ಸಿಬಿಐನಿಂದ ಒಂದು ವಾರ ಡಿಕೆಶಿಗೆ ಬಿಗ್ ರಿಲೀಫ್..!

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಸದ್ಯಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಕೋರ್ಟ್ ನಿಂದ ತಡೆಯಾಜ್ಞೆ ನೀಡಿದ್ದು, ಇನ್ನೂ ಒಂದು ವಾರ ರಿಲೀಫ್ ನೀಡಿದೆ. ಡಿಕೆಶಿ ವಿರುದ್ಧ ಸಿಬಿಐ ನಡೆಸುತ್ತಿದ್ದ ತನಿಖೆಗೆ ಈ ಹಿಂದೆ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಫೆಬ್ರವರಿ 24ಕ್ಕೆ ಸಿಬಿಐಗೆ ತನಿಖಾ ಪ್ರಗತಿ ವರದಿ ನೀಡುವಂತೆ ಸೂಚನೆ ನೀಡಿತ್ತು. ಈ ಸಂಬಂಧ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಡಿಕೆಶಿಗೆ ಇನ್ನೂ ಒಂದು ವಾರ ರಿಲೀಫ್ ನೀಡಿದೆ.

ಡಿಕೆ ಶಿವಕುಮಾರ್ ಅವರ ಮೇಲೆ ಅಕ್ರಮ ಆಸ್ತಿ ಕೇಸ್ ವಿಚಾರಣೆ ನಡೆಯುತ್ತಿದ್ದಾಗ, ನಾನೊಬ್ಬ ಕೃಷಿಕ. ಕೃಷಿಯ ಮೂಲದಿಂದಾನೇ ಆಸ್ತಿ‌ ಮಾಡಿರುವುದು ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಳಿಕ ಡಿಕೆ ಶಿವಕುಮಾರ್ ಅವರ ಆಸ್ತಿ ಮೌಲ್ಯ, ಬೆಳೆ ಬಗ್ಗೆ, ಪಹಣಿ ಬಗ್ಗೆ ಎಲ್ಲಾ ಸೇರಿ ಕೃಷಿಗೆ ಸಂಬಂಧಿಸಿದಂತೆ ಹಲವು ದಾಖಲೆಗಳನ್ನು ಸಿಬಿಐ ಹೊರ ತೆಗೆಸಿತ್ತು.

ಈ ಕೇಸ್ ಗೆ ಸಂಬಂಧಿಸಿದಂತೆ ಮತ್ತೆ ವಿಚಾರಣೆಗೆ ಬರುವುದಿತ್ತು. ಈ ನಡುವೆ ಕೋರ್ಟ್ ಒಂದು ವಾರಗಳ ಕಾಲ ರಿಲೀಫ್ ನೀಡಿದೆ. ಚುನಾವಣೆ ಬೇರೆ ಹತ್ತಿರವಾಗುತ್ತಿದ್ದು, ಡಿಕೆ ಶಿವಕುಮಾರ್ ಅವರಿಗೆ ಕೇಸ್ ಗಳನ್ನು ಎದುರಿಸಬೇಕಾ..? ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕಾ ತಿಳಿಯದಂತಾಗಿದೆ.

The post ಸಿಬಿಐನಿಂದ ಒಂದು ವಾರ ಡಿಕೆಶಿಗೆ ಬಿಗ್ ರಿಲೀಫ್..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/qMc7t5Y
via IFTTT

Leave a Reply

Your email address will not be published. Required fields are marked *