ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 18 : ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ, ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ,ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ, ಅಮಾಯಕರ ಮೇಲೆ ಸುಳ್ಳು ಕೇಸ್ ದಾಖಲಿಸಿ, ಜೈಲಿಗೆ ಕಳಿಸುವ ಷಡ್ಯಂತ್ರ ನಡಿತಿದೆ ಎಂದು ಕುಡುಚಿಯ ಮಾಜಿ ಶಾಸಕ ಹಾಗೂ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಆರೋಪಿಸಿದ್ದಾರೆ.

ಚಿತ್ರದುರ್ಗ ನಗರದಲ್ಲಿಂದು ಆಯೋಜನೆಗೊಂಡಿದ್ದ ಬಾಬಾ ಸಾಹೇಬರ ಸಂವಿಧಾನ ಬದಲಾಯಿಸಿದ್ದು ಯಾರೂ ? ಬಲಪಡಿಸಿದ್ದು
ಯಾರು ? ಎಂಬ ಕಾರ್ಯಕ್ರಮಕ್ಕೆ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಆವರು, ಕುಲ್ಷ್ಲಕ ಕಾರಣಕ್ಕೆ ಇವರು
ರಾಜಕೀಯ ಮಾಡ್ತಿದ್ದಾರೆ ಪೊಲೀಸರು ನಿಜವಾದ ಡ್ಯೂಟಿಯನ್ನು ಮರೆತು ಬಿಟ್ಟಿದ್ದಾರೆಜನರ ಮಾನ, ಪ್ರಾಣ ಕಾಪಾಡಬೇಕಿದ್ದ
ಪೊಲೀಸರು ಕೆಲಸ ಮರೆತಿದ್ದಾರೆ ಈ ಸರ್ಕಾರದ ಕೈಗೊಂಬೆಯಾಗಿ ಪೊಲೀಸರು ಡ್ಯೂಟಿ ಮಾಡ್ತಿದ್ದಾರೆ* ಹಾಗಾಗಿಯೇ ರಾಜ್ಯದಲ್ಲಿ
ಹಗಲು ದರೋಡೆಗಳು ನಡೆಯುತ್ತಿವೆ ಹಗಲಿನಲ್ಲೇ ಬ್ಯಾಂಕ್‍ಗಳಿಗೆ ನುಗ್ಗಿ ಲಾಂಗು, ಮಚ್ಚು, ಪಿಸ್ತೂಲ್ ತೋರಿಸಿ ದರೋಡೆ
ಮಾಡುತ್ತಿದ್ದಾರೆ ಎಂದರು.

ಸಿಎಂ ಮಂಗಳೂರಿನಲ್ಲಿ ಇದ್ದಾಗ, ಅಲ್ಲಿಯೇ ರಾಬರಿ ಆಗುತ್ತೆ ಕರ್ನಾಟಕದಲ್ಲಿ ಪೊಲೀಸ್ ಇಲಾಖೆ ಜೀವಂತವಾಗಿ ಇದ್ಯಾ? ಪೊಲೀಸರು
ಪೊಲೀಸ್ ಡ್ಯೂಟಿ ಮಾಡ್ತಿದ್ದಾರ? ಕಾಂಗ್ರೆಸ್ ಏಜೆಂಟ್‍ರಾಗಿ ಕೂತಿದ್ದಾರಾ ಎನ್ನುವ ಪ್ರಶ್ನೆ ಇಡೀ ದೇಶದಲ್ಲಿ ಮೂಡಿದೆ ದೇಶದಲ್ಲಿ
ಕರ್ನಾಟಕದ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ ಇಡೀ ದೇಶಕ್ಕೆ ಈ ವಿಚಾರ ಗೊತ್ತಾಗಿದೆ ಎಂದು ರಾಜೀವ್
ಟೀಕಿಸಿದರು.

ಮುಡಾ ಹಗರಣದಲ್ಲಿ ಏನೂ ತಪ್ಪೇ ನಡೆದಿಲ್ಲ ಎಂದು ಸಿಎಂ ಹೇಳ್ತಿದ್ರು ನಂತರ ಭೇಷರತ್ ಆಗಿ ಸೈಟ್‍ಗಳನ್ನ ವಾಪಾಸ್ ಕೊಟ್ರು 14,
ಅಲ್ಲ 140 ಸೈಟ್ ಎಂದು ಇಡಿ ವರದಿಯನ್ನು ಬಿಡುಗಡೆ ಮಾಡಿದೆ ಸಿಎಂ ಹೇಳಿದಂಗೆ 14 ಸೈಟ್‍ಗೆ 60 ಕೋಟಿಯಾದ್ರೆ, 140 ಸೈಟ್‍ಗೆ
ಎಷ್ಟಾಯ್ತು? ಭ್ರಷ್ಟಾಚಾರದ ಆರೋಪನ್ನು ಸಿಎಂ ಹೊತ್ತಿದ್ದಾರೆ ಈ ರಾಜ್ಯವನ್ನು ಹೇಗೆ ಮುನ್ನೆಡೆಸುತ್ತಾರೆ ಎಂಬುದು ನನ್ನ ಪ್ರಶ್ನೆ?

ರಾಜ್ಯಪಾಲರ ವಿರುದ್ದ ಕಾಂಗ್ರೆಸ್‍ನವರು ಹೋರಾಟ ಮಾಡಿದ್ದರು ಸಂವಿಧಾನದ ಬಗ್ಗೆ ಹೇಳೋರು ರಾಜ್ಯಭವನಕ್ಕೆ ನುಗ್ತೀವಿ ಅಂತ
ಹೇಳಿದ್ದರು ಹೈಕೋರ್ಟ್ ಆದೇಶ ಎತ್ತಿ ಹಿಡಿದಾಗ, ಅವತ್ತು ನಿಮ್ಮ ಮುಖಕ್ಕೆ ಮಂಗಳಾರತಿ ಆಯ್ತು ನೀವೇ ನಿಮ್ಮ ಆಯಕಟ್ಟಿನ ಜಾಗಕ್ಕೆ
ನಿಮ್ಮವರೇ ಲೋಕಾಯುಕ್ತದಲ್ಲಿ ಇಟ್ಟುಕೊಂಡ್ರಿ ಅದೇ ಅಧಿಕಾರಿಗಳ ಆಧಾರದ ಮೇಲೆ ಇಡಿ ಇವತ್ತು ರಿಪೋರ್ಟ್ ಕೊಟ್ಟಿದೆ 140
ಸೈಟ್‍ಗಳನ್ನ ಬೆರಳಣಿಕೆ ಅಮೌಂಟ್‍ಗೆ ಕೊಟ್ಟಿರುವುದು ಬಯಲಾಗಿದೆ ಇಪ್ಪತ್ತು, ಮೂವತ್ತು ಸಾವಿರಕ್ಕೆ ಒಂದು ಸೈಟ್ ಕೊಟ್ಟು, 40,50
ಕೋಟಿಗೆ ಅದನ್ನ ಮಾಡ್ಕೊಂಡಿದ್ದೀರ ಹಣ ಅಕ್ರಮವಾಗಿ ವರ್ಗಾವಣೆ ಆಗಿರುವುದು ಗೊತ್ತಾಗಿದೆ ಇಂತಹ ಕಳಂಕವೊತ್ತಿರುವ ಸಿಎಂ
ತಕ್ಷಣಕ್ಕೆ ರಾಜೀನಾಮೆ ಕೊಡಬೇಕು ಇದು ಕರ್ನಾಟಕ, ಸಂವಿಧಾನಕ್ಕೆ ಮಾಡುವ ಅಪಚಾರ ಎಂದಿದ್ದಾರೆ.

Leave a Reply

Your email address will not be published. Required fields are marked *