ಲೋಕಸಭಾ ಚುನಾವಣೆ ಅಂಗವಾಗಿ ಏ.25 ಮತ್ತು ಏ.26ರಂದು ಬಿಎಂಟಿಸಿ ಬಸ್ಗಳು ಬೆಂಗಳೂರು ಬಿಟ್ಟು ಹೊರ ಜಿಲ್ಲೆಗಳಾದ ಮೈಸೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗಕ್ಕೂ ಸಂಚಾರ ಮಾಡಲಿವೆ.
![](https://samagrasuddi.co.in/wp-content/uploads/2024/04/image-221.png)
ಬೆಂಗಳೂರು (ಏ.25): ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ಏ.26ರಂದು ನಡೆಯುವ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗಳನ್ನು ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ತುಮಕೂರು, ಚಿತ್ರದುರ್ಗ, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಇಂದು ರಾತ್ರಿ ವೇಳೆ(ಏ.25) 575 ಹಾಗೂ (ನಾಳೆ ಏ.26) ಬೆಳಗ್ಗೆಯಿಂದ ರಾತ್ರಿವರೆಗೆ 465 ಹೆಚ್ಚುವರಿ ಬಿಎಂಟಿಸಿ ಬಸ್ಗಳು ಸಂಚಾರ ಮಾಡಲಿವೆ ಎಂದು ಬಿಎಂಟಿಸಿ ತಿಳಿಸಿದೆ.
ಲೋಕಸಭಾ ಚುನಾವಣೆಯ ಕರ್ನಾಟಕದ ಮೊದಲ ಹಂತದ 14 ಜಿಲ್ಲೆಗಳಲ್ಲಿನ ಬೆಂಗಳೂರಿನಲ್ಲಿರುವ ಮತದಾರರು ತಮ್ಮ ಊರುಗಳಿಗೆ ತೆರಳಲು ಅನುಕೂಲ ಆಗುವಂತೆ ಹೆಚ್ಚುವರಿಯಾಗಿ ಬಿಎಂಟಿಸಿ ಬಸ್ಗಳ ಸೇವೆಯನ್ನು ನೀಡಲಾಗುತ್ತಿದೆ. ಕೆಎಸ್ಆರ್ಟಿಸಿ ಬಸ್ಗಳು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ಗಳ ಸಂಚಾರ ಮಾಡಲಾಗುತ್ತದೆ. ಏ.25ರಂದು 575 ಹಾಗೂ ಏ.26ರಮದು 465 ಬಿಎಂಟಿಸಿ ಬಸ್ಗಳು ತನ್ನ ವ್ಯಾಪ್ತಿಯನ್ನು ಬಿಟ್ಟು ಹೊರ ಜಿಲ್ಲೆಗಳ ಕೆಎಸ್ಆರ್ಟಿಸಿ ಬಸ್ ಸಂಚರಿಸುವ ವ್ಯಾಪ್ತಿಗೆ ಸಂಚಾರ ಸೇವೆಯನ್ನು ನೀಡಲಾಗುತ್ತದೆ. ಇನ್ನು ಏ.27ರಂದು ಮೈಸೂರು ನಗರಕ್ಕೆ ಮಾತ್ರ ಹೆಚ್ಚುವರಿಯಾಗಿ 40 ಬಿಎಂಟಿಸಿ ಬಸ್ಗಳು ಸಂಚಾರ ಮಾಡಲಿವೆ ಎಂದು ಸಾರಿಗೆ ಸಂಸ್ಥೆಯು ಮಾಹಿತಿ ನೀಡಿದೆ.
ಎಲ್ಲೆಲ್ಲಿ ವಿಶೇಷ ಬಸ್ ಸೇವೆ?
- – ಮಧುಗಿರಿ, ಚಿಕ್ಕಮಗಳೂರು, ಪಾವಗಡ- 50 ಬಸ್ಗಳು
- – ಮಂಡ್ಯ , ಮೈಸೂರು, ಮಳವಳ್ಳಿ, ಕೊಳ್ಳೆಗಾಲ,ಮಳವಳ್ಳಿ ಟಿ.ನರಸೀಪುರ- 100 ಬಿಎಂಟಿಸಿ ಬಸ್ಗಳು
- – ತುರವೇಕೆರೆ, ಹಾಸನ ,ಚಿಕ್ಕಬಳ್ಳಾಪುರ, ಹೊಳೆನರಸೀಪುರ- 80
- – ಚಿತ್ರದುರ್ಗ, ಹೊಸದುರ್ಗ, ಮಳವಳ್ಳಿ, ಕೊಳ್ಳೆಗಾಲ, ಚಳ್ಳಕೆರೆ- 100
- – ಕೋಲಾರ , ಮಾಲೂರು, ಗೌರಿಬಿದನೂರು, ಮುಳಬಾಗಿಲು, ಶಿಡ್ಲಘಟ್ಟ, ಬಾಗೆಪಲ್ಲಿ- 100
- – ತುಮಕೂರು, ಶಿರೂರು, ಹಿರಿಯೂರು, ದಾವಣಗೆರೆ, ಶಿವಮೊಗ್ಗ – 130
ಬಸ್ಗಳು ಎಲ್ಲಿಂದ ಹೊರಡಲಿವೆ?
– ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣ
– ಜಾಲಹಳ್ಳಿ ಕ್ರಾಸ್
– ಟಿನ್ ಪ್ಯಾಕ್ಟರಿ
– ಮೈಸೂರು ರೋಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣ (ಸ್ಯಾಟಲೈಟ್)
– ಕಲಾಸಿಪಾಳ್ಯ ಬಸ್ ನಿಲ್ದಾಣ
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1