ಬೆಲೆ- ತೆರಿಗೆ ಹೆಚ್ಚಳದ ಮೂಲಕ ಬಡವರಿಗೆ ಬರೆ ಎಳೆಯುವ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಹೋರಾಟ-: ಎ.ಮುರಳಿ

ಚಿತ್ರದುರ್ಗ ಏ. ೦೧ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಏಪ್ರಿಲ್ ೨ರಂದು ನಡೆಯಲಿರುವ ಬೆಲೆ ಏರಿಕೆಯ ಕಾಂಗ್ರೆಸ್ ಸರಕಾರದ ವಿರುದ್ಧ ಅಹೋರಾತ್ರಿ ಧರಣಿಗೆ ಚಿತ್ರದುರ್ಗ ಜಿಲ್ಲೆಯಿಂದ ಸುಮಾರು ೨೫೦ ಜನ ಭಾಗವಹಿಸಲಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿಯ
ಜಿಲ್ಲಾಧ್ಯಕ್ಷರಾದ ಎ.ಮುರಳಿ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಬೆಲೆ- ತೆರಿಗೆ ಹೆಚ್ಚಳದ ಮೂಲಕ ಬಡವರಿಗೆ ಬರೆ ಎಳೆಯುವ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟ- ಪ್ರತಿಭಟನೆ ನಡೆಸಲಿದೆ. ರಾಜ್ಯ ಸರಕಾರ ತನ್ನ ನಿರ್ಧಾರದಿಂದ ಹಿಂದೆಸರಿಯುವ ಕೆಲಸವನ್ನು ಹೋರಾಟದ ಮುಖೇನ ಮಾಡಲು ಬಿಜೆಪಿ ಮಾಡಲಿದೆ. ಇದು ಶೂನ್ಯ ಅಭಿವೃದ್ಧಿ ಮತ್ತು ಹಗರಣಗಳ ಸರಕಾರ. ಸರಕಾರದ ಹಗರಣ, ಜನವಿರೋಧಿ ನೀತಿ ವಿರುದ್ಧ ಬಿಜೆಪಿ ನಿರಂತರವಾಗಿ ಹೋರಾಟ ಮಾಡುತ್ತಿದ್ದು, ಜನಪರ ವಿಪಕ್ಷವಾಗಿ ತನ್ನ ಕೆಲಸ ಮಾಡುತ್ತಿದೆ.
ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ, ಮುಸಲ್ಮಾನರಿಗೆ ಓಲೈಕೆ ಮಾತ್ರವಲ್ಲದೆ ಹಿಂದೂಗಳಿಗೆ ಅಪಮಾನ ಮಾಡಲಾಗಿದೆ. ಸರಕಾರಿ ಕಾಮಗಾರಿಗಳಲ್ಲಿ ಮುಸಲ್ಮಾನರಿಗೆ ಶೇ ೪ ಮೀಸಲಾತಿ ನೀಡಿದ್ದು, ಕಾನೂನಿನ ವಿರುದ್ಧವಾಗಿದೆ. ಉನ್ನತ ಶಿಕ್ಷಣಕ್ಕೆ ಹೊರದೇಶಕ್ಕೆ ಹೋಗುವ ಮುಸಲ್ಮಾನ ವಿದ್ಯಾರ್ಥಿಗಳಿಗೆ ೨೦ ಲಕ್ಷ ಇದ್ದುದನ್ನು ೩೦ ಲಕ್ಷಕ್ಕೆ ಏರಿಸಿದ್ದಾರೆ.ಹಿಂದೆ ಮುಸಲ್ಮಾನ ಹೆಣ್ಮಕ್ಕಳಿಗೆ ಶಾದಿ ಭಾಗ್ಯ ನೀಡಿದ್ದರು. ಇದೀಗ ಮುಸ್ಲಿಂ ಹೆಣ್ಮಕ್ಕಳ ಆತ್ಮರಕ್ಷಣೆಗೆ ನೂರಾರು ಕೋಟಿಯನ್ನು ರಾಜ್ಯ ಸರಕಾರ ವೆಚ್ಚ ಮಾಡುತ್ತಿದೆ; ಇಮಾಮರ ವೇತನ ಹೆಚ್ಚಿಸಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಸರಕಾರ ಇದಾಗಿದೆ
ಎಂದು ದೂರಿದ್ದಾರೆ.


ಕೇವಲ ಮುಸ್ಲಿಮರಿಗೆ ಮಾತ್ರ ಇಂಥ ಯೋಜನೆಗಳು ಏಕೆ? ಮೋದಿಜೀ ಅವರು ಜನಧನ ಸೇರಿ ಹಲವು ಯೋಜನೆ
ಜಾರಿಗೊಳಿಸಿದ್ದು, ಎಲ್ಲರಿಗೂ ಅವಕಾಶ ನೀಡಿದ್ದಾರೆ. ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮಿ ಯೋಜನೆಯನ್ನು ಹಿಂದೂಗಳಿಗೆ ಮಾತ್ರ
ಕೊಟ್ಟಿಲ್ಲ; ಮುಸ್ಲಿಮರು ಸೇರಿ ಎಲ್ಲರಿಗೂ ಕೊಟ್ಟಿದ್ದರು. ಹಿಂದೂಗಳ ಅವಮಾನವನ್ನು ನಾವು ಖಂಡಿಸುತ್ತೇವೆ. ಸಿದ್ದರಾಮಯ್ಯನವರು
ಹಾಲುಮತ ಸಮುದಾಯ, ಕಾಯಕ ಸಮುದಾಯಗಳ ನಿರ್ಲಕ್ಷಿಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಗಳನ್ನು ಮತಬ್ಯಾಂಕ್
ಮಾಡಿಕೊಂಡ ಕಾಂಗ್ರೆಸ್ಸಿನವರು ಅವರಿಗೆ ಅನ್ಯಾಯ ಮಾಡುತ್ತಿದೆ. ಇದರ ವಿರುದ್ಧ ಹೋರಾಟ ಮಾಡಲಾಗುತ್ತದೆ ಎಂದು
ತಿಳಿಸಿದ್ದಾರೆ.
ಶೋಷಿತರು, ಪೀಡಿತರ ಅಭಿವೃದ್ಧಿಗೆ ಮೀಸಲಿಟ್ಟ ಎಸ್‌ಇಪಿ, ಟಿಎಸ್‌ಪಿ ಅನುದಾನದಲ್ಲಿ ಕಾಂಗ್ರೆಸ್ ಸರಕಾರವು ೨೦೨೩-೨೪ರಲ್ಲಿ
೧೧,೧೪೪ ಕೋಟಿಯನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ೨೦೨೪-೨೫ರಲ್ಲಿ ೧೪,೨೮೨ ಕೋಟಿ ಹಣ ಬೇರೆ ಕಡೆಗೆ
ವರ್ಗಾಯಿಸಿದ್ದಾರೆ. ೨೦೨೫-೨೬ರಲ್ಲಿ ಇದು ೧೩,೪೩೩ ಕೋಟಿ. ಒಟ್ಟಾರೆಯಾಗಿ ಕಾಂಗ್ರೆಸ್ ಸರಕಾರವು ೩೮,೮೬೦
ಕೋಟಿಯಷ್ಟು ಹಣವನ್ನು ಬೇರೆ ಕಡೆ ವರ್ಗಾಯಿಸಿ, ದುರುಪಯೋಗ ಮಾಡಿಕೊಂಡಿದೆ. ಇದು ಖಂಡನಾರ್ಹ.


ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆ ನಿರಂತರವಾಗಿದೆ. ಪೆಟ್ರೋಲ್, ಡೀಸೆಲ್, ಸ್ಟಾಂಪ್
ಶುಲ್ಕ, ಹಾಲಿನ ದರ, ಮೆಟ್ರೊ ದರ ಏರಿಸುವ ಮೂಲಕ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರವು ಜನಸಾಮಾನ್ಯರ
ಮೇಲೆ ಬರೆ ಹಾಕುತ್ತಿದೆ. ದೇಶದಲ್ಲೇ ಅತ್ಯಂತ ದುಬಾರಿ ಜೀವನವನ್ನು ಈ ನಾಡಿನ ಜನ ನಡೆಸಬೇಕಾದ ದುಸ್ಥಿತಿಗೆ ಕಾಂಗ್ರೆಸ್
ಕಾರಣವಾಗಿದೆ. ಸೇವಿಸುವ ಗಾಳಿಯೊಂದನ್ನು ಬಿಟ್ಟರೆ ಉಳಿದೆಲ್ಲವುಗಳ ದರ ಏರಿಸಲಾಗಿದೆ. ಸಾಮಾನ್ಯ ಜನರು, ರೈತರ ಸಂಕಷ್ಟ
ಅರ್ಥ ಮಾಡಿಕೊಳ್ಳದ ಸರಕಾರ ಇದು. ಮತದಾರರಿಗೆ ಶಾಪಗ್ರಸ್ತ ಸರಕಾರ ಇದಾಗಿದೆ ಎಂದಿದ್ದಾರೆ.
ವಿದ್ಯುತ್ ದರ ಪ್ರತಿ ಯೂನಿಟ್‌ಗೆ ಏಪ್ರಿಲ್ ೧ರಿಂದ ೩೬ ಪೈಸೆ ಹೆಚ್ಚಲಿದೆ. ಹಾಲಿನ ದರ ೩ ಬಾರಿ ಏರಿಸಿದ್ದಾರೆ. ಹಾಲಿನ ದರ
ಒಟ್ಟು ೯ ರೂ. ಹೆಚ್ಚಾಗಿದೆ.ಬಡವರ ವೈದ್ಯಕೀಯ ವೆಚ್ಚ ಹೆಚ್ಚಾಗಿದೆ. ಹೊರ ರೋಗಿ ನೋಂದಣಿ ಶುಲ್ಕ ೧೦ ರೂ ಇದ್ದುದನ್ನು ರೂ. ೨೦ಕ್ಕೆ ಏರಿಸಿದ್ದಾರೆ.

ಮರಣೋತ್ತರ ಪ್ರಮಾಣಪತ್ರವನ್ನು ೨೫೦ ಇದ್ದುದನ್ನು ೩೦೦ ರೂ. ಹೆಚ್ಚಿಸಿದ್ದಾರೆ. ವೈದ್ಯಕೀಯ
ಪ್ರಮಾಣಪತ್ರವನ್ನು ೨೫೦ ಇದ್ದುದನ್ನು ೩೦೦ ರೂ. ಹೆಚ್ಚಿಸಿದ್ದಾರೆ. ದಾಖಲಾತಿ ಶುಲ್ಕ, ಲ್ಯಾಬ್ ಪರೀಕ್ಷಾ ಶುಲ್ಕ ಹೆಚ್ಚಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಸರಕಾರಿ ಆಸ್ಪತ್ರೆಗೆ ಹೋಗುವ ಬಡವರು ಹೆಚ್ಚುವರಿ ಶುಲ್ಕ ಕೊಡಬೇಕಾಗಿದೆ.ಮುದ್ರಾಂಕ ಶುಲ್ಕದಡಿ ದತ್ತು
ಸ್ವೀಕಾರ ಶುಲ್ಕ ೫೦೦ ರೂ. ಇತ್ತು. ಅದನ್ನು ೧ ಸಾವಿರ ರೂ. ಮಾಡಿದ್ದಾರೆ. ಅಫಿಡವಿಟ್‌ಗಳ ಮೊತ್ತವನ್ನು ೨೦ ರೂ.
ಇದ್ದುದು ೧೦೦ ರೂಗೆ ಏರಿಸಿದ್ದಾರೆ. ಕ್ಯಾನ್ಸಲೇಶನ್ ಡೀಡ್ ೧೦೦ ರೂ. ಇದ್ದುದನ್ನು ೫೦೦ಕ್ಕೆ ಏರಿಸಿದ್ದಾರೆ. ಅಡಮಾನ ಪತ್ರ
ಶುಲ್ಕವನ್ನು ರೂ. ೧೦೦ರಿಂದ ೨೦೦ಕ್ಕೆ ಏರಿಸಿದ್ದಾರೆ. ವೃತ್ತಪರ ತೆರಿಗೆ ೧೨೦೦ ರೂ. ಇದ್ದುದನ್ನು ೨೫೦೦ ರೂ.ಗೆ
ಏರಿಸಿದ್ದಾರೆ. ಮುದ್ರಾಂಕ ಶುಲ್ಕ ಜಾಸ್ತಿ ಮಾಡಿದ್ದಾರೆ. ಬಸ್ ಪ್ರಯಾಣದರ ಹೆಚ್ಚಿಸಿದ್ದಾರೆ. ರೈತರಿಗೆ ತೊಂದರೆ ಕೊಡಲೆಂದೇ ಬಿತ್ತನೆ
ಬೀಜದ ದರ ಹೆಚ್ಚಿಸಿದ್ದಾರೆ. ನೀರಿನ ಸುಂಕ ಜಾಸ್ತಿ ಮಾಡಿದ್ದಾರೆ. ಪೆಟ್ರೋಲ್- ಡೀಸೆಲ್ ದರ ಏರಿಕೆಯಾಗಿದೆ. ಮತದಾರರಿಗೆ ಬೆಲೆ
ಏರಿಕೆಯ ಮೂಲಕ ಶಾಪವನ್ನು ಈ ಸರಕಾರ ನೀಡಿದೆ ಎಂದು ದೂರಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಏಪ್ರಿಲ್ ೨ರಂದು ಬೆಳಿಗ್ಗೆ ೧೧ ಗಂಟೆಯಿಂದ ಬೆಲೆ ಏರಿಕೆಯ ಕಾಂಗ್ರೆಸ್ ಸರಕಾರದ ವಿರುದ್ಧ
ಅಹೋರಾತ್ರಿ ಧರಣಿ ನಡೆಯಲಿದ್ದು, ಬಿಜೆಪಿಯ ೧೮ ಶಾಸಕರನ್ನು ಅಮಾನತು ಮಾಡಿದ್ದನ್ನು ಆಕ್ಷೇಪಿಸಿ ಅದೇ ದಿನ (ಏ.೨) ಬೆಳಿಗ್ಗೆ
ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ. ಇದರಲ್ಲಿ ಬಿಜೆಪಿಯ ಎಲ್ಲ ಶಾಸಕರು,
ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ
ಅಭ್ಯರ್ಥಿಗಳು, ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ರಾಜ್ಯ ಹೋರಾಟಕ್ಕೆ ಚಿತ್ರದುರ್ಗ ಜಿಲ್ಲೆಯಿಂದ ೨೫೦
ಜನ ಜಿಲ್ಲಾ ಮಟ್ಟ ಹಾಗೂ ಮಂಡಲದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *