IND vs NZ: ಕಿವೀಸ್ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುನ್ನ ಹಾರ್ದಿಕ್ ಪಡೆಗೆ ಬಿಗ್​ ಶಾಕ್..!

india vs new zealand t20 series Ruturaj Gaikwad injury complaining wrist pain ahead of t20 series

ರಾಯ್‌ಪುರದಲ್ಲಿ ಗೆಲುವು ಸಾಧಿಸುವುದರೊಂದಿಗೆ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಗೆದ್ದು ಬೀಗಿದ್ದ ಭಾರತ (India Vs New Zealand), ಇದೀಗ ಇಂದೋರ್ ಪಂದ್ಯವನ್ನು ಗೆಲ್ಲುವ ಹೊಸ್ತಿಲಿನಲ್ಲಿದೆ. ಆದರೆ ಈ ಪಂದ್ಯದ ನಡುವೆ ಟೀಂ ಇಂಡಿಯಾದ ಪಾಳಯದಿಂದ ಆಘಾತಕ್ಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕಿವೀಸ್ ವಿರುದ್ಧದ ಏಕದಿನ ಸರಣಿ ಇಂದಿಗೆ ಮುಕ್ತಾಯವಾಗಲಿದ್ದು, ಇದರ ಬಳಿಕ ಟಿ20 ಸರಣಿ ಕೂಡ ನಡೆಯಲಿದೆ. ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಯುವ ತಂಡ ಕಿವೀಸ್ ವಿರುದ್ಧ ಟಿ20 ಸರಣಿಯಲ್ಲಿ ಸೆಣಸಲಿದೆ. ಆದರೆ ಈಗ ಹೊರಬಿದ್ದಿರುವ ಮಾಹಿತಿ ಪ್ರಕಾರ ತಂಡದ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ (Ruturaj Gaikwad) ಇಂಜುರಿಗೆ ತುತ್ತಾಗಿದ್ದು, ಇಡೀ ಸರಣಿಯಿಂದಲೇ ಹೊರಬೀಳುವ ಆತಂಕ ಎದುರಾಗಿದೆ.

ಟೀಂ ಇಂಡಿಯಾ ಟಿ20 ತಂಡದ ಪ್ರಮುಖ ಆಟಗಾರನಾಗಿರುವ ರುತುರಾಜ್ ಗಾಯಕ್ವಾಡ್ ಸಂಪೂರ್ಣವಾಗಿ ಫಿಟ್ ಆಗಿಲ್ಲದ ಕಾರಣ ಅವರು ಟಿ20 ಸರಣಿ ಆಡುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ಸುದ್ದಿ ಪ್ರಕಾರ, ಗಾಯಕ್ವಾಡ್ ಮಣಿಕಟ್ಟು ನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಕಳುಹಿಸಲಾಗಿದೆ. ಹೈದರಾಬಾದ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ರುತುರಾಜ್ ಈ ಇಂಜುರಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.

IND vs NZ: ರಿಕಿ ಪಾಂಟಿಂಗ್- ಜಯಸೂರ್ಯ ದಾಖಲೆಯನ್ನು ಸರಿಗಟ್ಟಿದ ಹಿಟ್​ಮ್ಯಾನ್!

ಪೃಥ್ವಿ ಶಾಗೆ ಅವಕಾಶ?

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯು ಜನವರಿ 27 ರಿಂದ ಆರಂಭವಾಗಲಿದ್ದು, ಗಾಯಕ್ವಾಡ್ ಸಮಯಕ್ಕೆ ಸರಿಯಾಗಿ ಫಿಟ್ ಆಗದಿದ್ದರೆ, ಈ ಸರಣಿಗೆ ಆಯ್ಕೆಯಾಗಿರುವ ಪೃಥ್ವಿ ಶಾ ಓಪನರ್ ಆಗಿ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ. 2021 ರ ಶ್ರೀಲಂಕಾ ಪ್ರವಾಸದಲ್ಲಿ ಭಾರತದ ಪರ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯವನ್ನು ಆಡಿದ್ದ ಪೃಥ್ವಿ ಶಾ ಅಂದಿನಿಂದ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಇನ್ನು ಬೆನ್ನಿನ ಇಂಜುರಿಯಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಈಗಾಗಲೇ ಎನ್‌ಸಿಎಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 4 ಟೆಸ್ಟ್ ಸರಣಿಯ ಮೊದಲ 2 ಟೆಸ್ಟ್ ಪಂದ್ಯಗಳಿಗೆ ಅಯ್ಯರ್ ತಂಡದಲ್ಲಿ ಆಯ್ಕೆಯಾಗಿದ್ದು, ಮುಂದಿನ ತಿಂಗಳು ಸರಣಿ ನಡೆಯಲಿದೆ.

ಅದ್ಭುತ ಫಾರ್ಮ್‌ನಲ್ಲಿರುವ ಗಾಯಕ್ವಾಡ್

ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಗಾಯಕ್ವಾಡ್ ಉತ್ತಮ ಪ್ರದರ್ಶನ ನೀಡದೆ ಇರಬಹುದು. ಆದರೆ ಅವರು ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಪ್ರಸಕ್ತ ರಣಜಿ ಟ್ರೋಫಿಯಲ್ಲಿ ತಮಿಳುನಾಡು ವಿರುದ್ಧ 195 ರನ್‌ಗಳ ದೊಡ್ಡ ಇನಿಂಗ್ಸ್ ಆಡಿದ್ದ ರುತುರಾಜ್, ಅದಕ್ಕೂ ಮುನ್ನ ಆಂಧ್ರಪ್ರದೇಶ ಮತ್ತು ಸೌರಾಷ್ಟ್ರ ವಿರುದ್ಧ ಅರ್ಧಶತಕ ಬಾರಿಸಿದ್ದರು. ಕಳೆದ 10 ಪಂದ್ಯಗಳಲ್ಲಿ 5 ಶತಕ ಮತ್ತು 2 ಅರ್ಧ ಶತಕಗಳನ್ನು ಬಾರಿಸಿರುವ ಗಾಯಕ್ವಾಡ್ , ಒಂದು ಅಜೇಯ ದ್ವಿಶತಕವನ್ನು ಬಾರಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/india-vs-new-zealand-t20-series-ruturaj-gaikwad-injury-complaining-wrist-pain-ahead-of-t20-series-psr-au14-507744.html

Leave a Reply

Your email address will not be published. Required fields are marked *