ಇತ್ತೀಚಿನ ದಿನಮಾನದಲ್ಲಿ ಮೊಬೈಲ್ ಧಾಳಿಯಿಂದಾಗಿ ರಕ್ತ ಸಂಬಂಧಗಳು ಹಾಳಾಗುತ್ತಿವೆ.

ಚಿತ್ರದುರ್ಗ ಆ. 24

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಇತ್ತೀಚಿನ ದಿನಮಾನದಲ್ಲಿ ಮೊಬೈಲ್ ಧಾಳಿಯಿಂದಾಗಿ ರಕ್ತ ಸಂಬಂಧಗಳು ಹಾಳಾಗುತ್ತಿವೆ, ಮೊಬೈಲ್‍ನಲ್ಲಿ ಶುಭಾಷಯ, ಹಾಯ್, ಶುಭಕೋರುವ ಜನತೆ ಎದುರಿಗೆ ಬಂದಾಗ ಅವರನ್ನು ಗುರುತು ಹಿಡಿಯುವುದಿಲ್ಲ ಅಲ್ಲದೆ ಮಾತನಾಡಿಸುವುದಿಲ್ಲ ಎಂದು ಟಿ.ಎನ್.ಚಿಕ್ಕವೀರಯ್ಯರವರ ವಿಷಾಧಿಸಿದ್ದಾರೆ.

ಶ್ರೀ ಸದ್ಗುರು ಕಬೀರಾನಂದಾಶ್ರಮ ಹಾಗೂ ಶ್ರೀ ಕುಂಬಾರ ಗುಂಡಯ್ಯ ಮಹಾ ಸಂಸ್ಥಾನ ಚಿತ್ರದುರ್ಗ ಇವರ ಸಂಹಯೋಗದೊಂದಿಗೆ ಭಾನುವಾರ ನಗರದ ಕಬೀರಾನಂದ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ ಮೊಬೈಲ್ ಬಿಡಿ, ಪುಸ್ತಕ ಹಿಡಿ ಅರಿವಿನ ಅಭಿಯಾನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೊಬೈಲ್ ಸಮಸ್ಯೆ ಬರಿ ನಮ್ಮ ತಾಲ್ಲೂಕು, ಜಿಲ್ಲೆ, ರಾಜ್ಯ ದೇಶದ ಸಮಸ್ಯೆ ಅಲ್ಲ ಇದು ವಿಶ್ವದ ಸಮಸ್ಯೆಯಾಗಿದೆ. ಇತ್ತೀಚಿನ ದಿನಮಾನದಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದ್ದು ಪುಸ್ತಕವನ್ನು ಓದುವಂತ ಸಂಸ್ಕøತಿ ಕಡಿಮೆಯಾಗುತ್ತಿದೆ.

ಇದರಲ್ಲಿ ಯುವ ಜನತೆ ಹೆಚ್ಚಾಗಿ ಮೊಬೈಲ್ ಬಳಕೆಯ ಪ್ರಮಾಣ ಹೆಚ್ಚಾಗಿದೆ. ಇತ್ತೀಚಿನ ದಿನಮಾನದಲ್ಲಿ ಶೇ.70 ರಷ್ಟು ಜನತೆ ಮೊಬೈಲ್ ಬಳಕೆಯನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಮೊಬೈಲ್ ಸಂಸ್ಕøತಿಯಿಂದಾಗಿ ಜನತೆ ಮಾತನಾಡುವ ಪ್ರವೃತ್ತಿ ಕಡಿಮೆಯಾಗಿದೆ ಎಂದು ವಿಷಾಧಿಸಿದರು.ಮನೆಯಲ್ಲಿ ತಂದೆ-ತಾಯಿ, ಮಕ್ಕಳು ಇದ್ದರೆ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಹಿಡಿದು ಮಾತನಾಡುವ ಸಂಸ್ಕøತಿ ಕಡಿಮೆಯಾಗುತ್ತಿದೆ.

ಮೊಬೈಲ್ ಬರುವುದಕ್ಕಿಂತ ಮುಂಚೆ ಮಾನವರ ರಕ್ತ ಸಂಬಂಧಗಳು ಉತ್ತಮವಾಗಿ ಇದ್ದವು ಅಲ್ಲಿ ಚಿಕ್ಕಮ್ಮ, ಚಿಕ್ಕಪ್ಪ, ದೊಡ್ಡಪ್ಪ, ದೊಡ್ಡಮ್ಮ, ಅತ್ತೆ, ಮಾವ, ತಾತ, ಅಜ್ಜಿ, ಸೇರಿದಂತೆ ವಿವಿಧ ರೀತಿಯ ಸಂಬಂಧಗಳು ಇದ್ದವು ಆದರೆ ಈ ಮೊಬೈಲ್ ಬಂದಾಗಿನಿಂದ ಈ ರೀತಿಯ ಸಂಬಂಧಗಳು ಕಡಿಮೆಯಾಗಿದೆ. ಮೊಬೈಲ್ ಎನ್ನುವುದು ಎಲ್ಲವನ್ನು ಮರೆಸುವ ಸಾಧನವಾಗಿದೆ ಎಂದರೆ ತಪ್ಪಾಗಲಾರದು,ಇದರಿಂದಾಗಿ ಜನತೆಯಲ್ಲಿ ಮೊಬೈಲ್ ಪೋಬಿಯಾ ಪ್ರಾರಂಭವಾಗಿದೆ.

ಪುಸ್ತಕವನ್ನು ಓದುವಂತ ಸಂಸ್ಕøತಿ ಕಡಿಮೆಯಾಗುತ್ತಿದೆ. ಮಾನವ ತಾನು ಹೋಗುವ ಕಡೆಯಲ್ಲಿಯೂ ಸಹಾ ಮೊಬೈಲ್‍ನ್ನು ತೆಗೆದುಕೊಂಡು ಹೋಗುತ್ತಾನೆ, ಅದು ಅಡುಗೆ ಮನೆ, ಕೊಠಡಿ, ಟ್ಲಾಯಲೆಂಟ್, ದೇವರ ಮನೆಯಾಗಿ ರಬಹುದು ಅಲ್ಲಿ ಎಲ್ಲಾ ಕಡೆಯಲ್ಲಿಯೂ ಸಹಾ ಮೊಬೈಲ್ ಪಾತ್ರವನ್ನು ವಹಿಸಿದೆ ಎಂದರು.ಮೊಬೈಲ್ ಬಳಕೆ ಸರಿಯಾದ ರೀತಿಯಲ್ಲಿ ಮಾತ್ರ ಆಗಬೇಕಿದೆ ಈಗ ಸದುಪಯೋಗಕ್ಕಿಂತ ದುರುಪಯೋಗ ಹೆಚ್ಚಾಗುತ್ತಿದೆ.

ಇದರ ಬಗ್ಗೆ ಯುವ ಜನತೆ ಗಮನ ಹರಿಸಬೇಕಿದೆ. ಸಾಧ್ಯವಾದಷ್ಟು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ತಮ್ಮ ಓದಿನ ಕಡೆಗೆ ಗಮನ ನೀಡಬೇಕಿದೆ. ತಮ್ಮ ಮುಂದಿನ ಗುರಿಯತ್ತ ಗಮನ ನೀಡಿ ಅದರ ಯಶಸ್ಸಿಗೆ ಸಾಧನೆಯನ್ನು ಮಾಡಬೇಕಿದೆ ಎಂದು ಟಿ.ಎನ್.ಚಿಕ್ಕವೀರಯ್ಯರವರ ಕರೆ ನೀಡಿದರು.

ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಶ್ರೀ ಸದ್ಗುರು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು, ಪುಸ್ತಕವನ್ನು ಓದುವುದರಿಂದ ನಮ್ಮ ಜ್ಞಾನ ವೃದ್ದಿಯಾಗುತ್ತದೆ, ಆದರೆ ಮೊಬೈಲ್ ಹಿಡಿಯುವುದರ ಮೂಲಕ ನಮ್ಮ ಜ್ಞಾನವನ್ನು ಕಡಿಮೆ ಮಾಡಲಾಗುತ್ತದೆ, ಪುಸ್ತಕದ ಓದು ಮನೆಯ ಊಟ ಇದ್ದಂತೆ ಮೊಬೈಲ್ ಓದು ಹೋಟೇಲ್ ಊಟ ಇದ್ದಂತೆ ಹೋಟೇಲ್ ಊಟವನ್ನು ಪ್ರತಿ ದಿನ ಮಾಡಬಾರದು ಆವಾಗ ಆವಾಗ ಮಾತ್ರ ಮಾಡಬೇಕು ಆದರೆ ಮನೆಯ ಊಟವನ್ನು ಪ್ರತಿ ದಿನ ಮಾಡಬೇಕು ಇದರ ಅರ್ಥ ಮುಸ್ತಕವನ್ನು ಸದಾ ಓದುವ ಪ್ರವೃತ್ತಿ ಬೆಳಸಿಕೊಳ್ಳಬೇಕು, ಅನಿವಾರ್ಯ ಇದ್ದಾಗ ಮಾತ್ರ ಮೊಬೈಲ್ ಬಳಕೆ ಮಾಡಬೇಕಿದೆ ಎಂದರು. 

ಕಾರ್ಯಕ್ರಮದಲ್ಲಿ ಶ್ರೀ ಕುಂಬಾರ ಗುಂಡಯ್ಯ ಮಹಾ ಸಂಸ್ಥಾನದ ಸಿ.ಸಿ.ಬಸವಮೂರ್ತಿ ಕುಂಬಾರ ಗುಂಡಯ್ಯ ಶ್ರೀಗಳು, ಶಿಕ್ಷಕರು, ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಂಜಾಚಿ ಗೀತಾ ಭರಮಸಾಗರ ಕಲಾವಿದರಾದ ಮೊರಾರ್ಜಿ, ನವೀನ್ ಮಸ್ಕಲ್ ಸೇರಿದಂತೆ ಇತರರು ಭಾಗವಹಿಸಿದ್ದರು. 

Views: 10

Leave a Reply

Your email address will not be published. Required fields are marked *