ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕೊಲೆ ರಹಸ್ಯ ಚಿತ್ರದುರ್ಗದಲ್ಲಿ ಬಹಿರಂಗ..!

ಬೆಂಗಳೂರು: ರಾಜ್ಯದಲ್ಲಿ ಚುನಾವಣೆಯ ಬಿಸಿ ರಂಗೇರಿದೆ. ಈ ಬಾರಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಎಂದುಕೊಂಡಿರುವ ಮೂರು ಪಕ್ಷಗಳು ಸಿಕ್ಕಾಪಟ್ಟೆ ಓಡಾಟ ನಡೆಸುತ್ತಿವೆ. ಇದರ ನಡುವೆ ಬೊಮ್ಮನಹಳ್ಳಿಯ ಪ್ರಭಾವಿ ಬಿಜೆಪಿ ಶಾಸಕನನ್ನು ಮುಗಿಸಲು ಸ್ಕೆಚ್ ಹಾಕಿರುವ ವಿಚಾರ ಬೆಳಕಿಗೆ ಬಂದಿದೆ.

ಬಿಜೆಪಿ ಶಾಸಕ ಸತೀಶ್ ರೆಡ್ಡಿಯನ್ನು ಕೊಲೆ ಮಾಡುವುದಕ್ಕೆ 2 ಕೋಟಿ ರೂಪಾಯಿ ಸುಪಾರಿ ನೀಡಲಾಗಿದೆ. ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಟೀಂ ಶಾಸಕ ಸತೀಶ್ ರೆಡ್ಡಿ ಕೊಲೆಗೆ ಸ್ಕೆಚ್ ಹಾಕಲಾಗಿತ್ತು. ಅದೇ ಕಾರಣಕ್ಕೆ ಅವರು ಹೋದಲ್ಲಿ ಬಂದಲ್ಲೆಲ್ಲಾ ಫಾಲೋ ಮಾಡುತ್ತಿದ್ದರು. ಸತೀಶ್ ರೆಡ್ಡಿ ಅದೃಷ್ಟ ಚೆನ್ನಾಗಿತ್ತು ಎನಿಸುತ್ತದೆ. ಸ್ಕೆಚ್ ಗೂ ಮುನ್ನವೇ ನಾಗನ ಪ್ಲ್ಯಾನ್ ಲೀಕ್ ಆಗಿದೆ.

ಎಂಲ್ಎ ಬೆಂಬಲಿಗನೊಬ್ಬ ಚಿತ್ರದುರ್ಗದಲ್ಲಿದ್ದ ನಾಗನ ಗ್ಯಾಂಗ್ ಹುಡುಗ ಆಕಾಶ್ ಗೆ ಕರೆ ಮಾಡಿದ್ದಾರೆ. ಎಂಎಲ್ಎ ಸ್ಕೆಚ್ ಬಗ್ಗೆ ಮಾಹಿತಿ ಕೇಳಿದ್ದಾನೆ. ಆಗ ಆಕಾಶ್ ಹಾಕಿದ್ದ ಸ್ಕೆಚ್ ಸೇರಿದಂತೆ ಎಲ್ಲಾ ಮಾಹಿತಿಯನ್ನು ಹಂಚಿಕೊಂಡಿದ್ದಾನೆ. ಇದೀಗ ಆ ಆಡಿಯೋವನ್ನು ಪೊಲೀಸರಿಗೆ ನೀಡಲಾಗಿದೆ. ಸದ್ಯ ಆರೋಪಿಗಳನ್ನು ಪೊಲೀಸರು ಹುಡುಕುತ್ತಿದ್ದಾರೆ. ಇತ್ತ ಸತೀಶ್ ರೆಡ್ಡಿ ಅಲರ್ಟ್ ಆಗಿದ್ದಾರೆ.

The post ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕೊಲೆ ರಹಸ್ಯ ಚಿತ್ರದುರ್ಗದಲ್ಲಿ ಬಹಿರಂಗ..! first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/hmtc3K4
via IFTTT

Leave a Reply

Your email address will not be published. Required fields are marked *