ ಅವಧಿಗೆ
ಕಾಂಗ್ರೆಸ್ ಅಧಿಕಾರ ಚಲಾಯಿಸಿದೆ. ರಾಜ್ಯದಲ್ಲಿ 200 ಹಾಸ್ಟೆಲ್‍ಗಳು ಹಾಗೂ 100 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಗಳಿಲ್ಲ
ಬೆಳಗಾವಿಯಲ್ಲಿ ಮಹಾತ್ಮಗಾಂಧಿ ಅಧ್ಯಕ್ಷತೆಯಲ್ಲಿ ಎಐಸಿಸಿ ಅಧಿವೇಶನ ನಡೆದು 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾಂಗ್ರೆಸ್
ಸಮಾವೇಶ ಏರ್ಪಡಿಸಿತ್ತು ಇದರಲ್ಲಿ ಅಂಬೇಡ್ಕರ್ ರವರ ಬಗ್ಗೆ ಯಾವ ಮಾತನ್ನು ಸಹಾ ಕಾಂಗ್ರೆಸ್ ಆಡಿಲ್ಲ, ಅಂಬೇಡ್ಕರ್ ರವರನ್ನು
ಕಾಂಗ್ರೆಸ್ ಬರಿ ಮತ ಬ್ಯಾಂಕಿಗಾಗಿ ಉಪಯೋಗ ಮಾಡಿಕೊಳ್ಳುತ್ತಿದೆ ಅವರ ವಿಚಾರವನ್ನು ಜನತೆಗ ಮುಟ್ಟಿಸುವ ಕಾರ್ಯವನ್ನು
ಕಾಂಗ್ರೆಸ್ ಮಾಡುತ್ತಿಲ್ಲ ಎಂದು ದೂರಿದರು.

ಗೋಷ್ಟಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ಮುಖಂಡರಾದ ಮೋಹನ್, ರಘುಮೂರ್ತಿ, ವಕ್ತರರಾದ ನಾಗರಾಜ್
ಬೇದ್ರೇ, ದಗ್ಗೆ ಶಿವಪ್ರಕಾಶ್ ಶಂಭು, ರವಿ ಮಹಾಂತಣ್ಣ, ಸೇರಿದಂತೆ ಇತರರು ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1