ಚಿತ್ರದುರ್ಗ ಅ. 02
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಗಾಂಧೀಜಿಯವರು ತಮ್ಮ ಜೀವಿತಾವಧಿಯಲ್ಲಿ ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚಿನ ಒತ್ತನ್ನು ನೀಡಿದ್ದರು ಇದರಿಂದ ನಮ್ಮಲ್ಲಿನ ಗುಡಿ ಕೈಗಾರಿಕೆಗಳು ಬೆಳೆಯಲು ಕಾರಣವಾಗುತ್ತದೆ ಈ ಹಿನ್ನಲೆಯಲ್ಲಿ ನಾವು ಸಹಾ ಸ್ವದೇಶಿ ಉತ್ಪನ್ನಗಳನ್ನು ಬಳಸುವುದರ ಮೂಲಕ ಅವರಿಗೆ ನೆರವಾಗಬೇಕಿದೆ ಎಂದು ಭಾರತೀಯ ಜನತಾ ಪಾರ್ಟಿಯ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ ತಿಳಿಸಿದರು.

ಚಿತ್ರದುರ್ಗ ನಗರದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156 ಹಾಗೂ ದೇಶದ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರು ಶಾಸ್ತ್ರಿಯವರ 121ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿನ ಉತ್ಪನ್ನಗಳನ್ನು ನಾವು ಬಳಕೆ ಮಾಡುವುದರಿಂದ ನಮ್ಮ ಗುಡಿ ಕೈಗಾರಿಕೆಗಳಿಗೆ ನೆರವು ನೀಡಿದಂತೆ ಆಗುತ್ತದೆ, ಈ ಹಿನ್ನಲೆಯಲ್ಲಿ ನಾವುಗಳು ಸಾಧ್ಯವಾದಷ್ಟು ವಿದೇಶಿ ಉತ್ಪನ್ನಗಳನ್ನು ಬಳಕೆ ಮಾಡದೆ ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡಬೇಕಿದೆ ಎಂದರು.
ನಮ್ಮ ಪಕ್ಷದಲ್ಲಿ ಸೆ. 17 ರಿಂದ ಅ,02 ರವರೆಗೆ 15 ದಿನಗಳ ಕಾಲ ಸೇವಾ ಪಾಕ್ಷಿಕವನ್ನು ಆಚರಣೆ ಮಾಡಲಾಯಿತು, ಇದರಲ್ಲಿ ಸ್ವಚ್ಚತಾ ಅಭಿಯಾನ, ತಾಯಿಯ ಹೆಸರಿನಲ್ಲಿ ಒಂದು ಸಸಿ, ರಕ್ತದಾನ ಆರೋಗ್ಯ ಶಿಬಿರ ಕ್ರೀಡೆ ಹಾಗೂ ಚಿತ್ರಕಲಾ ಸ್ಪರ್ದೆಯಂತಹ ಕಾರ್ಯಕ್ರಮಗಳನ್ನು ನಮ್ಮ ವಿವಿಧ ಘಟಕದವರು ಉತ್ತಮವಾಗಿ ನಡೆಸಿ ಕೊಟ್ಟಿದ್ದಾರೆ. ಸ್ವಚ್ಚಾತಾ ಅಭಿಯಾನದಲ್ಲಿ ಶಾಲಾ-ಕಾಲೇಜು, ಆಸ್ಪತ್ರೆ, ರೈಲ್ವೆನಿಲ್ದಾಣ, ಬಸ್‍ನಿಲ್ದಾಣ, ದೇವಸ್ಥಾನ, ಉದ್ಯಾನವನ ಐತಿಹಾಸಿಕ ಸ್ಥಳಗಳಲ್ಲಿ ಸ್ಚಚ್ಚತಾ ಅಭಿಯಾನ ನಡೆಸಲಾಗಿದೆ. ಮೋದಿಯವರ ಜೀವನ ಅಧಾರಿತ ಪ್ರದರ್ಶನ, ಪ್ರಬುದ್ದರ ಗೋಷ್ಟಿ, ಸಾಕ್ಷ್ಯಚಿತ್ರ ವೀಕ್ಷಣೆ, ಪುಸ್ತಕ ವಿತರಣೆ, ಮೋದಿ ವಿಕಾಸ ಮ್ಯಾರಥಾನ್ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ತಿಳಿಸಿದರು.
ಈ 15 ದಿನದ ಸೇವಾ ಪಾಕ್ಷಿಕದಲ್ಲಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬ ಹಾಗೂ ಪಂಡಿತ್ ದೀನ ದಯಾಳ ಉಪಾಧ್ಯಾಯರವರ ಜನ್ಮ ದಿನಾಚರಣೆ, ವಿಕಸಿನ ಭಾರತ, ಆತ್ಮ ನಿರ್ಭರ ಕಾರ್ಯಕ್ರಮವನ್ನು ಮಾಡಲಾಗಿದೆ ಬೇರೇ ಪಕ್ಷಗಳಿಗಿಂತ ನಮ್ಮ ಪಕ್ಷ ವಿಭಿನ್ನವಾಗಿದೆ ನಮ್ಮಲ್ಲಿ ಸೇವೆಯನ್ನು ಮಾಡುವುದು ಮುಖ್ಯವಾದ ಉದ್ಧೇಶವಾಗಿದೆ ಈ ಹಿನ್ನಲೆಯಲ್ಲಿ ಈ 15 ದಿನ ವಿವಿಧ ರೀತಿಯ ಸೇವೆಯನ್ನು ನಮ್ಮ ವಿವಿಧ ಮಂಡಲಗಳಿಂದ ಮಾಡಿಸಲಾಗಿದೆ ಎಂದು ತಿಳಿಸಿದ ಅವರು, ನಾವುಗಳು ಸಾಧ್ಯವಾದಷ್ಟು ಸ್ವದೇಶಿ ವಸ್ತುಗಳನ್ನು ಬಳಕೆ ಮಾಡುವುದರ ಮೂಲಕ ಗುಡಿ ಕೈಗಾರಿಕೆಗಳಿಗೆ ಸಹಾಯ ಮಾಡುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ನಗರಾಧ್ಯಕ್ಷ ಲೋಕೇಶ್, ರಾಜ್ಯ ಮಹಿಳಾ ಮೋರ್ಚಾದ ಸದಸ್ಯರಾದ ಶ್ಯಾಮಾಲ ಶಿವಪ್ರಕಾಶ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ನಗರಾಧ್ಯಕ್ಷ ಕೆ.ನಾಗರಾಜ್ ಉಪ್ಪೇರಿಗಿನ ಹಳ್ಳಿ, ಮಾಜಿ ನಗರಾದ್ಯಕ್ಷ ಚಾಲುಕ್ಯ ನವೀನ್, ಮುಖಂಡರಾಧ ನಂದಿ ನಾಗರಾಜ್, ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನಿಂಗೇಶ್, ಬಸವರಾಜು, ಕಿರಣ್, ಸುಮಾ, ರೈತ ಮೋರ್ಚಾ ನಗರಧ್ಯಕ್ಷ ಲಕ್ಷ್ಮೀ ನರಸಿಂಹಸ್ವಾಮಿ, ಮಲ್ಲಿಕಾರ್ಜನ್, ನಾಗರಾಜು, ಸಿದೇಶ್ ದೇವಪುರದಟ್ಟಿ, ರಮೇಶ್, ಸಂಜಯ್, ಕಾತೀಕ್, ಬಾಲಾಜಿ ದೇವೇಂದ್ರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 15