ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವಗಾಂಧಿ ಮತ್ತು ದೇವರಾಜ್ ಅರಸ್ ರವರು ಜನ್ಮ ದಿನಾಚರಣೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. ೨೦ : ರಾಜೀವ ಗಾಂಧಿಯವರು ದೇಶದಲ್ಲಿ ಅಭಿವೃದ್ದಿ ಪೂರಕವಾದ ಯೋಜನೆಗಳನ್ನು ಹಾಗೂ ತಂತ್ರಜ್ಞಾನವನ್ನು ಜಾರಿ ಮಾಡಿದರೆ ರಾಜ್ಯದಲ್ಲಿ ದೇವರಾಜ್ ಅರಸ್‌ರವರು ಬಡತನ, ಹಿಂದುಳಿದ ವರ್ಗದವರ ಧ್ವನಿಯಾಗಿ ಕೆಲಸವನ್ನು ಮಾಡಿದ್ದಾರೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ತಿಳಿಸಿದರು.

ಚಿತ್ರದುರ್ಗ ನಗರದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ವಿಭಾಗ ಮತ್ತು ರಾಜೀವಗಾಂಧಿ ಪಂಚಾಯತ್‌ರಾಜ್ ಸಂಘಟನೆವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನ ಮಂತ್ರಿ ರಾಜೀವಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್‌ರವರು ೧೦೯ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಇಬ್ಬರು ಮಹಾನೀಯರ ಭಾವಚಿತ್ರಕ್ಕೆ ಪುಷ್ಪ ನಮನಸಲ್ಲಿಸಿ ಮಾತನಾಡಿದರು. ರಾಜೀವಗಾಂಧಿ ಮತ್ತು ದೇವರಾಜ್ ಅರಸ್ ರವರು ನಡೆದ ದಾರಿಯಲ್ಲಿ ಅವರ ತತ್ವ ಮತ್ತು ಆದರ್ಶಗಳನ್ನು ಮೈಗೊಡಿಸಿಕೊಂಡು ನಾವುಗಳು ಪ್ರಮಾಣಿಕತೆಯಿಂದ ನಡೆಯಬೇಕಿದೆ, ಅರಸು ರವರು ಎರಡು ಭಾರಿ ಮುಖ್ಯಮಂತ್ರಿಗಳಾಗಿ ಉತ್ತಮವಾದ ಆಡಳಿತವನ್ನು ನೀಡಿದ್ದಾರೆ, ಬಡವರಿಗೆ ಧ್ವನಿಯಾಗಿ ಕೆಲಸವನ್ನು ಮಾಡಿ ಅವರಿಗೆ ಉತ್ತಮವಾದ ಸ್ಥಾನಗಳನ್ನು ನೀಡಿದ್ದಾರೆ. ಮೈಸೂರನ್ನು ಕರ್ನಾಟಕ ಎಂದು ನಾಮಕರಣವನ್ನು ಮಾಡಿದ ಕೀರ್ತಿ ಅರಸುರವರಿಗೆ ಸಲ್ಲುತ್ತದೆ ಎಂದರು.

ರಾಜೀವಗಾಂಧಿಯವರು ಪ್ರಧಾನಮಂತ್ರಿಯಾಗಿ ತಮ್ಮ ಆಡಳಿತದಲ್ಲಿ ದೇಶ ಉತ್ತಮವಾದ ಪ್ರಗತಿಯನ್ನು ಸಾಧಿಸುವಲ್ಲಿ ಪ್ರಮುಖವಾದ ಪಾತ್ರವನ್ನುವಹಿಸಿದ್ದಾರೆ, ಇಂದು ನಾವು ಬಳಸುವ ಮೊಬೈಲ್ ರಾಜೀವಗಾಂಧಿ ಯವರ ಕನಸಾಗಿತ್ತು ಅದನ್ನು ಅವರು ನಮ್ಮ ದೇಶಕ್ಕೆ ತರುವುದರ ಮೂಲಕ ಎಲ್ಲಾ ದೇಶಗಳಂತೆ ನಮ್ಮ ದೇಶವು ತಂತ್ರಜ್ಞಾನದಲ್ಲಿ ಪ್ರಗತಿಯನ್ನು ಸಾಧಿಸುವಲ್ಲಿ ದಾಪುಗಾಲು ಹಾಕಿತ್ತು. ಇದ್ದಲ್ಲದೆ 18 ವರ್ಷ ವಯಸ್ಸಿನವರಿಗೆ ಮತದಾನದ ಹಕ್ಕನ್ನು ನೀಡುವುದರ ಮೂಲಕ ದೇಶದ ಪ್ರಗತಿಯಲ್ಲಿ ಅವರ ಕಾಣಿಕೆ ಇರಬೇಕೆಂದು ಬಯಸಿದ್ದವರು ರಾಜೀವಗಾಂಧಿಯವರು ಎಂದ ಅವರು. ಇಬ್ಬರು ಮಹಾನೀಯರ ಚಿಂತನೆಗಳನ್ನು ನಾವುಗಳು ಸಾಧ್ಯವಾದಷ್ಟು ಮೈಗೂಡಿಸಿಕೊಳ್ಳಬೇಕಿದೆ ಎಂದು ಸುಧಾಕರ್ ಕರೆ ನೀಡಿದರು.

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಇತರೆ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷರಾದ ಎನ್.ಡಿ.ಕುಮಾರ್ ಮಾತನಾಡಿ, ರಾಜ್ಯದಲ್ಲಿ ಉತ್ತಮವಾಗಿ ಕೆಲಸವನ್ನು ಮಾಡುವವರ ವಿರುದ್ದ ಷಡ್ಯಂತ್ರ ನಡೆಯುತ್ತದೆ ಇದೆ ರೀತಿ ದೇವರಾಜ್ ಅರಸು ರವರ ಮೇಲೊ ಸಹಾ ಅವರ ವಿರುದ್ದ ಷಡ್ಯಂತ್ರ ನಡೆದಿದ್ದು ಇವುಗಳನ್ನು ಎಲ್ಲಾ ಮೀರಿ ಅರಸು ರವರು ಉತ್ತಮವಾದ ಆಡಳಿತವನ್ನು ನೀಡಿದರು ಈಗಲೂ ಸಹಾ ಸಿದ್ದರಾಮಯ್ಯರವರ ಮೇಲೆ ಇದೇ ರೀತಿ ವಿರೋಧ ಪಕ್ಷಗಳಿಂದ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಷಡ್ಯಂತ್ರ ನಡೆಯುತ್ತಿದೆ ಆದರೆ ಇದಕ್ಕೆ ಕಾಂಗ್ರೆಸ್ ಬಗ್ಗುವುದಿಲ್ಲ ಸಿದ್ದರಾಮಯ್ಯ ಪರವಾಗಿ ರಾಜ್ಯವೇ ನಿಂತಿದೆ ರಾಜ್ಯದಲ್ಲಿ ವಿವಿಧ ರೀತಿಯ ಭಾಗ್ಯಗಳನ್ನು ನೀಡುವುದರ ಮೂಲಕ ಭಾಗ್ಯಗಳ ಸರದಾರ ಎಂದು ಹೆಸರು ಮಾಡಿದ್ದಾರೆ. ಎಂದ ಅವರು ರಾಜೀವಗಾಂಧಿಯವರು ಸಹಾ ದೇಶಕ್ಕೆ ಉತ್ತಮವಾದ ಆಡಳಿತವನ್ನು ನೀಡಿದ್ದಾರೆ. ಅವರ ಕಾಲದಲ್ಲಿ ದೇಶ ತಂತ್ರಜ್ಞಾನದಲ್ಲಿ ಪ್ರಗತಿಯನ್ನು ಕಂಡಿತು ಎಂದರು.

ಅಖಿಲ ಭಾರತ ರಾಜೀವಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ರಾಷ್ಟ್ರೀಯ ಸಂಚಾಲಕರು, ಜಿಲ್ಲಾಧ್ಯಕ್ಷರಾದ ಡಾ.ಕೆ.ಅನಂತರವರು ಮಾತನಾಡಿ, ರಾಜೀವಗಾಂಧಿಯವರು ತಮ್ಮ ಆಡಳಿತದಲ್ಲಿ ಹಲವಾರು ಯೋಜನೆಗಳನ್ನು ಜಾರಿ ಮಾಡುವುದರ ಮೂಲಕ ದೇಶದ ಪ್ರಗತಿಗೆ ತಮ್ಮದೆ ಆದ ಕೂಡುಗೆಯನ್ನು ನೀಡಿದ್ದರು. ಬೇರೆ ದೇಶಗಳಲ್ಲಿ ನಮ್ಮಮ ದೇಶವೂ ಸಹಾ ಪೈಪೋಟಿ ಮಾಡಬೇಕೆಂದು ಬಯಸಿದ್ದ ಅವರು ಬೇರೆ ದೇಶದ ತಂತ್ರಜ್ಞಾನವನ್ನು ನಮ್ಮ ದೇಶದಲ್ಲಿಯೇ ತಯಾರು ಮಾಡುವುದರ ಮೂಲಕ ದೇಶವನ್ನು ಮುನ್ನಡೆಸಿದರು. ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿಯನ್ನು ತರುವುದರ ಮೂಲಕ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗದವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ತಿದ್ದುಪಡಿಯನ್ನು ತರುವುದರ ಮೂಲಕ ಅವರನ್ನು ಸಹಾ ಮುಖ್ಯವಾಹಿನಿಗೆ ತರುವಂತ ಕಾರ್ಯವನ್ನು ಮಾಡಿದರು ಎಂದರು.

ಕಾರ್ಯಕ್ರಮದಲ್ಲಿ ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಸರ್ಕಾರದ ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷರಾದ ಆರ್,ಶಿವಣ್ಣ, ನಗರಸಭೆಯ ಮಾಜಿ ಅಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ ರಾಜೀವಗಾಂಧಿ ಹಾಗೂ ದೇವರಾಜ್ ಆರಸು ರವರ ಬಗ್ಗೆ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಡಿಸಿಸಿ ಅಧ್ಯಕ್ಷರಾದ ತಾಜ್‌ಪೀರ್ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಸಂಪತ್ ಕುಮಾರ್, ಮೈಲಾರಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಗೀತಾ ನಂದಿನಿಗೌಡ, ಪ್ರಕಾಶ್, ನಜ್ಮಾತಾಜ್, ಮೋಕ್ಷಾ ರುದ್ರಸ್ವಾಮಿ, ರವಿಕುಮಾರ್, ಶಬ್ಬಿರ್, ಮುದಸಿರ್ ನವಾಜ್, ಸುದರ್ಶನ್, ನಾಗರಾಜ್, ರಮೇಶ್ ಬಾಬು, ರಾಜು, ನಗರಸಭಾದ ಸದಸ್ಯರಾದ ಮೀನಾಕ್ಷಿ, ಮಾಜಿ ಅಧ್ಯಕ್ಷರಾದ ಹೆಚ್.ಮಂಜಪ್ಪ, ಮೃತುಂಜಯ ಸುಧಾ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *