ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಆಪರೇಷನ್ ಸಿಂಧೂರ ಯಶಸ್ವಿ ಮಾಡಿದ ಸೈನಿಕರಿಗೆ ಧನ್ಯವಾದ ಅರ್ಪಣೆಗಾಗಿ ರಕ್ತದಾನ ಶಿಬಿರ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮೇ 15 : ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಆಪರೇಷನ್ ಸಿಂಧೂರ ಯಶಸ್ವಿ ಮಾಡಿದ ನಮ್ಮ ಸೈನಿಕರಿಗೆ ಧನ್ಯವಾದ ಅರ್ಪಣೆಗಾಗಿ ರಕ್ತದಾನ ಶಿಬಿರವನ್ನು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕಾರೇಹಳ್ಳಿ ಉಲ್ಲಾಸ್ ಅವರ ನೇತೃತ್ವದಲ್ಲಿ ರಕ್ತದಾನ ಶಿಬಿರವನ್ನು
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಈ ಶಿಬಿರದಲ್ಲಿ 74ಕ್ಕೆ ಹೆಚ್ಚು ಯುವಕ ರಕ್ತದಾನಿಗಳು ತಮ್ಮ ರಕ್ತವನ್ನು ದಾನ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಸಾಧಿಕ್, ರಾಜ್ಯ ಕಾರ್ಯದರ್ಶಿಗಳಾದ ವೈಶಾಖ ಯಾದವ್
ಚಿತ್ರದುರ್ಗ ವಿಧಾನಸಭಾ ಯುವ ಕಾಂಗ್ರೆಸ್‍ನ ಅಧ್ಯಕ್ಷರು ಆದರ್ಶ್ , ಪವನ್, ವೀರೇಶ್ ,ಗಿರೀಶ್ , ಧನಂಜಯ ಹಾಗೂ ಚಿತ್ರದುರ್ಗ
ಗ್ರಾಮಾಂತರ ಅಧ್ಯಕ್ಷರಾದ ಮಹಾಂತೇಶ್ , ರೋಹನ್ ನಗರ ಅಧ್ಯಕ್ಷರಾದ ಪವನ್ ಜಿಲ್ಲಾ ಕಾಂಗ್ರೆಸ್ ಪ್ರಧಾನ

ಕಾರ್ಯದರ್ಶಿಗಳಾದ ಸಂಪತ ಕುಮಾರ್ ಮಧು ಗೌಡ ಮೈಲಾರಪ್ಪ ನರಸಿಂಹ ಹಾಗೂ ಅನೇಕ ಯುವ ಮುಖಂಡರುಗಳು
ಭಾಗವಹಿಸಿದ್ದರು.

Leave a Reply

Your email address will not be published. Required fields are marked *