ಚಿತ್ರದುರ್ಗ ಡಿ.14
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ರಾಜ್ಯದ ಅಭಿವೃದ್ಧಿ ಬಿಟ್ಟು ಬರೀ ನಾಟಿಕೋಳಿ ಚರ್ಚೆ ಆಗುತ್ತಿದೆ. ರಾಜಕೀಯ ಅಸ್ಥಿರತೆ ಮತ್ತು ದ್ವೇಷ ರಾಜಕೀಯದಿಂದ ಕರ್ನಾಟಕ ಅತ್ಯಂತ ಗಂಭೀರ ಆರ್ಥಿಕ ಪರಿಸ್ಥಿತಿಯಲ್ಲಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ್ ಬೇದ್ರೆ ತಿಳಿಸಿದ್ದಾರೆ. ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವ ಬದಲಿಗೆ ತಮ್ಮ ವಿರುದ್ಧ ಮಾತನಾಡುವವರ ಹಣಿಯಲು ಈ ಕಾಯ್ದೆ ತರಲಾಗಿದೆ. ಜನೌಷಧೀಯ ಕೇಂದ್ರಗಳ ವಿಚಾರವಾಗಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಬಹಳಷ್ಟು ಕಟುವಾಗಿ ಹೈಕೋರ್ಟ್ ಟೀಕೆ ಮಾಡಿದೆ. ನೋಡಬೇಕು ಈಗ ಈ ನ್ಯಾಯಾಧೀಶರ ಮೇಲೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೇಳಿ ಹಕ್ಕುಚ್ಯುತಿ ಮಾಡಬಹುದು ಎಂದರು. ಎರಡೂವರೆ ಲಕ್ಷ ಹುದ್ದೆಗಳು ಖಾಲಿಯಿವೆ. ಇವರು ಬಂದು ಎರಡೂವರೆ ವರ್ಷ ಆಯ್ತು. ಸರಕಾರ ದಿವಾಳಿ ಆಗಿದೆ. ಹೀಗಾಗಿ ಹುದ್ದೆಗಳನ್ನು ತುಂಬಿಕೊಳ್ಳುತ್ತಿಲ್ಲ. ಐದಾರು ವರ್ಷಗಳಿಂದ ಕೇಂದ್ರ ಸರ್ಕಾರ ಪ್ರತಿ ತಿಂಗಳು 50 ಸಾವಿರ ಹುದ್ದೆ ತುಂಬಿಕೊಳ್ಳುತ್ತಿದೆ ಎಂದು ನುಡಿದರು. ವೋಟ್ ಚೋರಿ ಯಾವ್ಯಾವಾಗ ಆಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಡಾ.ಅಂಬೇಡ್ಕರ್ ಸೋಲಿನ ಸಂದರ್ಭದಲ್ಲೇ ವೋಟ್ ಚೋರಿ ಆಗಿದೆ. ಆಳಂದ ಕ್ಷೇತ್ರದ ಕುರಿತು ಚಾರ್ಜ್ ಶೀಟ್ ಮಾಹಿತಿ ಇಲ್ಲ. ಅಲ್ಲಿಯ ಆರೋಪ ಕುರಿತು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ ಎಂದರು.