ಬಿಜೆಪಿ ಜಿಲ್ಲಾಘಟಕ ಹಾಗೂ ಎಸ್.ಸಿ.ಮೋರ್ಚದಿಂದ ಡಾ.ಬಿ.ಆರ್. ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಸಂಘಟನೆಗೆ ದುಡಿದವರಿಗೆ ಆದ್ಯತೆಯನ್ನು ಕೊಡುವ ಪರಿಪಾಠವನ್ನು ಬಿಜೆಪಿ ಮುಂದುವರಿಸಿಕೊಂಡು ಹೋಗುವ ಸಾಧ್ಯತೆಯಿದೆ ಎನ್ನುವ ಮಾತು ನಿಜವಾಗಿದೆ. ಪಕ್ಷ ನಿಷ್ಠೆಯ ಹಿನ್ನಲೆಯಲ್ಲಿ ಛಲವಾದಿ ನಾರಾಯಣಸ್ವಾಮಿಯವರ ಹೆಸರನ್ನು ಬಿಜೆಪಿ ಅಂತಿಮ ಗೊಳಿಸಿ, ಪ್ರಕಟಿಸಿದೆ. ಸಾಮಾಜಿಕ ನ್ಯಾಯಕ್ಕೆ ಬಿಜೆಪಿ ಹೈಕಮಾಂಡ್ ಪ್ರಾಮುಖ್ಯತೆಯನ್ನು ನೀಡಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಲಿಂಗಾಯತ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಒಕ್ಕಲಿಗ ಮತ್ತು ಈಗ ಮೇಲ್ಮನೆಯಲ್ಲಿ ಎಸ್.ಸಿ. ಸಮುದಾಯದ ನಾಯಕನಿಗೆ ಮಣೆಹಾಕಲಾಗಿದೆ ಎಂದರು.

ಬಿಜೆಪಿಯಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡಿದವರಿಗೆ ಕಾಲಕ್ಕೆ ಸರಿಯಾಗಿ ಹೈಕಮಾಂಡ್ ಮನ್ನಣೆಯನ್ನು ನೀಡುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಈ ಪಕ್ಷದಲ್ಲಿರುವವರು ಯಾವುದೇ ಅಧಿಕಾರಕ್ಕೆ ಅಸೆಯನ್ನು ಪಡೆದೆ ನಿಸ್ವಾರ್ಥವಾಗಿ ಪಕ್ಷವಹಿಸಿದ ಕೆಲಸವನ್ನು ಮಾಡಿದ್ದೇ ಆದರೆ ಮುಂದಿನ ದಿನಮಾನದಲ್ಲಿ ಈ ರೀತಿಯಾದ ಸ್ಥಾನಗಳು ಲಭ್ಯವಾಗಲಿದೆ, ಛಲವಾದಿ ನಾರಾಯಣಸ್ವಾಮಿಯವರು ಹಲವಾರು ವರ್ಷಗಳಿಂದ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸವನ್ನು ಮಾಡಿದ್ದಾರೆ. ಅವರನ್ನು ಪಕ್ಷ ಈಗ ಗುರುತಿಸಿ ಉತ್ತಮವಾದ ಸ್ಥಾನವನ್ನು ನೀಡಿದೆ ಎಂದರು. 

ಈ ಸಂದರ್ಭದಲ್ಲಿ ನಗರಾಧ್ಯಕ್ಷ ನವೀನ್ ಚಾಲುಕ್ಯ, ಜಿಲ್ಲಾ ಎಸ್.ಸಿ,ಮೋರ್ಚದ ಅಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್,ಬಿಜೆಪಿ ಜಿಲ್ಲಾ ವಕ್ತಾರ ಬೇಂದ್ರೆ ನಾಗರಾಜ್, ದಗ್ಗೆ ಶಿವಪ್ರಕಾಶ್, ಚಲುವಾದಿ ತಿಪ್ಪೇಸ್ವಾಮಿ, ಅರುಣ್, ಕವಿತಾ, ಭಾರತೀ, ಬಸಮ್ಮ, ನಗರಸಭಾ ಸದಸ್ಯರಾದ ಹರೀಶ್, ಶಂಭು, ಕಿರಣ್, ಪ್ರಭು ಸಿಂಧುತನಯ ಸೇರಿದಂತೆ ಇತರರು ಭಾಗವಹಿಸಿದರು ಇದೇ ಸಂದರ್ಭದಲ್ಲಿ ಸಿಹಿಯನ್ನು ಹಂಚಲಾಯಿತು.

Views: 0

Leave a Reply

Your email address will not be published. Required fields are marked *