ಬಿಜೆಪಿ ಪಕ್ಷದ ಸದಸ್ಯತ್ವ ಅಬಿಯಾನಕ್ಕೆ ಚಾಲನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಅ. 09 18 ವರ್ಷ ತುಂಬಿದ ಯಾರೂ ಬೇಕಾದರೂ ಸಹಾ ಬಿಜೆಪಿಯ ಸದಸ್ಯರಾಗಬಹುದಾಗಿದೆ. ಈ ಸಾರಿ ನಮ್ಮ ಪಕ್ಷದ ಸದಸ್ಯತ್ಯದ ಸಂಖ್ಯೆ ದೇಶದಲ್ಲಿ 25 ಕೋಟಿ ಮೀರಬೇಕಿದೆ ಇದಕ್ಕೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಮಾಜಿ ಉಪ ಮುಖ್ಯಮಂತ್ರಿಗಳು,ಸಂಸದರಾದ ಗೋವಿಂದ ಕಾರಜೋಳ ಪಕ್ಷದ ಮುಖಂಡರಿಗೆ ಕರೆ ನೀಡಿದರು.


ಚಿತ್ರದುರ್ಗ ನಗರದ ಐದನೇ ವಾರ್ಡಿನ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಬುಧವಾರ ನಡೆದ ಬಿಜೆಪಿ ಪಕ್ಷದ ಸದಸ್ಯತ್ವ
ಅಭೀಯಾನವನ್ನು ಪಕ್ಷಕ್ಕೆ ಸದಸ್ಯತ್ವ ಮಾಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರ
ಪಾರ್ಟಿಯಾಗಿದೆ, ಇಲ್ಲಿ ಕಾರ್ಯಕರ್ತರಿಗೆ ಹೆಚ್ಚಿನ ಮನ್ನಣೆ ಇದೆ. ಬಿಜೆಪಿಗೆ ಕಾರ್ಯಕರ್ತರೆ ಅಡಿಗಲ್ಲು ಆಗಿದೆ, ಬೇರೆ ಪಾರ್ಟಿಗಳಂತೆ
ನಮ್ಮಲ್ಲಿ ಕುಟುಂಬ ಪಾರ್ಟಿ ಅಲ್ಲ ಪೂರ್ಣವಾಗಿ ಕಾರ್ಯಕರ್ತರ ಪಕ್ಷವಾಗಿದೆ. ಪ್ರತಿ ಆರು ವರ್ಷಕ್ಕೊಮ್ಮೆ ಸದಸ್ಯತ್ವ ಅಭಿಯಾನ
ನಡೆಯಲಿದೆ. ಇದರಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಿನ ರೀತಿಯಲ್ಲಿ ಸದಸ್ಯತ್ವದ ಪ್ರಮಾಣವನ್ನು ಹೆಚ್ಚಳ ಮಾಡಬೇಕಿದೆ ಎಂದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ನಗರದ 35 ವಾರ್ಡ್‍ಗಳಲ್ಲಿ ಸಮಿತಿ ರಚಿಸಿ ಹೆಚ್ಚಿನ ಸದಸ್ಯತ್ವ ನೊಂದಾಯಿಸಬೇಕಿದೆ.
ಕೇಂದ್ರ ಬಿಜೆಪಿ. ಸರ್ಕಾರ ಹಾಗೂ ರಾಜ್ಯದಲ್ಲಿ ಬಿಜೆಪಿ. ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸವಲತ್ತುಗಳನ್ನು ಪಡೆದುಕೊಂಡಿರುವವರು ಪ್ರತಿ
ಮನೆಯಲ್ಲಿಯೂ ಸಿಗುತ್ತಾರೆ. ಅಂತಹವರನ್ನು ಹುಡುಕಿ ಪಕ್ಷದ ಯೋಜನೆಗಳ ಕುರಿತು ಮನವರಿಕೆ ಮಾಡಿ ಹೆಚ್ಚಿನ ಸದಸ್ಯತ್ವ ಪಕ್ಷಕ್ಕೆ
ಸೇರ್ಪಡೆಗೊಳಿಸುವಂತೆ ತಿಳಿಸಿ ನಗರದೆಲ್ಲೆಡೆ ಸುತ್ತಾಡಿ ಎಲ್ಲೆಲ್ಲಿ ಪಕ್ಷದ ಮತಗಳು ಜಾಸ್ತಿಯಿವೆಯೋ ಅಲ್ಲೆಲ್ಲಾ ಹೆಚ್ಚು ಸದಸ್ಯತ್ವ
ನೊಂದಾಯಿಸಿದರೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ರೀತಿಯಲ್ಲಿ ಸದಸ್ಯತ್ವ ನೊಂದಾಣಿಯಾಗಬೇಕಿದೆ ಎಂದ ಕರೆ ನೀಡಿದರು.


ಹರಿಯಾಣದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆದಿರುವುದು ಇಡಿ ದೇಶದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ. ಎನ್ನುವುದಕ್ಕೆ
ದಿಕ್ಕೂಚಿಯಾಗಿದೆ. ಕಾಂಗ್ರೆಸ್‍ನ ಜಾತಿ ರಾಜಕಾರಣವನ್ನು ಹರಿಯಾಣ ಜನರು ತಿರಸ್ಕಾರ ಮಾಡಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಸ್ಪಷ್ಟ
ಬಹುಮತ ಪಡೆಯಲು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಹಾಗೂ ಸ್ಥಳೀಯವಾಗಿ ಪಕ್ಷದ ಸಂಘಟನಾ ಶಕ್ತಿ ಕಾರಣ,
ಲೋಕಸಭೆ ಚುನಾವಣೆಯ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ರಾಜಧಾನಿ ದೆಹಲಿಗೆ ಹತ್ತಿರ ಇರುವ ರಾಜ್ಯದ
ಚುನಾವಣೆ ದೇಶದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಸೂಚಿಸುತ್ತಿದೆ ಎಂದರು.


ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಪತ್, ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ನಗರಸಭೆ ಸದಸ್ಯರುಗಳಾದ ಹರೀಶ್, ಮಾಜಿ
ಸದಸ್ಯರಾದ ಕೃಷ್ಣಮೂರ್ತಿ, ಲಿಂಗರಾಜು, ಯುವ ಮೋರ್ಚಾದ ರಾಮು ವಕ್ತಾರ ನಾಗರಾಜ್‍ಬೇದ್ರೆ, ಬಡಾವಣೆಯ ಮುಖಂಡರಾದ
ವಸಂತರಾವ್, ಅರುಣ್ ಕುಮಾರ್, ರಾಜಾರಾಂ, ಶಿವಣ್ಣಚಾರ್, ಗಾಯತ್ರಿ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *