ಅಹ್ಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 356 ರನ್ಗಳಿಸಿತ್ತು. 357 ರನ್ಗಳ ಬೃಹತ್ ಗುರಿಯನ್ನ ಬೆನ್ನಟ್ಟಿದ ಇಂಗ್ಲೆಂಡ್ 34.2 ಓವರ್ಗಳಲ್ಲಿ 214 ರನ್ಗಳಿಗೆ ಆಲೌಟ್ ಆಗುವ ಮೂಲಕ 142 ರನ್ಗಳ ಸೋಲು ಕಂಡಿತು.

ಟಿ20 ಸರಣಿಯನ್ನ 4-1ರಲ್ಲಿ ಗೆದ್ದು ಬೀಗಿದ್ದ ಟೀಮ್ ಇಂಡಿಯಾ, ಇದೀಗ ಏಕದಿನ ಸರಣಿಯನ್ನೂ 3-0ಯಲ್ಲಿ ಗೆದ್ದು ಸಂಭ್ರಮಿಸಿದೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಅಭ್ಯಾಸವಾಗಿ ನಡೆದ ಸರಣಿಯಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಬ್ಯಾಟಿಂಗ್ನಲ್ಲಿ ಯಾವಾಗಲೂ ಬಲಿಷ್ಠ ಎನಿಸಿಕೊಂಡಿದ್ದ ಭಾರತ ಈ ಮೂರು ಪಂದ್ಯಗಳಲ್ಲೂ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡುವ ಮೂಲಕ ಬೌಲಿಂಗ್ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ.
ಅಹ್ಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 356 ರನ್ಗಳಿಸಿತ್ತು. 357 ರನ್ಗಳ ಬೃಹತ್ ಗುರಿಯನ್ನ ಬೆನ್ನಟ್ಟಿದ ಇಂಗ್ಲೆಂಡ್ 34.2 ಓವರ್ಗಳಲ್ಲಿ 214 ರನ್ಗಳಿಗೆ ಆಲೌಟ್ ಆಗುವ ಮೂಲಕ 142 ರನ್ಗಳ ಸೋಲು ಕಂಡಿತು.
ಬೃಹತ್ ಚೇಸ್ ಮಾಡಲೊರಟ ಇಂಗ್ಲೆಂಡ್ ಮೊದಲೆರಡು ಪಂದ್ಯಗಳಂತೆ ಇಂದೂ ಕೂಡ ಉತ್ತಮ ಆರಂಭ ಪಡೆಯಿತು. ಕೇವಲ 6.2 ಓವರ್ಗಳಲ್ಲಿ 60 ರನ್ಗಳ ಜೊತೆಯಾಟ ನೀಡಿತು. ಮೊದಲ ವಿಕೆಟ್ ನಂತರ ಮತ್ತೆ ಟೀಮ್ ಇಂಡಿಯಾ ಬೌಲರ್ಗಳು ಎದುರಾಳಿ ತಂಡಕ್ಕೆ ದೊಡ್ಡ ಜೊತೆಯಾಟ ನಡೆಸಲು ಅವಕಾಶ ನೀಡಲಿಲ್ಲ. ಡಕೆಟ್ 22 ಎಸೆತಗಳಲ್ಲಿ 8 ಬೌಂಡರಿ 34 ರನ್ಗಳಿಸಿದರೆ, ಸಾಲ್ಟ್ 21 ಎಸೆತಗಳಲ್ಲಿ 23 ರನ್ಗಳಿಸಿದರು.
ಇವರಿಬ್ಬರ ನಂತ ಬಂದ ಟಾಮ್ ಬ್ಯಾಂಟನ್ 41 ಎಸೆತಗಳಲ್ಲಿ 38, ಜೋ ರೂಟ್ 29 ಎಸೆತಗಳಲ್ಲಿ 24, ಹ್ಯಾರಿ ಬ್ರೂಕ್ 19, ಜೋಸ್ ಬಟ್ಲರ್ 6, ಲಿಯಾಮ್ ಲಿವಿಂಗ್ಸ್ಟೋನ್ 9, ಗಸ್ ಅಟ್ಕಿನ್ಸನ್ 19 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 38 ರನ್, ಮಾರ್ಕ್ವುಡ್ 9,ಆದಿಲ್ ರಶೀದ್ 0ಗೆ ವಿಕೆಟ್ ಒಪ್ಪಿಸಿದರು.
ಭಾರತದ ಪರ ಅರ್ಶದೀಪ್ ಸಿಂಗ್ 33ಕ್ಕೆ2, ಹರ್ಷಿತ್ ರಾಣ 31ಕ್ಕೆ 2, ವಾಷಿಂಗ್ಟನ್ ಸುಂದರ್ 43ಕ್ಕೆ1, ಅಕ್ಷರ್ ಪಟೇಲ್ 22ಕ್ಕೆ2, ಹಾರ್ದಿಕ್ ಪಾಂಡ್ಯ 38ಕ್ಕೆ2, ಕುಲ್ದೀಪ್ ಯಾದವ್ 1 ವಿಕೆಟ್ ಪಡೆದರು.
ಆರಂಭಿಕ ಆಘಾತ ನೀಡಿದ ಕೊಹ್ಲಿ-ಗಿಲ್
ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ಭಾರತಕ್ಕೆ ಬ್ಯಾಟಿಂಗ್ ಆಹ್ವಾನಿಸಿತು. ಸರಣಿಯಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಇಳಿದ ಭಾರತಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ನಾಯಕ ರೋಹಿತ್ ಶರ್ಮಾ (1) 2ನೇ ಓವರ್ನಲ್ ಮಾರ್ಕ್ ವುಡ್ ಬೌಲಿಂಗ್ನಲ್ಲಿ ಫಿಲ್ ಸಾಲ್ಟ್ಗೆ ವಿಕೆಟ್ ಒಪ್ಪಿಸಿದರು. ಆದರೆ 2ನೇ ವಿಕೆಟ್ಗೆ ಒಂದಾದ ಗಿಲ್ ಹಾಗೂ ಕೊಹ್ಲಿ 116 ರನ್ಗಳ ಜೊತೆಯಾಟ ನೀಡಿದರು. 55 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 52 ರನ್ಗಳಿಸಿ ರಶೀದ್ ಬೌಲಿಂಗ್ನಲ್ಲಿ ಸಾಲ್ಟ್ಗೆ ಕ್ಯಾಚ್ ನೀಡಿ ಔಟ್ ಆದರು.
ಶತಕ ಸಿಡಿಸಿದ ಉಪನಾಯಕ
ಕೊಹ್ಲಿ ವಿಕೆಟ್ ಕಳೆದುಕೊಂಡ ನಂತರ ಬಂದ ಶ್ರೇಯಸ್ ಅಯ್ಯರ್ 3ನೇ ವಿಕೆಟ್ಗೆ 104 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. 102 ಎಸೆತಗಳನ್ನು ಎದುರಿಸಿದ ಶುಭ್ಮನ್ ಗಿಲ್ 14 ಬೌಂಡರಿ, 3 ಸಿಕ್ಸರ್ಗಳ ನೆರವಿನಿಂದ 112 ರನ್ಗಳಿಸಿ ಅವರೂ ಕೂಡ ರಶೀದ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ನಂತರ ಬಂದ ಹಾರ್ದಿಕ್ ಪಾಂಡ್ಯ 9 ಎಸೆತಗಳಲ್ಲಿ 17 ರನ್ಗಳಿಸಿ ರಶೀದ್ಗೆ 4ನೇ ಬಲಿಯಾದರು.
ಕನ್ನಡಿಗ ಕೆಎಲ್ ರಾಹುಲ್ 29 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 40ರನ್ಗಳಿಸಿದರೆ, ಅಕ್ಷರ್ ಪಟೇಲ್ 13, ವಾಷಿಂಗ್ಟನ್ ಸುಂದರ್ 14, ಹರ್ಷಿತ್ ರಾಣಾ 13 ರನ್ಗಳಿಸಿದರು.
ಇಂಗ್ಲೆಂಡ್ ಪರ ಆದಿಲ್ ರಶೀದ್ 4 ವಿಕೆಟ್ ಪಡೆದು ಮಿಂಚಿದರು. ಅನುಭವಿ ಸ್ಪಿನ್ನರ್ ಆದಿಲ್ ರಶೀದ್ 64ಕ್ಕೆ 4, ಮಾರ್ಕ್ ವುಡ್ 45ಕ್ಕೆ2 , ಸಾಕಿಬ್ ಮಹ್ಮೂದ್ 68ಕ್ಕೆ1, ಗಸ್ ಅಟ್ಕಿನ್ಸನ್ 74ಕ್ಕೆ1, ಜೋ ರೂಟ್ 47ಕ್ಕೆ1 ವಿಕೆಟ್ ಪಡೆದರು.