ಜನರ ಪರ ನಿಲ್ಲದ ಬಿಜೆಪಿ ಸಂಸದರು ಪಕ್ಷಾತೀತವಾಗಿ ಆತ್ಮಪರಿಶೀಲನೆ ಮಾಡಲಿ:ಕೆ.ಪಿ. ಸಂಪತ್ ಕುಮಾರ್.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 24:

ಬಿಜೆಪಿಯವರ ಡೋಂಗಿತನವನ್ನು ನೇರವಾಗಿ ಪ್ರಶ್ನಿಸುವ ಕಾಂಗ್ರೆಸ್ ಪಕ್ಷದ ಧೀಮಂತ ನಾಯಕರಾದ ಬಿ.ಕೆ. ಹರಿಪ್ರಸಾದ್‌ರವರ ದಿಟ್ಟತನವನ್ನು ಪ್ರಶ್ನಿಸುವಂತಹ ನೈತಿಕತೆಯನ್ನು ಹೊಂದಿರುವ ಯಾವುದೇ ನಾಯಕನು ಬಿಜೆಪಿಯಲ್ಲಿ ಇಲ್ಲದಿದ್ದರೂ ಅಮಿತ್ ಶಾ ಮತ್ತು ಮೋದಿಯವರನ್ನು ಮೆಚ್ಚಿಸುವ ಭರದಲ್ಲಿ ರಾಜ್ಯದ ಜನರ ಪರ ಯಾವುದೇ ಧ್ವನಿಯನ್ನು ಎತ್ತದೆ ಅನ್ಯಾಯ ಮಾಡುತ್ತಿರುವ ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿಯ ಸಂಸದರು ಮತ್ತೊಮ್ಮೆ ಆತ್ಮ ಪರಿಶೀಲನೆ ಮಾಡಿಕೊಂಡು ಪಕ್ಷಾತೀತವಾಗಿ ಜನರ ಪರ ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್ ಕುಮಾರ್ ತಿಳಿಸಿದ್ದಾರೆ.

ಚಿತ್ರದುರ್ಗದಲ್ಲಿ ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು ಜ೨೨ ರ ಗುರುವಾರ ವಿಧಾನಸಭೆಗೆ ಆಗಮಿಸಿ ಜಂಟಿ ಅಧಿವೇಶನವನ್ನುಉದ್ದೇಶಿಸಿ ಭಾಷಣ ಆರಂಭಿಸಿದ ರಾಜ್ಯಪಾಲರು ಜಂಟಿ ಅಧಿವೇಶನಕ್ಕೆ ಸ್ವಾಗತ ಎಂದು ಹೇಳಿ ತನ್ನ ಸರ್ಕಾರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿ, ಜೈ ಹಿಂದ್, ಜೈ ಕರ್ನಾಟಕ ಎಂದಷ್ಟೆ ಹೇಳಿ ಸರ್ಕಾರ ಸಿದ್ಧಪಡಿಸಿಕೊಟ್ಟಿದ್ದ ಭಾಷಣವನ್ನು ಸಂಪೂರ್ಣವಾಗಿ ಓದದೆ ತೆರಳಿದರು. ರಾಜ್ಯಪಾಲರ ನಡೆ ಸದನಕ್ಕೆ ಮಾಡಿದ ಅವಮಾನವಾಗಿದೆ, ವರ್ಷದಾರಂಭದಲ್ಲಿ ನಡೆಸಲಾಗುವ ಜಂಟಿ ಅಧಿವೇಶನದಲಿ ಭಾಷಣ ಮಾಡುವುದು ಸಂವಿಧಾನದ ರೀತ್ಯ ರಾಜ್ಯಪಾಲರ ಕರ್ತವ್ಯವಾಗಿರುತ್ತದೆ. ಸಂವಿಧಾನ ಕಲಂ ೧೭೬ ಮತ್ತು ೧೬೩ ರಂತೆ ಸರ್ಕಾರದ ಸಚಿವ ಸಂಪುಟ ಸಿದ್ಧಪಡಿಸಿರುವ ಭಾಷಣವನ್ನು ಓದಲೇಬೇಕೆಂಬ ನಿಯಮವಿದ್ದು, ರಾಜ್ಯಪಾಲರು ಸಿದ್ಧಪಡಿಸಿದ ಭಾಷಣವನ್ನು ಓದುವಂತಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೂಲಿ ಕೃಷಿಕರ ಅಭಿವೃದ್ಧಿಗಾಗಿ ಜಾರಿಗೊಳಿಸಿದ ಮನ್‌ರೇಗಾ ಯೋಜನೆಯನ್ನು ಆಮೂಲಾಗ್ರ ಬದಲಾಯಿಸಿ ಕಾರ್ಮಿಕರಿಗೆ ಅನ್ಯಾಯ ಮಾಡಿದ ಬಿಜೆಪಿ ಕೇಂದ್ರ ಸರ್ಕಾರವನ್ನು ಬೆಂಬಲಿಸುವ ಬಿಜೆಪಿಗರು ಸಂವಿಧಾನ ವಿರೋಧಿಗಳಾಗಿರುತ್ತಾರೆ, ಕಾರ್ಮಿಕರ ವಿರೋಧಿಗಳಾಗಿರುತ್ತಾರೆ, ಎಲ್ಲಾ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸುವ ನಮ್ಮ ಪಕ್ಷದ ನೀತಿಗಳನ್ನು, ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿ ಚುನಾವಣೆಯಲ್ಲಿ ಗೆಲ್ಲಲು ಶಥಪ್ರಯತ್ನ ಮಾಡುತ್ತಿರುವ ಬಿಜೆಪಿಗರು ಈಗಲಾದರೂ ಎಚ್ಚೆತು ಕೊಳ್ಳಬೇಕಿದೆ ಎಂದಿದ್ದಾರೆ.

ಮಹಿಳೆಯರಿಗೆ ಉಚಿತ ಪ್ರಯಾಣ, ಪ್ರತಿ ಮನೆಗೆ ಉಚಿತ ಪಡಿತರ, ಯುವ ಜನತೆಗೆ ಯುವನಿಧಿ, ಗ್ರಾಹಕರಿಗೆ ಉಚಿತ ವಿದ್ಯುತ್, ಪ್ರಯಾನಕ್ಕೆ ಶಕ್ತಿ ಯೋಜನೆ ಗೃಹಿಣಿಗೆ ಗೃಹಲಕ್ಷ್ಮಿ ಮೂಲಕ ಸಮಾಜದ ಕಟ್ ಕಡೆಯ ವ್ಯಕ್ತಿಯನ್ನೂ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವನ್ನು ವಿಮರ್ಶಿಸುವ ನೈತಿಕತೆಯನ್ನು ಬಿಜೆಪಿಯವರು ಕಳೆದುಕೊಂಡಿದ್ದಾರೆ ಎಂದು ಕೆ.ಪಿ.ಸಂಪತ್ ಕುಮಾರ್ ತಿಳಿಸಿದ್ದಾರೆ.

Views: 10

Leave a Reply

Your email address will not be published. Required fields are marked *