ಅಂಚೆ ಕಚೇರಿಯಿಂದ ಬೊಂಬಾಟ್ ಯೋಜನೆ: ದಿನಕ್ಕೆ ಕೇವಲ ₹95 ಉಳಿತಾಯ ಮಾಡಿ, ಪಡೆಯಿರಿ ₹14 ಲಕ್ಷ!

ಬೆಲೆ ಏರಿಕೆಯ ಈ ಕಾಲದಲ್ಲಿ ಮುಂದಿನ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡುವುದು ಪ್ರತಿಯೊಬ್ಬರ ದೊಡ್ಡ ಚಿಂತೆಯಾಗಿದೆ. ಕಡಿಮೆ ಹೂಡಿಕೆಯಲ್ಲಿ, ಯಾವುದೇ ಅಪಾಯವಿಲ್ಲದೆ (Risk-free) ಅತ್ಯುತ್ತಮ ಲಾಭ ಮತ್ತು ಜೀವ ವಿಮಾ ಭದ್ರತೆ ಒದಗಿಸುವ ಅದ್ಭುತ ಯೋಜನೆಯೊಂದನ್ನು ಭಾರತೀಯ ಅಂಚೆ ಇಲಾಖೆ (Post Office) ಗ್ರಾಮೀಣ ಜನತೆಗಾಗಿ ಪರಿಚಯಿಸಿದೆ. ಅದೇ ‘ಗ್ರಾಮ ಸುಮಂಗಲ್ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆ’ (Gram Sumangal Rural Postal Life Insurance).

ಕೇಂದ್ರ ಸರ್ಕಾರದ ಭದ್ರತೆ ಹೊಂದಿರುವ ಈ ಯೋಜನೆಯಲ್ಲಿ ಪ್ರತಿದಿನ ಕೇವಲ 95 ರೂಪಾಯಿ ಉಳಿತಾಯ ಮಾಡಿದರೆ, ಪಾಲಿಸಿ ಮುಕ್ತಾಯದ ವೇಳೆಗೆ ಬರೋಬ್ಬರಿ 14 ಲಕ್ಷ ರೂಪಾಯಿಗಳವರೆಗೆ ಆಕರ್ಷಕ ಮೊತ್ತವನ್ನು ಪಡೆಯಬಹುದು.

ಯೋಜನೆಯ ಪ್ರಮುಖ ಆಕರ್ಷಣೆಗಳು:

  • ಮನಿ-ಬ್ಯಾಕ್ (Money-Back) ಸೌಲಭ್ಯ: ಇದೊಂದು ವಿಶಿಷ್ಟವಾದ ಮನಿ-ಬ್ಯಾಕ್ ಪಾಲಿಸಿಯಾಗಿದ್ದು, ನಿಗದಿತ ಅವಧಿಗಳಲ್ಲಿ ಹೂಡಿಕೆದಾರರಿಗೆ ಹಣ ಮರುಪಾವತಿಯಾಗುತ್ತಿರುತ್ತದೆ.
  • ವಿಮಾ ರಕ್ಷಣೆ: ಗರಿಷ್ಠ ₹10 ಲಕ್ಷದವರೆಗೆ ಜೀವ ವಿಮಾ ರಕ್ಷಣೆ ಲಭ್ಯವಿದ್ದು, ಹೂಡಿಕೆದಾರರ ಕುಟುಂಬಕ್ಕೆ ಭದ್ರತೆ ನೀಡುತ್ತದೆ.
  • ಆರ್ಥಿಕ ನೆರವು: ಯೌವನದಲ್ಲಿಯೇ ಈ ಯೋಜನೆಗೆ ಸೇರಿದರೆ, ಮುಂದೆ ಮದುವೆ, ಮಕ್ಕಳ ಶಿಕ್ಷಣ ಅಥವಾ ಇತರ ಪ್ರಮುಖ ಆರ್ಥಿಕ ಅಗತ್ಯಗಳ ಸಮಯದಲ್ಲಿ ಕೈಗೆ ಹಣ ಸಿಗುವಂತೆ ಇದು ವಿನ್ಯಾಸಗೊಂಡಿದೆ.

ನ್ನುಓದಿ: ಅಪಾಯವಿಲ್ಲದ ಹೂಡಿಕೆ: ಹಣಕ್ಕೆ ರಕ್ಷಣೆ, ತಿಂಗಳಿಗೆ ಆದಾಯ; ಪೋಸ್ಟ್ ಆಫೀಸ್‌ನ ಈ ಸ್ಕೀಮ್ ಬಗ್ಗೆ ನಿಮಗೆ ಗೊತ್ತೇ?

ಯಾರು ಅರ್ಜಿ ಸಲ್ಲಿಸಬಹುದು? (ಅರ್ಹತೆಗಳು):

  • ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಹಿಳೆಯರು ಮತ್ತು ಪುರುಷರು ಈ ಯೋಜನೆಗೆ ಸೇರಲು ಅರ್ಹರು.
  • ಪಾಲಿಸಿದಾರರ ವಯಸ್ಸು 19 ರಿಂದ 40 (ಗರಿಷ್ಠ 45) ವರ್ಷದೊಳಗಿರಬೇಕು.

ಪಾಲಿಸಿಯ ಅವಧಿ ಮತ್ತು ಕ್ಯಾಶ್‌ಬ್ಯಾಕ್ ವಿವರ: ಗ್ರಾಮ ಸುಮಂಗಲ್ ಯೋಜನೆಯಲ್ಲಿ 15 ವರ್ಷ ಮತ್ತು 20 ವರ್ಷಗಳ ಎರಡು ಆಯ್ಕೆಗಳಿವೆ:

  • 15 ವರ್ಷಗಳ ಪಾಲಿಸಿ: 6ನೇ, 9ನೇ ಮತ್ತು 12ನೇ ವರ್ಷದ ಅಂತ್ಯದಲ್ಲಿ ವಿಮಾ ಮೊತ್ತದ 20% ರಷ್ಟು ಹಣ ಕ್ಯಾಶ್‌ಬ್ಯಾಕ್ (Cashback) ಆಗಿ ಸಿಗುತ್ತದೆ. ಉಳಿದ 40% ಹಣವು ಬೋನಸ್ ಜೊತೆಗೆ ಪಾಲಿಸಿ ಮುಕ್ತಾಯದ (Maturity) ಸಮಯದಲ್ಲಿ ಕೈಸೇರುತ್ತದೆ.
  • 20 ವರ್ಷಗಳ ಪಾಲಿಸಿ: 8ನೇ, 12ನೇ ಮತ್ತು 16ನೇ ವರ್ಷದ ಅಂತ್ಯದಲ್ಲಿ 20% ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಉಳಿದ 40% ಮೊತ್ತ ಮತ್ತು ಬೋನಸ್ ಮೆಚ್ಯೂರಿಟಿ ವೇಳೆ ಲಭ್ಯವಾಗುತ್ತದೆ.

ಗ್ರಾಮೀಣ ಜನರಿಗೆ ಆರ್ಥಿಕ ಸಾಕ್ಷರತೆ ಮತ್ತು ಭದ್ರತೆ ಒದಗಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆಯ ಈ ‘ಗ್ರಾಮ ಸುಮಂಗಲ್ ಯೋಜನೆ’ ನಿಜಕ್ಕೂ ಒಂದು ವರದಾನವಾಗಿದೆ.

Leave a Reply

Your email address will not be published. Required fields are marked *