ಬಿಜೆಪಿ ಎಂದಿಗೂ ಕೊಟ್ಟಮಾತು ಉಳಿಸಿಕೊಂಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ದ ವಾಗ್ದಾಳಿ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನವನ್ನು ಅರ್ಪಿಸಿ ನಂತರ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 23 : ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನ ಮಾಡುವುದಾಗಿ ಘೋಷಿಸಿದ್ರು, 5300 ಕೋಟಿ ಕೊಡ್ತಿವೆಂದು ಬಜೆಟ್ನಲ್ಲಿ
ಘೋಷಣೆ ಈವರೆಗೆ ಅದರ ಬಗ್ಹೆ ಯಾಕೆ ಪ್ರಸ್ತಾಪ ಇಲ್ಲ, ಅನೇಕ ಸಲ ಪ್ರಧಾನಿ,ಅರ್ಥ,ನೀರಾವರಿ ಸಚಿವರನ್ನು ನಾನು,ಡಿಸಿಎಂ ಭೇಟಿ ಮಾಡಿ ಮನವಿ ಮಾಡಿದ್ರು ಪ್ರಯೋಜನ ಆಗಿಲ್ಲ ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳೋದು ರಾಜಕೀಯ ಪಕ್ಷದ ಬದ್ದತೆ ಬಿಜೆಪಿ ಎಂದಿಗೂ ಕೊಟ್ಟಮಾತು ಉಳಿಸಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರಕ್ಕೆ ಬಾಗಿನವನ್ನು ಅರ್ಪಿಸಿ ನಂತರ ನಡೆದ ಬಹಿರಂಗ
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು, 115 ವರ್ಷಗಳ ಇತಿಹಾಸ ಇರುವ ಜಲಾಶಯ ರಾಜ್ಯದ
ಮೊದಲ ಜಲಾಶಯ ಮೈಸೂರು ಒಡೆಯರ ತಾಯಿ ಕೆಂಪರಾಜಮ್ಮಣ್ಣಿ 1907 ರಲ್ಲಿನಿರ್ಮಾಣ ಅವರ ಒಡವೆಗಳನ್ನು
ಅಡವಿಟ್ಟುಅಣಕಟ್ಟು ನಿರ್ಮಾಣ 45 ಲಕ್ಷಖರ್ಚು ಮಾಡಿಅಣೆಕಟ್ಟು ನಿರ್ಮಾಣ ಇಂದು ಸಾವಿರಾರು ಕೋಟಿಬೆಲೆ ಕಟ್ಟಬೇಕಿತ್ತು ಅಂದು
ಬ್ರಿಟಿಷರು,ರಾಜರ ಕಾಲದಲ್ಲಿ ಜಲಾಶಯ ನಿರ್ಮಾಣ ಮಳೆ ಕಡಿಮೆ ಬೀಳುವ ಪ್ರದೇಶದಲ್ಲಿ ಜಲಾಶಯ ನಿರ್ಮಿಸಿಇಲ್ಲಿನ ರೈತರಿಗೆ
ಅನುಕೂಲ ಕೆಂಪರಾಜಮ್ಮಣ್ಣಿ ಕಾರ್ಯವನ್ನು ನಾವು ಸ್ಮರಿಸುತ್ತೇವೆಇದು ಬಿಸಿಲನಾಡು,ಬರದನಾಡು ಈ ಭಾಗಕ್ಕೆನೀರು ಒದಗಿಸಲು
ಈ ಅಣೆಕಟ್ಟು ನಿರ್ಮಾಣ ನೀರಾವರಿಗೆ ನಮ್ಮ ಸರ್ಕಾರ ಒತ್ತು ನೀಡಿದೆ ಎಂದರು.

ವಾಣಿವಿಲಾಸ ಸಾಗರ ಜಲಾಶಯ ಈ ವರ್ಷ ಕೋಡಿಬಿದ್ದಿದೆ ಸರ್ಕಾರದ ವತಿಯಿಂದ ಗಂಗಾಪೂಜೆ,ಬಾಗಿನ ಅರ್ಪಿಸಲು ಸುಧಾಕರ
ಹೇಳಿದ್ರು ನಾವು ಬಾಗಿನ ಅರ್ಪಿಸಿದ್ದೇವ ಇದು ಜಲಾಶಯ ಭರ್ತಿಯಾಗಿ ಮೂರನೇಬಾರಿಕೋಡಿಬಿದ್ದಿದೆ ಬಿಜೆಪಿಯ ಸಂಸದ
ಕಾರಜೋಳ್ ಅವರು ಹೇಳಿದ್ರು ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನ ಮಾಡುವುದಾಗಿ ಘೋಷಿಸಿದ್ರು ನೀವು ಹೇಳಿದ್ದು
ಯಾಕೆ ಮಾಡಲು ಆಗಲಿಲ್ಲ ನಿರ್ಮಲ ಸೀತರಾಂ ಘೋಷಿಸಿದ್ರು, 5300 ಕೋಟಿ ಕೊಡ್ತಿವೆಂದು ಬಜೆಟ್ ನಲ್ಲಿ ಘೋಷಣೆ ಈವರೆಗೆ
ಅದರ ಬಗ್ಹೆ ಯಾಕೆ ಪ್ರಸ್ತಾಪ ಇಲ್ಲ ಪ್ರಧಾನಿ,ನೀರಾವರಿ ಅಥವಾ ಆರ್ಥಿಕ ಸಚಿವರ ಬಳಿ ಯಾಕೆ ಚರ್ಚಿಸಿಲ್ಲ ಇನ್ನಾದ್ರು ಒತ್ತಾಯ
ಮಾಡಿ ಹಣ ಬಿಡುಗಡೆ ಮಾಡಿಸುವಂತೆ ಸಂಸದ ಕಾರಜೋಳಗೆ ಸಿಎಂ ಒತ್ತಾಯಿಸಿದ್ದು, ಅನೇಕ ಸಲ ಪ್ರಧಾನಿ,ಅರ್ಥ,ನೀರಾವರಿ
ಸಚಿವರನ್ನು ನಾನು,ಡಿಸಿಎಂಭೇಟಿ ಮಾಡಿಮನವಿ ಮಾಡಿದ್ರು ಪ್ರಯೋಜನ ಆಗಿಲ್ಲ ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ. ಕೊಟ್ಟ
ಮಾತನ್ನು ಉಳಿಸಿಕೊಳ್ಳೋದು ರಾಜಕೀಯ ಪಕ್ಷದಬದ್ದತೆ ಬಿಜೆಪಿ ಎಂದಿಗೂ ಕೊಟ್ಟಮಾತು ಉಳಿಸಿಕೊಂಡಿಲ್ಲ ಎಂದು ಕಿಡಿ
ಕಾರಿದರು.

ವಿವಿಸಾಗರ ಹಿನ್ನೀರಿನಿಂದತೊಂದರೆ ಗೀಡಾದ ಹೊಸದುರ್ಗ ರೈತರಿಗೆ ಅನುಕೂಲಕ್ಕೆ ಗೇಟ್ ಅಳವಡಿಸುತ್ತೇವೆ ರೈತರ
ಅನುಕೂಲಕ್ಕೆ120 ಕೋಟಿಯೋಜನೆ ಸಿದ್ದ ಪಡಿಸಿದ್ದೇವೆ ಸಿಎಂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ದಿನಗಳನ್ನು
ನೆನೆಸಿಕೊಂಡ ಸಿಎಂ56000 ಕೋಟಿ ರೂಪಾಯಿಗಳನ್ನುರಾಜ್ಯದ ಜನವರಿಗೆ ಖರ್ಚು ಮಾಡಲಾಗ್ತಿದೆ 1 ಲಕ್ಷದ21 ಸಾವಿರ

ಜನಮಹಿಳೆಯರಿಗೆ ಗೃಹ ಲಕ್ಷ್ಮಿ ಹಣ ನೀಡ್ತಿದ್ದೇವೆ ಎಲ್ಲಾ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿತುಂಬುವ ಕಾರ್ಯ
ಬಡವರು ಕೂಡ ಮುಖ್ಯ ವಾಹಿನಿಗೆ ಬರಬೇಕು ನಮ್ಮ ಸರ್ಕಾರಕ್ಕೆ 136 ಸ್ಥಾನ ನೀಡಿದ್ದೀರ ಉಪಚುನಾವಣೆಯಲ್ಲಿ 3 ಕ್ಕೆ 3
ಸ್ಥಾನಗೆದ್ದಿದ್ದೇವೆ ಬಿಜೆಪಿಯವರು ಸುಳ್ಳುಆರೋಪಲೆಕ್ಕಿಸದೇ ನಾವು ಗೆದ್ದಿದ್ದೇವೆಜನ ನಮ್ಮ ಪರವಾಗಿದ್ದಾರೆ ಇದನ್ನು ನೋಡಿ
ಸಹಿಸಲಾಗದೆ ಬಿಜೆಪಿಯವರು ಸುಳ್ಳು ಅಪಪ್ರಚಾರ ಮಾಡ್ತಿದ್ದೀರೆ ನಿಮ್ಮಆಶೀರ್ವಾದ ಸದಾ ಇರಲೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಕರ್ನಾಟಕ ನೀರಾವರಿ ಇತಿಹಾಸಕ್ಕೆ ಐತಿಹಾಸಿಕ
ದಿನ ಕನ್ನಂಬಾಡಿ ಅಣೆಕಟ್ಟಿಗಿಂತ ಹಳೆಯದು ಈ ಭಾಗಕ್ಕೆಒಳ್ಳೆಯದು ಆಗಲಂದು ಕಂಒನಂಜಮ್ಮಣ್ಣಿ ತಮ್ಮಒಡವೆ ಅಡವಿಟ್ಟು
ಬರದನಾಡಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಮಾರಿಕಾಂಬಾ ಸನ್ನಿಧಿಯಲ್ಲಿ ಪುಣ್ಯದ ಕೆಲಸ ಸಿಎಂ ಮಾಡಿದ್ದಾರೆ ಮೂರು ಬಾರಿ
ಗಂಗಾಮಾತೆ ಭರ್ತಿಯಾಗಿದ್ದಾಳೆ ರೈತರ ಬದುಕುಕಷ್ಟವಾದ್ದು,ಈ ಅಣೆಕಟ್ಟಿನಿಂದ ಮೂರು ಜಿಲ್ಲೆಗಳಿಗೆ ಅನುಕೂಲವಾಗಲಿದ್ದು,
ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗಕ್ಕೆ ಅನುಕೂಲ ಎತ್ತಿನಹೊಳೆಯಲ್ಲಿಈಡ್ಯಾಂ ಸೇರಿಸಲಾಗಿದೆ ರೈತರಿಗೆ ಪ್ರಮೋಷನ್
ಇಲ್ಲ, ಪೆನ್ಷನ್ ಇಲ್ಲ ರೈತರಿಗೆ ಅನುಕೂಲ ಆಗಲೆಂದು ನೀರಾವರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ ಎಂದರು.

ಈ ಭಾಗದಲ್ಲಿ ದೊಡ್ಡಯೊಜನೆ ತರಲು ಸಭೆ ನಡೆಸಿದ್ದೇವೆ ಆರು ವಿಧಾನಸಭಾ ಕ್ಷೇತ್ರಗಳಲ್ಲುನೀರಾವರಿ ಯೋಜನೆ
ಸಿದ್ಧತೆರೈತರಿಗೆ,ಶಾಸಕರಿಹ ಶಕ್ತಿತರುವ ಕೆಲಸ ಮಾಡ್ತೇವೆ ಐದುಜನ ಶಾಸಕರನ್ನು ಗೆಲ್ಲಿಸಿದ್ಕೆಒಂದು ಕೋಟಿನಮಸ್ಕಾರರಾಹುಲ್
ಗಾಂದಿ ಪಾದಯತ್ರೆ ವೇಳೆನೀವು ಕೊಟ್ಟ ಸಹಕಾರಸ್ಮರಿಸುತ್ತೇನೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆಮೋದಿ ಸರ್ಕಾರ ಬಂದ
ಬಳಿಕ 5300 ಕೋಟಿ ಕೊಡ್ತಿವೆಂದು ಭರವಸೆ ಬೊಮ್ಮಯಿ ಕೂಡ ಬಜೆಟ್ ನಲ್ಲಿಸೇರಿಸಿದ್ರುಮಾಜಿ ಕೇಂದ್ರ ಸಚಿವ ನಾರಾಯಣ
ಸ್ವಾಮಿ ನನ್ನಿಂದ ಪತ್ರಬರೆಸಿದ್ರು ರಾಷ್ಟ್ರೀಯ ಯೋಜನೆ ಮಾಡುವ ಭರವಸೆಈರಾಜ್ಯದ ಸಂಸದರಿಗೆ ರಾಜ್ಯದ ಬಗ್ಗೆ ಆಸಕ್ತಿ,ಬದ್ಧತೆ
ಇದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರಲಿ ಬಾಗಿನ ವಿಚಾರದಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ ಮೈಸೂರು ಸಂಸದ
ಬಾಗಿ ಅರ್ಪಿಸಿದ್ದಾರೆಂದು ತಿಳಿದಿದೆ ಬಿಜೆಪಿಕಾರ್ಯಕರ್ತರನ್ನು ಕರೆತಂದು ಪೂಜೆ ಸಲ್ಲಿಸಿದ್ದಾರೆ ನಿಮ್ಮ ಮನೆತನದ ಮೇಲೆ ಅಪಾರ
ಗೌರವ ತಾಯಿಯ ಸೇವೆ,ತ್ಯಾಗ ಗೌರವಿಸ್ತೇವೆ ನೀರಿಗೆ ಭೇದ ಭಾವ ಇಲ್ಲ , ಹೊಸ ಶಾಸನ ತಂದಿದ್ದೇವೆ ಕೊನೆ ತಾಲ್ಲೂಕಿಗೂ
ನೀರು ಹರಿಸಲುಕ್ರಮ ಕೈಗ್ಗೊಳ್ಳಲಾಗಿದೆ ಎಂದ ಅವರು. ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಏರಬೇಕು
ಮಾತು ಕೊಟ್ಟಂತೆ ನಡೆಯಬೇಕು ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು 5300ಕೋಟಿತರಬೇಕು ನಮ್ಮ
ಶಾಸಕರು,ಕೆಲವರು ಸೋತವರು ಸಹ ನಮ್ಮ ಮೇಲೆ ಒತ್ತಡ ತಂದು ಈ ಭಾಗದಲ್ಲಿ ಅಭಿವೃದ್ಧಿ ಮಾಡ್ತಿದ್ದಾರೆ ಎಂದು ಶಿವಕುಮಾರ್
ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್, ಶಾಸಕರಾದ ರಘುಮೂರ್ತಿ, ಕೆ.ಸಿ.ವಿರೇಂದ್ರ (ಪಪ್ಪಿ), ಅದಿ
ಜಾಂಭವ ಅಭೀವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್.

ಮಾಜಿ ಸಂಸದ ಬಿ.ಎನ್ ಚಂದ್ರಪ್ಪ, ಮಾಜಿ ಸಚಿವರಾಧ ಎಚ್,ಅಂಜನೇಯ, ಜಿ.ಪಂ,ಮಾಜಿ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ
ಸುರೇಶ್ ಬಾಬು, ಮಾಜಿ ಸದಸ್ಯ ನಾಗೇಂದ್ರ ನಾಯ್ಕ, ಡಿಸಿಸಿ ಅಧ್ಯಕ್ಷರಾದ ಎಂ.ಕೆ.ತಾಜ್‍ಪೀರ್, ಕಾರ್ಯಧ್ಯಕ್ಷರಾದ
ಹಾಲಸ್ವಾಮಿ, ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಅಭಿಮಾನಿಗಳು ಭಾಗವಹಿಸಿದ್ದರು.

Views: 0

Leave a Reply

Your email address will not be published. Required fields are marked *