
ಚಿತ್ರದುರ್ಗ ಏ. 10
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಶ್ಯಾಂ ಪ್ರಸಾದ್ ಮುಖರ್ಜಿ, ಪಂಡಿತ್ ದೀನ್‍ದಯಾಳ್ ಇವರುಗಳು ಜನಸಂಘ ಸ್ಥಾಪಿಸಿ ಮುನ್ನಡೆಸಿಕೊಂಡು ಬಂದರು. 1980ರಲ್ಲಿ ಜನಸಂಘವನ್ನು ಬಿಜೆಪಿ. ಪಕ್ಷವನ್ನಾಗಿ ಕಟ್ಟಿದ ಮೇಲೆ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿತು. ಇಲ್ಲಿನ ಕಾರ್ಯಕರ್ತರು ಇದರ ಬಗ್ಗೆ ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಜನತೆಗೆ ತಿಳಿಸುವಂತ ಕಾರ್ಯವನ್ನು ಮಾಡಿದಾಗ ನಮ್ಮ ಪಕ್ಷ ಇನ್ನಷ್ಟು ಬೆಳೆಯಲು ಸಾಧ್ಯವಿದೆ ಎಂದು ವಿಭಾಗ ಸಹ ಪ್ರಭಾರಿಗಳಾದ ಎ.ಮುರುಳಿ ತಿಳಿಸಿದರು.



ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಬಿಜೆಪಿ ಚಿತ್ರದುರ್ಗ ನಗರ ಮಂಡಲದವತಿಯಿಂದ ನಗರದ ಮುರುಘ ರಾಜೇಂದ್ರ ಮಠದ ಅಲ್ಲಮ ಪ್ರಭು ಸಭಾಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ ಜನ್ಮದಿನದ ಪ್ರಯುಕ್ತ ಪ್ರಶಿಕ್ಷಣ ಮಹಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಿಯಾದ ಬಳಿಕ ಸರ್ವ ಶಿಕ್ಷ ಅಭಿಯಾನ, ಚುತಷ್ಪಥ ಹೆದ್ದಾರಿ ನಿರ್ಮಾಣವಾಯಿತು. ನರೇಂದ್ರಮೋದಿ ಪ್ರಧಾನಿಯಾದ ಮೇಲೆ ಇಡಿ ವಿಶ್ವವೇ ಮೆಚ್ಚವ ರೀತಿಯಲ್ಲಿ ಭಾರತವನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಪ್ರಶಂಶಿಸಿದರು.
ಇಲ್ಲಿ ನಡೆಯುವಂತ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ವಿಷಯವನ್ನು ತಿಳಿದುಕೊಂಡು ನಿಮ್ಮ ಗ್ರಾಮಗಳಿಗೆ ಹೋದಾಗ ಅದನ್ನು ಇತರರಿಗೆ ತಿಳಿಸುವಂತ ಕಾರ್ಯವನ್ನು ಮಾಡಿದಾಗ ಪಕ್ಷ ಮುನ್ನೆಡೆಯಲು ಸಾಧ್ಯವಿದೆ. ಕಾರ್ಯಕರ್ತರು ಪ್ರಶಿಕ್ಷಣವನ್ನು ಪಡೆಯುವ ಅಗತ್ಯಯಿದೆ. ಇದರಲ್ಲಿ ಭಾಗವಹಿಸುವುದರ ಮೂಲಕ ನಾಯಕತ್ವ ಗುಣವನ್ನು ಹೊಂದುತ್ತಾರೆ. ಭೌತಿಕವಾಗಿ ಗುಣಮಟ್ಟ ಬೆಳೆಯುತ್ತದೆ. ಜನರ ಜೊತೆಯಲ್ಲಿ ಮಾತನಾಡುವ ಗುಣವನ್ನು ಬೆಳಸುತ್ತದೆ ಎಂದರು.
ಪ್ರಶಿಕ್ಷಣ ಅಭಿಯಾನದ ಜಿಲ್ಲಾ ಸಂಯೋಜಕರಾದ ಜಿ.ಎಚ್ ಮೋಹನ್‍ಕುಮಾರ್ ಮಾತನಾಡಿ, ಬಿಜೆಪಿಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಶಿಕ್ಷಣ ಮಹಾ ಆಭಿಯಾನ ಮಹತ್ವದ್ಧಾಗಿದೆ, ಇದರಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ದೇಶದ ಪ್ರಧಾನ ಮಂತ್ರಿಯವರು ಸಹಾ ಭಾಗವಹಿಸಲಿದ್ದಾರೆ. ದಿನದ 24 ಗಂಟೆ ಇದರಲ್ಲಿ ಭಾಗವಹಿಸುವುದರ ಮೂಲಕ ಪಕ್ಷದ ಆಗುಹೋಗುಗಳ ಬಗ್ಗೆ ತಿಳಿಯಲು ಸಹಾಯ ವಾಗುತ್ತದೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತನನ್ನು ವ್ಯಕ್ತಿಯನ್ನಾಗಿ ಮಾಡುತ್ತದೆ. ರಾಜ್ಯದಲ್ಲಿ 654 ತರಬೇತಿಗಳು ಜಿಲ್ಲೆಯಲ್ಲಿ 18 ತರಬೇತಿಗಳು ನಡೆಯಲಿವೆ. ಇದರಲ್ಲಿ 7 ವಿಷಯದ ಬಗ್ಗೆ ತಿಳಿಸಲಾಗುತ್ತದೆ. ಇದರ ಬಗ್ಗೆ ತಿಳಿದುಕೊಂಡು ಬೇರೆಯವರಿಗೆ ತಿಳಿಸಿ ಎಂದು ಕರೆ ನಿಡಿದರು.
ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ ಕುಮಾರಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಿಳಿಸುವಂತ ಕಾರ್ಯವನ್ನು ಮಾಡಬೇಕಿದೆ, ಇಲ್ಲಿ ತಿಳಿಸುವಂತ ವಿಚಾರಗಳನ್ನು ಬೇರೆಯವರಿಗೆ ತಿಳಿಸುವುದರ ಮೂಲಕ ಪಕ್ಷವನ್ನು ಬಲಪಡಿಸುವಂತೆ ಮನವಿ ಮಾಡಿದರು.
ಚಿತ್ರದುರ್ಗ ಮಾಜಿ ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿಯವರು ಪಂಡಿತ್ ದೀನ್ ದಯಾಳ್ ಉಪಾಧ್ಯಾ ಯರವರ ಜನ್ಮದಿನದ ಪ್ರಯುಕ್ತ ಪ್ರಶಿಕ್ಷಣ ಮಹಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯ ಕ್ರಮದಲ್ಲಿ ಮಾಜಿ ಅಧ್ಯಕ್ಷ ಟಿ.ಜಿ.ನರೇಂಧ್ರನಾಥ್, ಜಿಲ್ಲಾ ಉಪಾಧ್ಯಕ್ಷ ಡಾ.ಸಿದ್ಧಾರ್ಥ, ಪ್ರಧಾನ ಕಾರ್ಯ ದರ್ಶಿಗಳಾದ ವೆಂಕಟೇಶ್‍ಯಾದವ್, ಮಾಧುರಿ ಗೀರಿಶ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಮ ದಾಸ್, ನಗರಾಭೀವೃದ್ದಿಮ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರೇಶ್ ಸಿದ್ದಾಪುರ, ನಗರಾಧ್ಯಕ್ಷರಾದ ಹೆಚ್.ಎನ್ ಲೋಕೇಶ್‍ಕುಮಾರ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್ ಸೇರಿದಂತೆ ನಗರ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಪ್ರಮುಖರು, ಶಕ್ತಿಕೇಂದ್ರ ಪ್ರಮುಖರು, ಬಿಎಲ್‍ಎ 2 ಬೂತ್ ಅಧ್ಯಕ್ಷರು ಉಪಸ್ಥಿತರಿದ್ದರು.