ಚಿತ್ರದುರ್ಗ| ಕೊಳಹಾಳ್ ಗ್ರಾಮದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಶಾಸಕ ಎಂ. ಚಂದ್ರಪ್ಪರಿಂದ ಭೂಮಿ ಪೂಜೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ. 15: ರಾಜಕಾರಣಿಯಾದವನು ಜನರ ಸಮಸ್ಯೆಗಳಿಗೆ ಸ್ಫಂದಿಸುವ ಗುಣವನ್ನು ಹೊಂದಿರಬೇಕು, ಆಗ ಮಾತ್ರ ಮತದಾರರ ಒಲವನ್ನು ಗಳಿಸಲು ಸಾಧ್ಯವಿದೆ ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಭರಮಸಾಗರ ಹೋಬಳಿಯ ಕೊಳಹಾಳ್ ಗ್ರಾಮದಲ್ಲಿ 5 ಕೋಟಿ ರೂ ವೆಚ್ಚದಲ್ಲಿ
ನೂತನ ಚೆಕ್ ಡ್ಯಾಂ ನಿರ್ಮಾಣದ ಕಾಮಗಾರಿಗೆ ಇಂದು ಭೂಮಿ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದ
ಅವರು. ಎಲ್ಲಿ ನೀರು ಹರಿಯುತ್ತದೆ ಅಂತಹ ಪ್ರದೇಶಗಳಲ್ಲಿ ಚಕ್ ಡ್ಯಾಂಗಳನ್ನು ನಿರ್ಮಾಣ ಮಾಡುವುದರಿಂದ ಅದು ಮುಂದೆ ಜೀವ
ನದಿಯಾಗಲಿದೆ. ಚಕ್ ಡ್ಯಾಂ ನಿರ್ಮಾಣದಿಂದ ಈ ಭಾಗದ ಜಾನುವಾರುಗಳಿಗೆ ನೀರು ಸಿಗಲಿದೆ ಅಲ್ಲದೆ ಈ ಭಾಗದ ರೈತರಿಗೆ ನೀರಿನ
ಅನುಕೂಲವಾಗಲಿದೆ. ಈ ದೃಷ್ಟಿಯಿಂದ ಇಲ್ಲಿ 5 ಕೋಟಿ ವೆಚ್ಚದಲ್ಲಿ ಚಕ್ ಡ್ಯಾಂನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

ವಿಧಾನ ಸೌದ ನಿರ್ಮಾಣಕ್ಕೆ ವೆಚ್ಚವಾಗಿದ್ದು 85 ಲಕ್ಷ ಆದರೆ ನಾನು ನಿರ್ಮಾಣ ಮಾಡುತ್ತಿರುವುದು 5 ಕೋಟಿ ವೆಚ್ಚದಲ್ಲಿ ಚಕ್ ಡ್ಯಾಂ,
ಈ ಗ್ರಾಮದವರು ನನ್ನನ್ನು ಗೌರವದಿಂದ ಕಾಣುತ್ತಾರೆ, ಪ್ರಮಾಣೀಕತೆಯನ್ನು ರೂಢಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ನಿಮ್ಮ
ಋಣವನ್ನು ತೀರಿಸುವ ಕಾರ್ಯವನ್ನು ಮಾಡಲಾಗುವುದು. ನಿಮ್ಮ ಎಲ್ಲಾ ಬೇಡಿಕೆಯನ್ನು ಈಡೇರಿಸಲಾಗುವುದು 100ಕ್ಕೆ ಶೇ.90 ರಷ್ಟು
ನಿಮ್ಮ ಕೆಲಸಗಳನ್ನು ಮಾಡಲಾಗಿದೆ. ಈ ಚಕ್ ಡ್ಯಾಂ ನಿಂದ ಸುತ್ತಾ-ಮುತ್ತಲ್ಲಿನ 10 ಹಳ್ಳಿಗಳ ಕೊಳವೆಭಾವಿಗಳಿಗೆ ನೀರಾಗಲಿದೆ. ಈ
ಭಾಗದ ಜನತೆ ನಮ್ಮ ಊರಿನ ಕೆರೆಗೆ ಪೈಪುನ ಲೈನ್ ಬಿಟ್ಟು ಹೋಗಿದೆ ಸೇರಿಸುವಂತೆ ಮನವಿ ಮಾಡಿದ್ದರ ಹಿನ್ನಲೆಯಲ್ಲಿ ಕೆರೆಗೆ
ನೀರನ್ನು ತರುವ ಕಾರ್ಯವನ್ನು ಮಾಡಲಾಗಿದೆ. ಮ್ತತೊಂದು ಕಡೆಯ ಕೆರೆಗೂ ಸಹಾ ಶಾಸಕರ ಅನುದಾನವನ್ನು ನೀಡಿದ್ದೇನೆ. ನೀರಿನ
ಸೌಲಭ್ಯದ ಜೊತೆಗೆ ಅಜ್ಜಪ್ಪನ ಹಳ್ಳಿ ಜೊತೆಗೆ 140 ಕೋಟಿ ವೆಚ್ಚದಲ್ಲಿ 10 ಎಕರೆ ಜಮೀನಿನಲ್ಲಿ ವಿದ್ಯುತ್ ಘಟಕವನ್ನು ನಿರ್ಮಾಣ
ಮಾಡಲಾಗುತ್ತದೆ. ಮುಂದಿನ 1 ತಿಂಗಳಲ್ಲಿ ಇದರ ಭೂಮಿ ಪೂಜೆ ನಡೆಯಲಿದೆ ಎಂದು ತಿಳಿಸಿದರು.

ಹಳ್ಳಿಗಳಲ್ಲಿ ನೀರಿದೆ ಆದರೆ ವಿದ್ಯುತ್ ಇಲ್ಲ ಇದನ್ನು ಈ ಗ್ರಾಮಸ್ಥರು ವಿದ್ಯುತ್‍ಗಾಗಿ ಮನವಿ ಮಾಡಿದ್ದು ಇದನ್ನು ಮನಗಂಡು ರೈತರ
ಅನುಕೂಲಕ್ಕಾಗಿ 140 ಕೋಟಿ ವೆಚ್ಚದಲ್ಲಿ ವಿದ್ಯುತ್ ಘಟಕವನ್ನು ಪ್ರಾರಂಭ ಮಾಡಲಾಗುತ್ತಿದೆ. ಇದಕ್ಕೆ ಜೋಗ್ ಪಾಲ್ಸ್ ನಿಂದ
ಅಜ್ಜಪ್ಪಹಳ್ಳಿಗೆ ವಿದ್ಯುತ್ ತರಲಾಗುತ್ತಿದೆ. ಮುಂದಿನ 1 ವರ್ಷದಲ್ಲಿ ಇದು ನಿರ್ಮಾಣವಾಗಲಿದೆ ಇದರಿಂದ ಮುಂದಿನ 40 ವರ್ಷ
ವಿದ್ಯುತ್ ಸಮಸ್ಯೆ ಇರುವುದಿಲ್ಲ, ಈಗಾಗಲೇ 50-60 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಿದ ಕರೆಗಳು ತುಂಬಿವೆ. ಇನ್ನೂ 3-4
ತಿಂಗಳಲ್ಲಿ ಇನ್ನೂ ಹಲವಾರು ಕೆರೆಗಳಿಗೆ ನೀರನ್ನು ತುಂಬಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.

ಈ ಭಾಗದ ರೈತರಿಗೆ ವಿದ್ಯುತ್ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ. ಇದಕ್ಕಾಗಿ 500 ಕೋಟಿ ರೂ.ಗಳನ್ನು ವೆಚ್ಚ
ಮಾಡಲಾಗುತ್ತಿದೆ. ಬೇರೆ ಶಾಸಕರುಗಳು ಕಡಿಮೆಮ ವೆಚ್ಚದಲ್ಲಿ ನಿರ್ಮಾಣ ಮಾಡಿದ ಶೌಚಾಲಯಗಳನ್ನು ಪೂಜೆ ಮಾಡುತ್ತಿದ್ದಾರೆ

ಆದರೆ ನಾನು 5,10,15 ಕೋಟಿ ವೆಚ್ಚದ ಚಕ್ ಡ್ಯಾಂ ನಿರ್ಮಾಣ ಕಾರ್ಯಕ್ಕೆ ಪೂಜೆಯನ್ನು ಮಾಡುತ್ತಿದ್ದೇನೆ. ನಾನು 30 ವರ್ಷದಿಂದ
ನಿಮ್ಮ ಆರ್ಶಿವಾದದಿಂದ ಶಾಸಕನಾಗಿದ್ದೇನೆ. ಸರ್ಕಾರದಲ್ಲಿ ಹಣ ಇರದಿದ್ದರು ಸಹಾ ಹೆದರಿಸಿ ಬೆದರಿಸಿ ಹಣವನ್ನು ತರಲಾಗುತ್ತಿದೆ.

ಯಾವ ರಾಜಕಾರಣಿಗೆ ಮಂತ್ರಿ ಎಂಎಲ್‍ಎ ಆಗುವುದು ಮುಖ್ಯವಲ್ಲ ಅದಕ್ಕೆ ಘಟನ್ಸ್ ಇರಬೇಕಿದೆ. ಕ್ಷೇತ್ರಕ್ಕೆ ಹಣವನ್ನು ತರುವ ಶಕ್ತಿ
ಇರಬೇಕಿದೆ. ಮತದಾರರಿಗೆ ನ್ಯಾಯವನ್ನು ಕೂಡಿಸುವ ಯೋಗ್ಯತೆ ಇರಬೇಕಿದೆ. ಆವಾಗ ಸಾರ್ವಜನಿಕ ಕೆಲಸಗಳು ಆಗುತ್ತವೆ.
ನೀವೆಲ್ಲಾ ನನಗೆ ರಸ್ತೆ ರಾಜ ಎಂದು ಹೆಸರನ್ನು ನೀಡಿದ್ದಾರ ಈಗ ಚಕ್ ಡ್ಯಾಂಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕೆರೆಗಳನ್ನು
ತುಂಬಿಸುವ ಕಾರ್ಯ ಶಾಲೆ-ಕಾಲೇಜುಗಳನ್ನು ನಿರ್ಮಾಣ ಮಾಡುವುದು. ರಾಜಕಾರಣಿಯಾದವನು ಜನರ ಸಮಸ್ಯೆಗಳಿಗೆ
ಸ್ಫಂದಿಸುವ ಗುಣವನ್ನು ಹೊಂದಿರಬೇಕು, ಆಗ ಮಾತ್ರ ಮತದಾರರ ಒಲವನ್ನು ಗಳಿಸಲು ಸಾಧ್ಯವಿದೆ. ಶಾಸಕರಾದವರು ತನ್ನ
ಕ್ಷೇತ್ರದ ಅಭೀವೃದ್ದಿಯ ಕಡೆಗೆ ಗಮನ ನೀಡಬೇಕು ಕ್ಷೇತ್ರವನ್ನು ನನ್ನ ಮನೆತನ ಎಂದು ತಿಳಿದು ಅದರ ಅಭೀವೃದ್ದಿಯನ್ನು
ಮಾಡಬೇಕಿದೆ ವಿರೋಧ ಪಕ್ಷದ ಸರ್ಕಾರದಲ್ಲಿಯೂ ಉತ್ತಮವಾದ ಅನುದಾನವನ್ನು ತರುವುದರ ಮೂಲಕ ಕ್ಷೇತ್ರದಲ್ಲಿ ಕೆಲಸಗಳು
ಆಗಲು ಸಾಧ್ಯವಿದೆ. ಎಂದರು.

ಈ ಸಂದರ್ಭದಲ್ಲಿ ಭರಮಸಾಗರ ಬಿಜೆಪಿ ಮಂಡಲದ ಅಧ್ಯಕ್ಷರಾದ ಶೈಲೇಶ್, ಕೊಳಹಾಳ್ ರಾಜಣ್ಣ ಚಿಕ್ಕಬೆನ್ನೂರು ರಾಜಣ್ಣ
ಬಸವರಾಜಣ್ಣ , ಓಬಣ್ಣ, ಪ್ರಕಾಶ್, ನಾಗೇಂದ್ರಣ್ಣ, ಈಶಣ್ಣ, ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಾದ ಮನೋಜ್, ಮತ್ತು ಊರಿನ
ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *