ಚಿತ್ರದುರ್ಗ ಸೆ. 21: ಎಲ್ಲಾ ದಾನಗಳಲ್ಲಿ ರಕ್ತದಾನ ಮಹತ್ವವನ್ನು ಪಡೆದಿದೆ, ಏಕೆಂದರೆ ರಕ್ತವನ್ನು ಕೃತಕವಾಗಿ ಮಾಡಲು ಬರುವುದಿಲ್ಲ ಅಲ್ಲದೆ ಬೇರೆ ಯಾವುದೇ ಪ್ರಾಣಿಗಳ ರಕ್ತವನ್ನು ಹಾಕಲು ಬರುವುದಿಲ್ಲ ಈ ಹಿನ್ನಲೆಯಲ್ಲಿ ಮಾನವರಾದ ನಾವುಗಳು ನಮ್ಮ ಜೀವಿತಾವಧಿಯಲ್ಲಿ ರಕ್ತವನ್ನು ದಾನ ಮಾಡಬೇಕಿದೆ ಎಂದು ಸಂಸದರಾದ ಗೋವಿಂದ ಕಾರಜೊಳ ತಿಳಿಸಿದರು.
ಬಿಜೆಪಿ ನಗರ ಯುವ ಮೋರ್ಚಾವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 74ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಕ್ತಕ್ಕೆ ಪರ್ಯಾಯವಾಗಿ ಏನು ಇಲ್ಲ ನಮ್ಮ ಚಿತ್ರದುರ್ಗದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದೆ ಇಲ್ಲಿ ಅಫಘಾತವಾದರೆ ಅವರಿಗೆ ರಕ್ತದ ಅನಿವಾರ್ಯತೆ ಇರುತ್ತದೆ ಈ ಹಿನ್ನಲೆಯಲ್ಲಿ ಆಗ ರಕ್ತವನ್ನು ಹುಡುಕುವ ಬದಲು ನಮ್ಮ ಮನೆಗಳಲ್ಲಿ ಎನಾದರೂ ಶುಭ ಕಾರ್ಯವಾದರೆ ಅದರ ನೆನಪಿಗಾಗಿ ರಕ್ತವನ್ನು ದಾನ ಮಾಡುವ ಅಭ್ಯಾಸವನ್ನು ಬೆಳಸಿಕೊಳ್ಳಬೇಕಿದೆ ಇದರಿಂದ ಬೇರೆಯವರಿಗೆ ಸಹಾಯವಾಗಲಿದೆ ಎಂದರು.
ಮೋದಿಯವರು ದೇಶದ ಪ್ರಧಾನಮಂತ್ರಿಯಾದ ಮೇಲೆ ದೇಶ ಪ್ರಗತಿಯನ್ನು ಕಾಣುತ್ತಿದೆ, ಬೇರೆ ರಾಷ್ಟ್ರಗಳು ಸಹಾ ನಮ್ಮ ಜೊತೆ ವಿವಿಧ
ರೀತಿಯ ಮಾತುಕಥೆಯನ್ನು ಮಾಡುತ್ತಿವೆ, ದೇಶದ ಆರ್ಥಿಕ ಪರಿಸ್ಥಿತಿ ವೃದ್ದಿಯಾಗಿದೆ. ಕಳೆದ 10 ವರ್ಷದಿಂದ ದೇಶದಲ್ಲಿ ವಿವಿಧ ರೀತಿಯ
ಬದಲಾವಣೆಯನ್ನು ಕಾಣಲಾಗುತ್ತಿದೆ. ಇದೇ ರೀತಿ ಮುಂದಿನ 15 ವರ್ಷಗಳು ಸಹಾ ದೇಶ ಮೋದಿಯವರ ಸಾರಥ್ಯದಲ್ಲಿ ಮುನ್ನಡೆಯಲಿದೆ
ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಹೆಚ್ ತಿಪ್ಪಾರೆಡಿ,್ಡ ಜಿಲ್ಲಾದ್ಯಕ್ಷರಾದ ಎ ಮುರಳಿ. ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್,
ಸುರೇಶ್ ಸಿದ್ದಾಪುರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ಜಿಲ್ಲಾ ಖಂಜಾಚಿ ಮಾಧುರಿ ಗೀರೀಶ್, ನಗರ ಯುವ ಮೊರ್ಚಾ ಅದ್ಯಕ್ಷ
ರಾಮು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ವಿ.ಎಸ್.ಹಳ್ಳಿ, ಗ್ರಾಮಾಂತರ ಅಧ್ಯಕ್ಷ ವಿರುಷ ನಗರ ಕಾರ್ಯದರ್ಶಿ ಪ್ರದೀಪ್, ನಗರ
ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರುಣ್ ವರುಣ್, ಮಂಜುನಾಥ್, ಪವನ್ ಕುಮಾರ್, ಅಭೀಲಾಷ್, ರಾಘು ಮಂಜುನಾಥ್
ಆಚಾರ್, ಶಿವಣ್ಣಚಾರ್, ಜಿಲ್ಲಾ ಕಾರ್ಯದರ್ಶಿ ರಜನಿ, ಜಿಲ್ಲಾ ಉಪಾಧ್ಯಕ್ಷ ಚಂದ್ರಕಾ ಲೋಕನಾಥ್ ಸೇರಿದಂತೆ ಪಕ್ಷದ ಪ್ರಮುಖರು
ಭಾಗವಹಿಸಿದ್ದರು.