ಕಾಂಗ್ರೆಸ್ ಪಕ್ಷದವರಿಂದ ಸುಳ್ಳಿನ ಅಪ ಪ್ರಚಾರ ; ಬಿಜೆಪಿ ವಕ್ತಾರ ನಾಗರಾಜ್ ಬೇದ್ರೇ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು. 05 ಸತ್ಯ ಹೇಳಿದರೆ ಬೆಚ್ಚಿಬೀಳುವ ಕಾಂಗ್ರೆಸ್ ಪಕ್ಷದವರು ಆಪಪ್ರಚಾರದಲ್ಲಿ ತೊಡಗಿದ್ದಾರೆ. ಆರ್‍ಎಸ್‍ಎಸ್ ಹಾಗೂ ಆರ್‍ಎಸ್‍ಎಸ್ ಸಹ ಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ಸಂವಿಧಾನದ ಪೀಠಿಕೆಯಲ್ಲಿ ಯಾರೂ ಕೈ ಆಡಿಸಬಾರದು. ತಿದ್ದುಪಡಿ
ಮಾಡಲು ಯಾವುದೇ ಅವಕಾಶವೇ ಇಲ್ಲ. ಕಲಂ ಹಾಗೂ ಅನುಚ್ಛೇದಗಳನ್ನು ಮಾತ್ರ ತಿದ್ದುಪಡಿ ಮಾಡಬಹುದಾಗಿದೆ. ಆದರೆ, ಅಂದಿನ
ಪ್ರಧಾನಿ ಇಂದಿರಾ ಗಾಂಧಿಯವರು ಅನೈತಿಕವಾಗಿ ಮತ್ತು ರಾಜಾರೋಷವಾಗಿ ಪೀಠಿಕೆಯಲ್ಲಿ ಕೈಯಾಡಿಸಿ ಜಾತ್ಯಾತೀತ ಮತ್ತು
ಸಮಾಜವಾದ ಎಂಬ ಎರಡು ಶಬ್ದಗಳನ್ನು ಸೇರ್ಪಡೆ ಮಾಡಿ ಈ ದೇಶದ ಸಂವಿಧಾನಕ್ಕೆ ಅಪಚಾರ ಮಾಡಿದ್ದರು ಎಂದು ದೂರಿದ್ದಾರೆ.

ಇಷ್ಟು ಮಾತ್ರವಲ್ಲದೇ ಆಲಹಾಬಾದ್ ಹೈಕೋರ್ಟ್ ಚುನಾವಣೆ ಅಕ್ರಮ ಎತ್ತಿಹಿಡಿದು ಬಂಧಿಸಲು ಆದೇಶ ನೀಡಿದ್ದನ್ನು ಸಹಿಸಲಾಗದೇ
ಹಾಗೂ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಈ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿ ಇಡೀ ದೇಶದ ವಿರೋಧ ಪಕ್ಷದ
ನಾಯಕರನ್ನೆಲ್ಲ ಬಂಧಿಸಿ ದೇಶವನ್ನೇ ಬಂಧಿಖಾನೆ ಮಾಡಿದ್ದರು. ಯಾವ ಸದನದಲ್ಲೂ ಚರ್ಚೆ ಮಾಡದೇ ಸಂವಿಧಾನದ ಪೀಠಿಕೆಯಲ್ಲಿ
ಈ ಎರಡು ಶಬ್ದಗಳನ್ನು ಸೇರಿಸಿದ ಕಾಂಗ್ರೆಸ್ ದೇಶಕ್ಕೆ ದೊಡ್ಡ ಅಪಚಾರ ಮಾಡಿದೆ. ಈ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ಸಚಿವ
ಪ್ರಿಯಾಂಕ್ ಖರ್ಗೆ ಸೇರಿ ಕಾಂಗ್ರೆಸ್ ಪಕ್ಷದವರು ಆರ್‍ಎಸ್‍ಎಸ್ ಬಗ್ಗೆ ಸುಳ್ಳು ಪುಂಗುವುದನ್ನು ನಿರಂತರ ಮಾಡುತ್ತಾ ಸುಳ್ಳನ್ನು
ಸತ್ಯವಾಗಿಸಲು ಹೊರಟಿದ್ದಾರೆ ಎಂದಿದ್ದಾರೆ.

ಆರ್‍ಎಸ್‍ಎಸ್‍ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಭೀಮಣ್ಣ ಮೇಟಿ ಅವರು ಆರ್‍ಎಸ್‍ಎಸ್
ಬಗ್ಗೆಯೇ ಹಗುರವಾಗಿ ಮಾತಾಡುತ್ತಿರುವುದು ಸೋಜಿಗದ ಸಂಗತಿಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *