ಭೀಮಸಮುದ್ರ ಗ್ರಾಮದೇವತೆಯಾದ ಮುರುಡಾಂಬಿಕ ದೇವಿಯ ಜಾತ್ರಾ ಮಹೋತ್ಸವ.

ವರದಿ ಮತ್ತು ಫೋಟೋ ಕೃಪೆ, ವೇದಮೂರ್ತಿ ಭೀಮಸಮುದ್ರ ಮೊ : 8088076203

ಭೀಮಸಮುದ್ರ : ಏ. 21 ಸೋಮವಾರದಿಂದ ಏ. 27 ಭಾನುವಾರದವರೆಗೆ ಗ್ರಾಮದೇವತೆಯಾದ ಮುರುಡ ಅಂಬಿಕಾ ದೇವಿಯ ಜಾತ್ರೆ ನಡೆಯುತ್ತದೆ.

ಸೋಮವಾರ ರಾತ್ರಿಯಿಂದ ದೇವಿಗೆ ಅರಿಶಿಣ ಕಾರ್ಯಕ್ರಮ, ಮತ್ತದೇಂಗಿತ್ತಿ ಶಾಸ್ತ್ರ, ಕಂಕಣ ಧಾರಣೆ, ಮಂಗಳವಾರ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಸಂಜೆ ಸಾರ್ ಭಾಂದಡೆ ಎಡೆ ಬುಧವಾರ ಸಂಜೆ 5:00ಗೆ ಹೂವಿನ ಪಲ್ಲಕ್ಕಿ ಗುರುವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆವರೆಗೆ ಉಚ್ಚಯ್ಯ, ಸಂಜೆ 4 ಗಂಟೆಗೆ ಬೇವು ಬೇಟೆ, ಶುಕ್ರವಾರ ಸಂಜೆ 4.00 ತೇರು, ಶನಿವಾರ ಸಂಜೆ 5.00 ಸಿಡಿ ಉತ್ಸವ, ಭಾನುವಾರ 8:00 ಯಿಂದ ಗಾವು ಮುಕ್ತಾಯಗೊಳ್ಳುತ್ತದೆ, ಎಂದು ಕಮಿಟಿಯ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

Views: 4

Leave a Reply

Your email address will not be published. Required fields are marked *