ಚಿತ್ರದುರ್ಗ: ಬಿಜೆಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಪಕ್ಷದ ಧ್ವಜಾರೋಹಣ ಮಾಡುವುದರ ಮುಖಾಂತರ 47 ನೇ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ಜಿಲ್ಲಾಧ್ಯಕ್ಷರಾದ ಕೆ.ಟಿ ಕುಮಾರಸ್ವಾಮಿ ರವರು ಅಧ್ಯಕ್ಷರ ಭಾಷಣದಲ್ಲಿ ಬಿಜೆಪಿ ಧ್ಯಯ ಮತ್ತು ಸಾಧನೆಗಳ ಬಗ್ಗೆ ತಿಳಿಸಿದರು. ಹಾಗೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಟಿ.ಜಿ ನರೇಂದ್ರನಾಥ್ ರವರು ಬಿಜೆಪಿ ನಡೆದು ಬಂದ ಹಾದಿಯ ಬಗ್ಗೆ ತಿಳಿಸಿದರು.
ಇದೆ ವೇಳೆ ಚಿತ್ರದುರ್ಗ ಜಿಲ್ಲೆಯ ಹಿರಿಯ ಬಿಜೆಪಿ ಕಾರ್ಯಕರ್ತರುಗಳಾದ ಟಿ.ಜಿ ನರೇಂದ್ರನಾಥ್ ರವರು, ಕೆ. ಶಿವಣ್ಣ ಆಚಾರ್ ರವರು, ಎ.ಬಿ ಮಂಜುಳಮ್ಮ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥಾಪನ ದಿವಸದ ಸಂಚಾಲಕರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಧುರಿ ಗಿರೀಶ್ ರವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ಯಾದವ್ ರವರು, ಮೋಹನ್ ರವರು, ಜಿಲ್ಲಾ ಉಪಾಧ್ಯಕ್ಷರಾದ ಡಾ. ಸಿದ್ದಾರ್ಥ್ ರವರು, ಶೈಲಜಾ ರೆಡ್ಡಿ ರವರು, ನಗರಧ್ಯಕ್ಷರಾದ ಹೆಚ್.ಎನ್ ಲೋಕೇಶ್ ಕುಮಾರ್ ರವರು, ಗ್ರಾಮಾಂತ ಅಧ್ಯಕ್ಷರಾದ ನಾಗರಾಜ್ ರವರು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸೌಭಾಗ್ಯಮ್ಮ ಬಸವರಾಜನ್ ರವರು, ಮಾಜಿ ಕೂಡ ಅಧ್ಯಕ್ಷರಾದ ಸುರೇಶ್ ಸಿದ್ದಾಪುರ ರವರು, ಸಂಪತ್ ರವರು, ಬಸಮ್ಮ ರವರು, ಜಿಲ್ಲಾ ವಕ್ತರರಾದ ನಾಗರಾಜ್ ಬೇಂದ್ರೆರವರು, ಜಿಲ್ಲಾ ಕಾರ್ಯದರ್ಶಿಗಳಾದ ರೇಖ ರವರು, ಕಾಲುವೆಹಳ್ಳಿ ಪಾಲಯ್ಯರವರು, ಕಿರಣ್ ರವರು, ಚಂದ್ರಶೇಖರ್ ವಿ ಎಸ್ ಹಳ್ಳಿ ರವರು, ನಗರ ಪ್ರಧಾನ ಕಾರ್ಯದರ್ಶಿಗಳಾದ ಲೀಲಾವತಿ ಶಶಿಧರ್ ರವರು, ಬಸವೇಶ್ ರವರು, ಹಾಗೂ ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು, ಮೋರ್ಚಗಳ ಅಧ್ಯಕ್ಷರು, ಕಾರ್ಯಕರ್ತರು ಭಾಗವಹಿಸಿದ್ದರು.

